/newsfirstlive-kannada/media/media_files/2025/12/04/supermoon-2025-12-04-15-07-25.jpg)
ಡಿಸೆಂಬರ್ 4. ಅಂದರೆ ಇವತ್ತು ಸಂಜೆ ಆಕಾಶವು ನೋಡಲು ಅದ್ಭುತವಾಗಿರುತ್ತದೆ. ಕೋಲ್ಡ್ ಮೂನ್ (Cold Moon) ಎಂದೂ ಕರೆಯಲ್ಪಡುವ ಪೂರ್ಣ ಶೀತಲ ಚಂದ್ರ ಇವತ್ತು ಗೋಚರಿಸುತ್ತಾನೆ. ಈ ಚಂದ್ರನು ಡಿಸೆಂಬರ್‌ನ ಶೀತ ಮತ್ತು ದೀರ್ಘ ರಾತ್ರಿಗಳ ಆರಂಭವನ್ನು ಸೂಚಿಸುತ್ತಾನೆ. ಅಂದ್ಹಾಗೆ ಇದು ಸಾಮಾನ್ಯ ಹುಣ್ಣಿಮೆಯಲ್ಲ. 2025ರ 3ನೇ ಮತ್ತು ಕೊನೆಯ ಸೂಪರ್‌ಮೂನ್ ಕೂಡ ಆಗಿದೆ.
ಸೂಪರ್‌ಮೂನ್ ಎಂದರೇನು?
ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಹತ್ತಿರದಲ್ಲಿದ್ದಾಗ ಅದನ್ನು ಪೆರಿಜಿ ಎಂದು ಕರೆಯಲಾಗುತ್ತದೆ. ಆ ಸಮಯದಲ್ಲಿ ಹುಣ್ಣಿಮೆ ಸಂಭವಿಸಿದರೆ, ಚಂದ್ರನು ಇತರ ದಿನಗಳಿಗಿಂತ ಸ್ವಲ್ಪ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ. ಇದನ್ನೇ ಸೂಪರ್‌ಮೂನ್ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: ಪತ್ನಿ ಕೊಂದು ಪತಿಯೂ ಆತ್ಮಹತ್ಯೆ! : ಬೆಂಗಳೂರಿನಲ್ಲಿ ವೃದ್ಧ ದಂಪತಿಯ ಸಾವು
ಸೂಪರ್‌ಮೂನ್‌ಗಳು ಅಪರೂಪವಲ್ಲ. ಸಾಮಾನ್ಯವಾಗಿ ವರ್ಷಕ್ಕೆ 3-4 ಬಾರಿ ಗೋಚರಿಸುತ್ತದೆ. ಆದರೆ ಪ್ರತಿ ಸೂಪರ್‌ಮೂನ್‌ಗಳು ಭಿನ್ನವಾಗಿರುತ್ತವೆ.
ಎಲ್ಲಿ ಕಾಣಿಸಿಕೊಳ್ಳುತ್ತದೆ?
ಡಿಸೆಂಬರ್ 4ರ ಮಧ್ಯಾಹ್ನ ಮತ್ತು ಸಂಜೆ ಚಂದ್ರನು ಉದಯಿಸಲು ಪ್ರಾರಂಭಿಸುತ್ತಾನೆ.
- ಲಂಡನ್‌ನಲ್ಲಿ: 14:52 GMT
- ಎಡಿನ್‌ಬರ್ಗ್: 14:29
- ಬೆಲ್ಫಾಸ್ಟ್: 14:52
- ಕಾರ್ಡಿಫ್: 15:05
ಭಾರತದಲ್ಲಿ ಮುಸ್ಸಂಜೆಯ ಸಮೀಪಿಸುತ್ತಿದ್ದಂತೆ ಚಂದ್ರ ಗೋಚರಿಸುತ್ತಾನೆ. ರಾತ್ರಿಯಿಡೀ ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಾನೆ. ಮರುದಿನ ಬೆಳಗ್ಗೆ 8 ರಿಂದ 9 ಗಂಟೆಯ ನಡುವೆ ಚಂದ್ರನು ಅಸ್ತಮಿಸುತ್ತಾನೆ. ಇಂದು ರಾತ್ರಿ ಇಡೀ ನೀವು ಚಂದ್ರನ ನೋಡಬಹುದು.
ಏನು ವಿಶೇಷ..?
ಚಂದ್ರನು ಉದಯಿಸುತ್ತಿದ್ದಂತೆ ಪ್ಲೆಯೇಡ್ಸ್ ನಕ್ಷತ್ರ ಸಮೂಹ ಮತ್ತು ಪ್ರಕಾಶಮಾನವಾದ ನಕ್ಷತ್ರ ಅಲ್ಡೆಬರಾನ್‌ನೊಂದಿಗೆ ಸುಂದರವಾದ ತ್ರಿಕೋನ ರೂಪಿಸುತ್ತದೆ. ಗುರುವು ಚಂದ್ರನ ಬಳಿ ಹೊಳೆಯುತ್ತಿರುವುದನ್ನು ಸಹ ಕಾಣಬಹುದು. ಚಳಿಗಾಲದ ನಕ್ಷತ್ರಪುಂಜ ಓರಿಯನ್ ದಿ ಹಂಟರ್ ಸಹ ಸ್ಪಷ್ಟವಾಗಿ ಗೋಚರಿಸುತ್ತದೆ.
ಹವಾಮಾನ ಹೇಗಿರುತ್ತದೆ?
ಗುರುವಾರ ಯುಕೆಯಾದ್ಯಂತ ಮೋಡ ಕವಿದು ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಮತ್ತು ಪೂರ್ವ ಸ್ಕಾಟ್ಲೆಂಡ್ ಮತ್ತು ಪೂರ್ವ ಇಂಗ್ಲೆಂಡ್‌ನಾದ್ಯಂತ ಸಂಜೆಯವರೆಗೆ ಮೋಡ ಕವಿದ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ. ದೂರ ಸರಿದಂತೆ ರಾತ್ರಿಯಿಡೀ ಅನೇಕ ಪ್ರದೇಶಗಳಲ್ಲಿ ಆಕಾಶವು ಸ್ಪಷ್ಟವಾಗುತ್ತದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us