ಬೈಕ್, ಕಾರು, TV, AC ಖರೀದಿಸೋರಿಗೂ ಗುಡ್​ನ್ಯೂಸ್​.. ಎಷ್ಟು GST?

ಇನ್ಮೇಲೆ 2 GST ಸ್ಲ್ಯಾಬ್​ಗಳು ಮಾತ್ರ ಇರಲಿವೆ. ಶೇಕಡಾ 5 ಮತ್ತು ಶೇ 18 ಸ್ಲ್ಯಾಬ್‌ಗಳು ಮಾತ್ರ ಇರಲಿವೆ. 12 ಪ್ರತಿಶತ ಮತ್ತು 28 ಪ್ರತಿಶತದ ಸ್ಲ್ಯಾಬ್‌ಗಳನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 22 ರಿಂದ ಹೊಸ GST ಜಾರಿಗೆ ಬರಲಿದೆ. ಯಾವೆಲ್ಲ ವಸ್ತುಗಳ ಬೆಲೆ ಕಡಿಮೆ ಅನ್ನೋದ್ರ ವಿವರ ಇಲ್ಲಿದೆ.

author-image
Ganesh Kerekuli
GST (4)
Advertisment

ಇನ್ಮೇಲೆ ಕೇವಲ ಎರಡು ಜಿಎಸ್​​ಟಿ ಸ್ಲ್ಯಾಬ್​ಗಳು ಮಾತ್ರ ಇರಲಿವೆ. ಶೇಕಡಾ 5 ಮತ್ತು ಶೇ 18 ಸ್ಲ್ಯಾಬ್‌ಗಳು ಮಾತ್ರ ಇರಲಿವೆ. 12 ಪ್ರತಿಶತ ಮತ್ತು 28 ಪ್ರತಿಶತದ ಸ್ಲ್ಯಾಬ್‌ಗಳನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 22 ರಿಂದ ಹೊಸ ಜಿಎಸ್​ಟಿ ಜಾರಿಗೆ ಬರಲಿದೆ. ಜಿಎಸ್​ಟಿ ಕಡಿತದಿಂದ ಯಾವೆಲ್ಲ ವಸ್ತುಗಳ ಬೆಲೆ ಕಡಿಮೆ ಆಗಲಿದೆ ಅನ್ನೋದ್ರ ವಿವರ ಇಲ್ಲಿದೆ.

ಹೊಸ ಜಿಎಸ್​ಟಿಯಿಂದ ಅನೇಕ ಸರಕುಗಳು ಅಗ್ಗವಾಗುತ್ತವೆ. ಬೈಕ್‌ಗಳು, ಕಾರುಗಳು, ಟಿವಿಗಳು ಮತ್ತು ಎಸಿಗಳನ್ನು ಖರೀದಿಸಲು ಬಯಸೋರಿಗೆ ಗುಡ್​ನ್ಯೂಸ್ ಸಿಕ್ಕಿದೆ. 

28 ರಿಂದ 18% ತೆರಿಗೆ ಸ್ಲ್ಯಾಬ್‌ನ ಪಟ್ಟಿ

  • ಎಸಿಗಳು
  • 32 ಇಂಚುಗಳಿಗಿಂತ ದೊಡ್ಡ ಟಿವಿಗಳು
  • ಪಾತ್ರೆ ತೊಳೆಯುವ ಯಂತ್ರಗಳು
  • ಸಣ್ಣ ಕಾರುಗಳು
  • 350 ಸಿಸಿ ಅಥವಾ ಅದಕ್ಕಿಂತ ಕಡಿಮೆ ಇರುವ ಬೈಕ್‌ಗಳು
  • ಬಸ್‌ಗಳು, ಟ್ರಕ್‌ಗಳು, ಆಂಬ್ಯುಲೆನ್ಸ್‌ಗಳು
  • ಎಲ್ಲಾ ಆಟೋ ಬಿಡಿಭಾಗಗಳು
  • ತ್ರಿಚಕ್ರ ವಾಹನಗಳು


ಜಿಎಸ್‌ಟಿ 5% ಕ್ಕೆ ಇಳಿಸಲಾದ ವಸ್ತುಗಳು

  • ಉಪ್ಪು
  • ಭುಜಿಯಾ
  • ಸಾಸ್
  • ಪಾಸ್ತಾ
  • ಇನ್‌ಸ್ಟಂಟ್ ನೂಡಲ್ಸ್
  • ಚಾಕೊಲೇಟ್
  • ಕಾಫಿ
  • ಸಂರಕ್ಷಿತ ಮಾಂಸ
  • ಕಾರ್ನ್‌ಫ್ಲೇಕ್‌ಗಳು
  • ಬೆಣ್ಣೆ
  • ತುಪ್ಪ 

ಇನ್ನೂ ಏನೇನು..?

  • ಹೇರ್ ಆಯಿಲ್
  • ಟಾಯ್ಲೆಟ್ ಸೋಪ್
  • ಸೋಪ್ ಬಾರ್
  • ಶಾಂಪೂ
  • ಟೂತ್ ಬ್ರಷ್
  • ಟೂತ್‌ಪೇಸ್ಟ್
  • ಸೈಕಲ್
  • ಟೇಬಲ್‌ವೇರ್
  • ಅಡುಗೆಮನೆಯ ವಸ್ತುಗಳು

ಇದನ್ನೂ ಓದಿ:ಗುಟ್ಕಾ, ಸಿಗರೇಟ್ ಒಂದೇ ಅಲ್ಲ.. ಈ ವಸ್ತುಗಳಿಗೆ ಶೇ.40 ರಷ್ಟು GST!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

GST cut 175 items GST REFORMS
Advertisment