/newsfirstlive-kannada/media/media_files/2025/11/05/tran-accident-2025-11-05-12-49-04.jpg)
ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ (Uttar Pradesh's Mirzapur) ಬುಧವಾರ ರೈಲು ಹಳಿ ದಾಟುತ್ತಿದ್ದಾಗ ಎದುರು ಬರುತ್ತಿದ್ದ ರೈಲು ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ. ಒಂದು ಪ್ಲಾಟ್​ ಫಾರ್ಮ್​​ನಿಂದ ಇನ್ನೊಂದು ಪ್ಲಾಟ್​​ಫಾರ್ಮ್​ಗೆ ಬರುವ ಹಳಿಗಳ ಮೇಲೆ ನಡೆದುಕೊಂಡು ಬರುತ್ತಿದ್ದಾಗ ದುರಂತ ಸಂಭವಿಸಿದೆ.
ಇದನ್ನೂ ಓದಿ: ಎರಡು ರೈಲುಗಳ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಪ್ರಾಣಬಿಟ್ಟ ನಾಲ್ವರು..
ರೈಲ್ವೆ ಅಧಿಕಾರಿಗಳ ಪ್ರಕಾರ, ಆ ನಾಲ್ವರು ಪ್ರಯಾಣಿಕರು ಚುನಾರ್ ಜಂಕ್ಷನ್ ಬಳಿ ಇರುವ ಪ್ಲಾಟ್‌ಫಾರ್ಮ್‌ನ ಬದಿಯಲ್ಲಿರುವ ಚೋಪನ್-ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್‌ನಿಂದ (Uttar Pradesh's Mirzapur) ಇಳಿದು ಹಳಿ ದಾಟಲು ಮುಂದಾಗಿದ್ದರು. ಆಗ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಹೌರಾ-ಕಲ್ಕಾ ನೇತಾಜಿ ಎಕ್ಸ್‌ಪ್ರೆಸ್ (Howrah-Kalka Netaji Express) ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಉಸಿರು ಚೆಲ್ಲಿದಾರೆ.
ದುರಂತಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ತಕ್ಷಣ ಅಧಿಕಾರಿಗಳನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ಅಮೆರಿಕಾದ ಕೆಂಟುಕಿಯಲ್ಲಿ ಕಾರ್ಗೋ ವಿಮಾನ ಪತನ: 7 ಮಂದಿ ಸಾವು, 11 ಮಂದಿಗೆ ಗಾಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us