ಚಿನ್ನದ ಮೇಲೆ ಸಾಲ, ಪರ್ಸನಲ್ ಲೋನ್ -ಯಾವುದು ಬೆಸ್ಟ್​..?

ಬ್ಯಾಂಕುಗಳು ತಮ್ಮ ವ್ಯವಹಾರವನ್ನು ವಿಸ್ತರಿಸಲು ವಿವಿಧ ಸಾಲಗಳನ್ನು ನೀಡುತ್ತಿವೆ. ಬ್ಯಾಂಕುಗಳಲ್ಲಿ ಅನೇಕ ಸಾಲ ಆಯ್ಕೆಗಳು ಲಭ್ಯವಿದೆ. ಕೆಲವರು ಚಿನ್ನವನ್ನು ಒತ್ತೆ ಇರಿಸಿ ಸಾಲ ಪಡೆಯುತ್ತಾರೆ. ಇನ್ನ, ಕೆಲವರು ವೈಯಕ್ತಿಕ ಸಾಲ ತೆಗೆದುಕೊಳ್ತಾರೆ. ಹಾಗಿದ್ದರೆ ಎರಡರಲ್ಲಿ ಯಾವುದು ಬೆಸ್ಟ್​?

author-image
Ganesh Kerekuli
ಸಾಲಗಾರರಿಗೆ ಗುಡ್‌ನ್ಯೂಸ್.. 5 ವರ್ಷಗಳ ಬಳಿಕ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲದ ಬಡ್ಡಿ ದರ ಕಡಿತ!
Advertisment

ಕೆಟ್ಟ ಆರ್ಥಿಕ ಸ್ಥಿತಿಯಿಂದಾಗಿ ರೈತರಿಂದ ಹಿಡಿದು ಉದ್ಯೋಗಿಗಳವರೆಗೆ ಎಲ್ಲರೂ ಬ್ಯಾಂಕುಗಳಿಂದ ಸಾಲ ಪಡೆಯೋದು ಸಾಮಾನ್ಯ. ಬ್ಯಾಂಕುಗಳು ತಮ್ಮ ವ್ಯವಹಾರವನ್ನು ವಿಸ್ತರಿಸಲು ವಿವಿಧ ಸಾಲಗಳನ್ನು  ನೀಡುತ್ತಿವೆ. ಗ್ರಾಹಕರನ್ನು ಕರೆದು ಹೆಚ್ಚಿನ ಸಾಲ ತೆಗೆದುಕೊಳ್ಳುವಂತೆ ಕೇಳುತ್ತಾರೆ. ಬ್ಯಾಂಕುಗಳಲ್ಲಿ ಅನೇಕ ಸಾಲ ಆಯ್ಕೆಗಳು ಲಭ್ಯವಿದೆ. ಕೆಲವರು ಚಿನ್ನವನ್ನು ಒತ್ತೆ ಇರಿಸಿ ಸಾಲ ಪಡೆಯುತ್ತಾರೆ. ಇನ್ನ, ಕೆಲವರು ವೈಯಕ್ತಿಕ ಸಾಲ ತೆಗೆದುಕೊಳ್ತಾರೆ. ಹಾಗಿದ್ದರೆ ಎರಡರಲ್ಲಿ ಯಾವುದು ಬೆಸ್ಟ್​?

ನಿಮಗೆ ಹಣದ ತುರ್ತು ಇದೆಯೇ?

ತುರ್ತಾಗಿ ಹಣದ ಅಗತ್ಯವಿದ್ದರೆ ಚಿನ್ನದ ಮೇಲಿನ ಸಾಲವನ್ನು ಆಯ್ಕೆ ಮಾಡಬಹುದು. ಈ ಲೋನ್ ತಕ್ಷಣವೇ ಮಂಜೂರು ಆಗುತ್ತದೆ. ನೀವು ಚಿನ್ನವನ್ನು ನೀಡಿದ ತಕ್ಷಣ, ಸಾಲದ ಮೊತ್ತವು ನಿಮ್ಮ ಖಾತೆಗೆ ನಿಮಿಷಗಳಲ್ಲಿ ಜಮಾ ಆಗುತ್ತದೆ. ವೈಯಕ್ತಿಕ ಸಾಲ ಪಡೆಯಲು, ಬ್ಯಾಂಕುಗಳು ಆದಾಯ ದಾಖಲೆಗಳು, CIBIL ಸ್ಕೋರ್ ಮತ್ತು ನಿಮ್ಮ ಕೆಲಸದ ಸ್ಥಿತಿಯನ್ನು ಪರಿಶೀಲಿಸುತ್ತವೆ. ಈ ಸಾಲದ ಪ್ರಕ್ರಿಯೆ ಕೊಂಚ ವಿಳಂಬ. ತುರ್ತಾಗಿ ಹಣದ ಅಗತ್ಯವಿದ್ದರೆ ಚಿನ್ನದ ಮೇಲೆ ಸಾಲ ಆಯ್ಕೆ ಮಾಡಿಕೊಳ್ಳಬೇಕು. 

ನಿಮ್ಮ CIBIL ಸ್ಕೋರ್ ಪರಿಶೀಲಿಸಿ

ನಿಮ್ಮ CIBIL ಸ್ಕೋರ್ ಕಡಿಮೆಯಿದ್ದರೆ ಬ್ಯಾಂಕುಗಳು ವೈಯಕ್ತಿಕ ಸಾಲಗಳ ಮೇಲೆ ಹೆಚ್ಚಿನ ಬಡ್ಡಿ ವಿಧಿಸುತ್ತವೆ. ಅದು ತುಂಬಾ ಕಡಿಮೆಯಿದ್ದರೆ, ನಿಮ್ಮ ಸಾಲದ ಬೇಡಿಕೆಯನ್ನು ತಿರಸ್ಕರಿಸಬಹುದು. ಹೆಚ್ಚು ಸಾಲಗಳಿಗೆ ಅರ್ಜಿ ಸಲ್ಲಿಸುವುದು ನಿಮ್ಮ ಕ್ರೆಡಿಟ್ ಸ್ಕೋರ್‌ನ ಮೇಲೂ ಪರಿಣಾಮ ಬೀರುತ್ತದೆ. ನಿಮ್ಮ CIBIL ಸ್ಕೋರ್ ಕಡಿಮೆಯಿದ್ದರೆ ವೈಯಕ್ತಿಕ ಸಾಲಕ್ಕೆ ಹೋಗಬೇಡಿ. 
ಒಮ್ಮೆಲೇ ಹಣ..

ಇದನ್ನೂ ಓದಿ: ಸೂಪರ್ ಮೂನ್ ಗೋಚರ.. ಇವತ್ತು ರಾತ್ರಿ ಆಕಾಶ ನೋಡಲು ಅದ್ಭುತ..!

ಚಿನ್ನದ ಸಾಲಗಳು ಬಡ್ಡಿ ಸೇರಿದಂತೆ ಸಾಲ ಪಡೆದ ಮೊತ್ತವನ್ನು ಮುಕ್ತಾಯ ಅವಧಿಯ ನಂತರ ಒಂದೇ ಬಾರಿಗೆ ಪಾವತಿಸುವ ಸೌಲಭ್ಯ ಹೊಂದಿವೆ. ನೀವು ಉದ್ಯೋಗದಲ್ಲಿದ್ದರೆ ಅಥವಾ ವ್ಯವಹಾರ ನಡೆಸುತ್ತಿದ್ದರೆ, ಮಾಸಿಕ ಇಎಂಐಗಳನ್ನು ಪಾವತಿಸಲು ನಿಮ್ಮ ಬಳಿ ಸಾಕಷ್ಟು ಹಣವಿಲ್ಲದಿರಬಹುದು. ಅದೇ ಚಿನ್ನದ ಸಾಲ ಇಎಂಐ ತೆಗೆದುಕೊಂಡರೆ ನಿಮ್ಮ ಬಳಿ ಹಣವಿದ್ದಾಗ ಒಂದೇ ಬಾರಿಗೆ ಪಾವತಿಸಬಹುದು.

ಚಿನ್ನದ ಸಾಲದ ಅವಧಿ ಎರಡು ವರ್ಷಗಳವರೆಗೆ ಇರುತ್ತದೆ. ವೈಯಕ್ತಿಕ ಸಾಲಕ್ಕೂ ಇದು ಅನ್ವಯಿಸುತ್ತದೆ.  ಇದು ಐದು ವರ್ಷಗಳವರೆಗೆ ಇರಬಹುದು. ನೀವು ಸಾಲದಿಂದ ಬೇಗನೆ ಹೊರಬರಲು ಬಯಸಿದರೆ ಚಿನ್ನದ ಸಾಲವು ಉತ್ತಮ ಆಯ್ಕೆ. ಚಿನ್ನದ ಸಾಲಗಳ ಮೇಲಿನ ಬಡ್ಡಿದರಗಳು ತುಂಬಾ ಕಡಿಮೆ. ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರಗಳು ಹೆಚ್ಚು. ನಿಮ್ಮ ಬಳಿ ಚಿನ್ನವಿದ್ದರೆ, ವೈಯಕ್ತಿಕ ಸಾಲದ ಬದಲಿಗೆ ಚಿನ್ನದ ಸಾಲ ತೆಗೆದುಕೊಳ್ಳುವುದು ಉತ್ತಮ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

gold rate Gold Personal loan Personal loan interest rates Gold loan
Advertisment