/newsfirstlive-kannada/media/media_files/2025/11/06/bigg_boss-kannada_12_rashika_rakshitha-2025-11-06-10-07-19.jpg)
ರಾಶಿಕಾ ಹಾಗೂ ರಕ್ಷಿತಾರಲ್ಲಿ ಯಾರ ಕೈಗೆ ಮನೆಯವರ ಪತ್ರ ಸಿಗಬೇಕು, ಯಾರು ಈ ವಾರ ಸೇಫ್ ಆಗಬೇಕೆಂದು ನಿರ್ಧರಿಸುವ ಅಧಿಕಾರವನ್ನು ಮನೆಯವರಿಗೆ ನೀಡಿದ್ದು, ಮನೆಯವರ ಸಾಥ್ ಯಾರಿಗೆ?.
ಈ ವಾರ ಬಿಗ್‌ಬಾಸ್ ಮನೆಯಲ್ಲಿ ಬೇರೆಯದ್ದೇ ರೀತಿಯ ಆಟಗಳು ನಡೆಯುತ್ತಿದೆ. ಟಾಸ್ಕೇ ಇಲ್ಲದೆ ಸ್ಪರ್ಧಿಗಳು ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳುವ ಸಮಯ ಬಂದಿದೆ. ಇದಕ್ಕೆ ಸ್ಪರ್ಧಿಗಳ ಕುಟುಂಬದ ಸಾಥ್ ಅಷ್ಟೇ ಮುಖ್ಯವಾಗಿದ್ದು, ಈ ಆಕ್ಟಿವಿಟಿಯಿಂದ ಸ್ಪರ್ಧಿಗಳ ನಡುವಿನ ವೈಮನಸ್ಸು ಕೂಡ ಹೊರಕ್ಕೆ ಬರುತ್ತಿದೆ.
ಇದೀಗ ಮನೆಯಲ್ಲಿ ರಕ್ಷಿತಾ ಅಥವಾ ರಾಶಿಕಾರಲ್ಲಿ ಯಾರನ್ನು ಈ ವಾರ ಸೇಫ್ ಮಾಡಬೇಕು ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ಮನೆಯವರಿಗೆ ನೀಡಿದ್ದು, ಒಮ್ಮತ ನಿರ್ಧಾರ ತೆಗೆದುಕೊಳ್ಳಲು ಸೂಚಿಸಲಾಗಿದೆ. ಇದರಲ್ಲಿ ಧ್ರುವಂತ್, ಕಾಕ್ರೋಚ್ ಸುಧಿ, ಅಶ್ವಿನಿ ಗೌಡ ಹಾಗೂ ರಿಷಾ ಅವರು, ರಾಶಿಕಾ ಪರ ನಿಂತಿದ್ದಾರೆ. ಉಳಿದವರು ರಕ್ಷಿತಾ ಪರ ಇದ್ದಾರೆ, ಇದಕ್ಕೆ ನಾಲ್ವರು ಸಮ್ಮತಿಸಲು ಹಿಂದೇಟು ಹಾಕಿದ್ದು, ಇಬ್ಬರಿಗೂ ಪತ್ರ ಸಿಗದಿದ್ದರೂ ಪರವಾಗಿಲ್ಲ ಎಂದಿದ್ದಾರೆ.
/filters:format(webp)/newsfirstlive-kannada/media/media_files/2025/10/13/bigg-boss-rakshitha-2025-10-13-17-21-01.png)
ಮಾತ್ರವಲ್ಲ, ಇದು ರಕ್ಷಿತಾ ಬಗ್ಗೆ ಮನೆಯವರಲ್ಲಿ ಯಾವ ರೀತಿಯ ಅಭಿಪ್ರಾಯ ಇದೆ ಅನ್ನೋದನ್ನೂ ಎತ್ತಿ ತೋರಿಸಿದೆ. ಮನೆಯಲ್ಲಿ ಮನಸ್ಸುಗಳು, ಮನಸ್ಥಿತಿಗಳು ಹಾಳಾಗುವುದಕ್ಕೆ ಮೂಲ ಕಾರಣ ರಕ್ಷಿತಾ ಎಂದು ಅಶ್ವಿನಿ ಆರೋಪಿಸಿದ್ದಾರೆ. ಅಲ್ಲದೆ ತಮ್ಮ ವ್ಯಕ್ತಿತ್ವನ್ನೇ ತಿರುಚಿ ಇನ್ನೊಂದು ರೀತಿ ತೋರಿಸಲು ಕಾರಣರಾದ ರಕ್ಷಿತಾಗೆ ಕ್ಷಮೆನೇ ಇಲ್ಲ ಎಂದೂ ಹೇಳಿದ್ದಾರೆ.
ಈ ವಾರ ಸ್ಪರ್ಧಿಗಳ ದೈಹಿಕ ಸಾಮರ್ಥ್ಯ ಹೊರಬರುತ್ತಿಲ್ಲ ನಿಜ. ಆದರೆ ಮನಸ್ಸಿನ ಮಾತು ಹೊರಕ್ಕೆ ಬರುತ್ತಿದೆ. ರಕ್ಷಿತಾಗೆ ತನ್ನವರು ಯಾರು ತನಗೆ ಕೆಡುಕು ಬಯಸುವವರು ಯಾರು ಅನ್ನೋದು ಅರ್ಥ ಆಗುತ್ತಿದೆ. ಹಾಗಾದ್ರೆ ಮನೆಯವರ ಒಮ್ಮತದ ನಿರ್ಧಾರ ಏನು? ಯಾರಿಗೆ ಪತ್ರ ಸಿಗುತ್ತೆ? ನೋಡಿ ಇವತ್ತಿನ ಬಿಗ್‌ಬಾಸ್‌ನಲ್ಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us