/newsfirstlive-kannada/media/media_files/2025/11/27/rapido-2025-11-27-16-23-46.jpg)
ನಿರುದ್ಯೋಗ ಮತ್ತೆ ಕಾಡಲು ಶುರುಮಾಡಿದೆ. ಇವತ್ತು ಕೆಲಸ ಗಿಟ್ಟಿಸಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ. ಹಂಗೂ, ಹಿಂಗೂ ಕೆಲಸ ಹುಡುಕಿಕೊಂಡ ಮೇಲೆ ಅದನ್ನು ಉಳಿಸಿಕೊಳ್ಳೋದು ಕೂಡ ಅಷ್ಟೇ ಸವಾಲಿನ ಕೆಲಸ.
ಆತ ಇಂಜಿನಿಯರ್! ಅಂದುಕೊಂಡಂತೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಕೂಡ ಗಿಟ್ಟಿಸಿಕೊಂಡಿದ್ದ. ಅದೇನ್ ಆಯ್ತೋ, ಕಳೆದ ಎರಡು ತಿಂಗಳಿನಿಂದ ನಿರುದ್ಯೋಗಿ ಆಗಿದ್ದಾನೆ. ಇದೀಗ ಆತನ ಪಾಡು ಯಾರಿಗೂ ಹೇಳ ತೀರದ್ದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ಇಂಜಿನಿಯರ್​ನ ಹೊಟ್ಟೆ ಬದುಕಿನ ಕತೆ ಇವತ್ತು ಉದ್ಯೋಗದಲ್ಲಿನ ಅನಿಶ್ಚಿತತೆಯನ್ನು ತೆರೆದಿಡುತ್ತಿದೆ.
1 ಕೋಟಿ ಫ್ಲಾಟ್​.. EMI ತುಂಬಲು ದುಡ್ಡಿಲ್ಲ
ನೋಯ್ಡಾ ವಾಸಿ ಆಗಿರುವ ಈ ಇಂಜಿನಿಯರ್ ಆರಂಭದಲ್ಲಿ ಕೆಲಸ ಸಿಕ್ಕ ಖುಷಿಯಲ್ಲಿ, ಕನಸಿನ ಫ್ಲ್ಯಾಟ್ ಖರೀದಿಸಿದ್ದರು. ಅದರ ಮೌಲ್ಯ ಬರೋಬ್ಬರಿ ಒಂದು ಕೋಟಿ. ಇದೀಗ ನಿರುದ್ಯೋಗಿ ಆಗಿದ್ದಾರೆ. ಬೇರೆ ಎಲ್ಲೂ ಕೆಲಸ ಸಿಗ್ತಿಲ್ಲ. ಈಗ ಬ್ಯಾಂಕ್​ ಇಎಂಐ ಕಟ್ಟಲು ಹಣವಿಲ್ಲ. ಮನೆ ನಿಭಾಯಿಸಲು ಹಣವಿಲ್ಲ. ಅದಕ್ಕೆ ಈಗ ಱಪಿಡೋ ಟ್ಯಾಕ್ಸಿ ಓಡಿಸಲು ಆರಂಭಿಸಿದ್ದಾನೆ. ಇನ್​ಸ್ಟಾ ಗ್ರಾಮ್​​ನಲ್ಲಿ ವೈರಲ್ ಆಗಿರುವ ಈ ಕತೆಯಲ್ಲಿ, ಸ್ನೇಹಿತ ಜೊತೆ ಇಂಜಿನಿಯರ್​ ತನ್ನ ಕಷ್ಟವನ್ನೆಲ್ಲ ಹೇಳಿಕೊಂಡಿದ್ದಾನೆ.
ನೋಯ್ಡಾದಂತಹ ನಗರದಲ್ಲಿ ಬಾಡಿಗೆ ದುಬಾರಿ..
ನೋಯ್ಡಾದಂಥ ದೊಡ್ಡ ನಗರದಲ್ಲಿ ವಾಸಿಸುವುದು ಸವಾಲಿನ ಕೆಲಸ. ಇಲ್ಲಿ ಫ್ಲಾಟ್‌ಗಳ ಬೆಲೆ ₹1 ಕೋಟಿಯಿಂದ ₹2 ಕೋಟಿಯವರೆಗೆ ಇರುತ್ತದೆ. ಬಾಡಿಗೆ ₹30,000 ರಿಂದ ₹35,000 ತಲುಪುತ್ತವೆ. ಮನೆಗಳನ್ನು ಖರೀದಿಸಿದವರು ಭಾರೀ ಇಎಂಐ ತುಂಬಬೇಕಾಗುತ್ತದೆ. ತೇಜು ಅವರ ಸ್ನೇಹಿತ ಕೂಡ ಮನೆ ಖರೀದಿಸಿದರು. ಅಂತೆಯೇ ಅವರು ಇಎಂಐಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕಾಗಿತ್ತು. ನಿರುದ್ಯೋಗದಿಂದಾಗಿ ಅವರ ಉಳಿತಾಯವು ಬೇಗ ಖಾಲಿಯಾಗಲು ಪ್ರಾರಂಭಿಸಿದೆ.
ಇದನ್ನೂ ಓದಿ:ಒಂದೇ ದಿನ ರೈತರಿಗೆ ಹೆಚ್ಚುವರಿಯಾಗಿ ರೂ.1033.60 ಕೋಟಿ ಇನ್ಪುಟ್ ಸಬ್ಸಿಡಿ ವಿತರಿಸಿದ ಸಿಎಂ
ನಾಟಿವರ್ಲ್ಡ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾದ ಈ ವೀಡಿಯೊವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಅನೇಕರು ಇದನ್ನು ಲೈಕ್ ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಉದ್ದೇಶಪೂರ್ವಕವಾಗಿ ಕೆಲಸ ಬಿಡುವುದು ಮೂರ್ಖತನ’ ಎಂದು ಬರೆದಿದ್ದಾರೆ. ಮತ್ತೊಬ್ಬ ‘ಒಂದು ಕೋಟಿ ರೂಪಾಯಿ ಮೌಲ್ಯದ ಫ್ಲಾಟ್ ಖರೀದಿಸಲು ನಿಮಗೆ ಯಾರು ಹೇಳಿದರು, ಸಹೋದರ?’ ಎಂದು ಬರೆದಿದ್ದಾನೆ, ಮತ್ತೊಬ್ಬ ಫ್ಲಾಟ್ ಮಾರಾಟ ಮಾಡಿ, ಸಹೋದರ ಮತ್ತು ಎಲ್ಲವೂ ಪರಿಹಾರವಾಗುತ್ತದೆ ಅಂತಾ ಸಲಹೆ ನೀಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us