Advertisment

ಕೇವಲ 32 ವರ್ಷ.. ಖ್ಯಾತ ಟ್ರಾವೆಲರ್, ಇನ್​ಫ್ಲೂಯೆನ್ಸರ್ ಅನುನಯ್ ಸೂದ್ ನಿಧನ

ಇನ್​ಸ್ಟಾಗ್ರಾಮದಲ್ಲಿ ತಮ್ಮ ಪ್ರಯಾಣದ ಬಗ್ಗೆ ತಿಳಿಸುವುದು, ವಿಡಿಯೋ ಪೋಸ್ಟ್ ಮಾಡುವುದರ ಮೂಲಕ ಅತ್ಯಂತ ಹೆಚ್ಚು ಖ್ಯಾತಿ ಪಡೆದಿದ್ದರು. ಇನ್​ಸ್ಟಾಗ್ರಾಮ್​ನಲ್ಲಿ 1.4 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಹಾಗೂ ಯೂಟ್ಯೂಬ್​ನಲ್ಲಿ 3.8 ಲಕ್ಷ ಸಬ್​ಸ್ಕೃಬರ್ಸ್​ ಅನ್ನು ಹೊಂದಿದ್ದರು.

author-image
Bhimappa
travel_influencer_Anunay_Sood_passes_away
Advertisment

ದುಬೈ ಮೂಲದ ಖ್ಯಾತ ಸೋಷಿಯಲ್ ಮೀಡಿಯಾ ಸ್ಟಾರ್, ಇನ್​ಫ್ಲೂಯೆನ್ಸರ್, ಫೋಟೋಗ್ರಾಫರ್, ಟ್ರಾವೆಲರ್​ ಅನುನಯ್ ಸೂದ್ (32) ಅವರು ನಿಧನರಾಗಿದ್ದಾರೆ. ಈ ಸಂಬಂಧ ಅವರ ಕುಟುಂಬಸ್ಥರು ಅಧಿಕೃತ ಮಾಹಿತಿಯನ್ನು ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. 

Advertisment

ಇನ್​ಫ್ಲೂಯೆನ್ಸರ್, ಟ್ರಾವೆಲರ್​ ಅನುನಯ್ ಸೂದ್ ಅವರು ನಿಧನದ ಸುದ್ದಿಯನ್ನ ದುಃಖಕರವಾಗಿದೆ. ಇದನ್ನು ನಿಮಗೆ ಅಧಿಕೃತವಾಗಿ ತಿಳಿಸುತ್ತಿದ್ದೇವೆ. ತಮ್ಮ ಈ ಗೌಪ್ಯತೆಯನ್ನು ಎಲ್ಲರೂ ಗೌರವಿಸಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಅನುನಯ್ ಸೂದ್ ನಿಧನಕ್ಕೆ ಕಾರಣ ಏನು ಎಂಬುದನ್ನು ದೃಢಪಡಿಸಿಲ್ಲ ಎಂದು ಹೇಳಲಾಗಿದೆ. 

ಕೊನೆಯುಸಿರೆಳೆದಿರುವುದನ್ನು ಅನುನಯ್ ಸೂದ್ ಅವರ ಇನ್​ಸ್ಟಾ ಅಕೌಂಟನಲ್ಲೇ ಪೋಸ್ಟ್ ಮಾಡಲಾಗಿದೆ. ಜನಸಂದಣಿಯನ್ನು ಸೇರುವುದನ್ನು ತಪ್ಪಿಸಲು ಹಾಗೂ ಅವರ ಕುಟುಂಬಸ್ಥರು, ಪ್ರೀತಿ ಪಾತ್ರರಿಗೆ ಅನುಕೂಲವಾಗಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲು ಪ್ರಾರ್ಥಿಸಿ ಎಂದು ಪೋಸ್ಟ್​ನಲ್ಲಿ ತಿಳಿಸಲಾಗಿದೆ.  

ಇದನ್ನೂ  ಓದಿ:BBK12; ಈ ವಾರ ಯಾರು ಸೇಫ್‌.. ರಕ್ಷಿತಾ, ರಾಶಿಕಾ, ಇಬ್ಬರಲ್ಲಿ ಒಬ್ರು ಔಟ್ ಆಗೋದು ಗ್ಯಾರಂಟಿನಾ?

Advertisment

travel_Anunay_Sood_passes_away

ಅನುನಯ್ ಸೂದ್ ಯಾರು..? 

2022, 2023 ಹಾಗೂ 2024ರ ಫ್ರೋಬ್ಸ್​ ಇಂಡಿಯಾ ಟಾಪ್​ 100 ಡಿಜಿಟಲ್​ ಸ್ಟಾರ್ಸ್​ ಪಟ್ಟಿಯಲ್ಲಿ ಹೆಸರು ಪಡೆದಿದ್ದರು. ತಮ್ಮ ಇನ್​ಸ್ಟಾಗ್ರಾಮದಲ್ಲಿ ತಮ್ಮ ಪ್ರಯಾಣದ ಬಗ್ಗೆ ತಿಳಿಸುವುದು, ವಿಡಿಯೋ ಪೋಸ್ಟ್ ಮಾಡುವುದರ ಮೂಲಕ ಅತ್ಯಂತ ಹೆಚ್ಚು ಖ್ಯಾತಿ ಪಡೆದಿದ್ದರು. ಇನ್​ಸ್ಟಾಗ್ರಾಮ್​ನಲ್ಲಿ 1.4 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಹಾಗೂ ಯೂಟ್ಯೂಬ್​ನಲ್ಲಿ 3.8 ಲಕ್ಷ ಸಬ್​ಸ್ಕೃಬರ್ಸ್​ ಅನ್ನು ಹೊಂದಿದ್ದರು. ಸದ್ಯ ಅನುನಯ್ ಸೂದ್ ಅವರು ನಿಧನಕ್ಕೆ ಅವರ ಫಾಲೋವರ್ಸ್​ ಬೇರಸ ವ್ಯಕ್ತಪಡಿಸುತ್ತಿದ್ದಾರೆ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

instagram Dubai
Advertisment
Advertisment
Advertisment