/newsfirstlive-kannada/media/media_files/2025/09/16/ai_gilr-2025-09-16-21-00-36.jpg)
(ಎಐ) ತಂತ್ರಜ್ಞಾನ ಬಂದ ಮೇಲೆ ಎಲ್ಲ ರಂಗದಲ್ಲೂ ಒಂದಷ್ಟು ಬದಲಾವಣೆ, ಟ್ರೆಂಡ್ ಆಗುತ್ತಿದೆ. ಇದೀಗ ಯುವಕ, ಯುವತಿಯರು ಪೋಟೋಗಳಲ್ಲಿ ಸ್ಟೈಲೀಶ್ ಆಗಿ ಕಾಣಲು ಬೇರೆ ಬೇರೆ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ತಂತ್ರಜ್ಞಾನವು ಸೂಪರ್ ಫಾಸ್ಟ್ ಇದ್ದು ನಮಗಿಂತ ಚೆಂದವಾಗಿ ಫೋಟೋ ಕೊಡುತ್ತಿದೆ. ಸದ್ಯ ಈಗ ಎಲ್ಲ ಕಡೆ ಜೆಮಿನಿ ನ್ಯಾನೋ ಬನಾನಾ AI ಟೂಲ್ (Gemini Nano Banana & AI image generator) ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡ್ ಆಗಿದೆ.
ಝಲಕ್ ಭಾವನಾನಿ (jhalakbhawnani) ಇನ್‌ಸ್ಟಾ ಖಾತೆ ಹೊಂದಿರುವ ಯುವತಿ ಫೋಟೋವೊಂದನ್ನ ಜೆಮಿನಿ ನ್ಯಾನೋ ಬನಾನಾದಲ್ಲಿ ಶೇರ್ ಮಾಡಿದ್ದಳು. ಅದು ದೇಹ ಫುಲ್ ಮುಚ್ಚಿಕೊಂಡಿರುವ ಗ್ರೀನ್ ಕಲರ್ ಡ್ರೆಸ್ನಲ್ಲಿನ ಫೋಟೋನ ಅಪ್ಲೋಡ್ ಮಾಡಿದ್ದಳು. ಇದಕ್ಕೆ ತಕ್ಕಂತೆ ವಾಪಸ್ ಕಪ್ಪು ಬಣ್ಣದ ಸೀರೆಯಲ್ಲಿ ಯುವತಿಯ ಫೋಟೋ ಸೂಪರ್ ಆಗಿ ವಾಪಸ್ ಬಂದಿದೆ. ಆದರೆ ಇದರಲ್ಲಿ ಏನು ಆಶ್ಚರ್ಯ ಇಲ್ಲ.
ಆದರೆ ಫುಲ್ ಶಾಕಿಂಗ್ ವಿಷ್ಯ ಏನೆಂದರೆ, ಯುವತಿಯ ಎಡಗೈ ಮೇಲೆ ಕಪ್ಪು ಬಣ್ಣದ ಚಿಕ್ಕದಾದ ಮಚ್ಚೆ ಇದೆ. ಇದು ಮೊದಲ ಫೋಟೋದಲ್ಲಿ ಕಾಣಿಸುವುದಿಲ್ಲ. ಏಕೆಂದರೆ ಯುವತಿ ಫುಲ್ ಡ್ರೆಸ್ ಧರಿಸಿದ್ದಾರೆ. ಆದರೆ ಜೆಮಿನಿ ಬನಾನಾ AI ಕಳಿಸಿರುವ ಫೋಟೋದಲ್ಲಿ ಎಡಗೈ ಮೇಲೆ ಕಪ್ಪು ಬಣ್ಣದ ಚಿಕ್ಕದಾದ ಮಚ್ಚೆ ಬಂದಿದೆ. ಫೋಟೋದಲ್ಲಿ ಕಾಣಿಸಿಲ್ಲ ಎಂದರೂ ಚಿಕ್ಕದಾದ ಮಚ್ಚೆಯನ್ನು ಎಐ ಹೇಗೆ ಗುರುತಿಸಿದೆ ಎಂದು ಯುವತಿ ಫುಲ್ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂಧೂರನಲ್ಲಿ ಮೌಲಾನಾ ಮಸೂದ್ ಫ್ಯಾಮಿಲಿ ಛಿದ್ರ ಛಿದ್ರ.. ಒಪ್ಪಿಕೊಂಡ ಪಾಪಿ ಪಾಕ್
ಸದ್ಯ ಜೆಮಿನಿ ನ್ಯಾನೋ ಬನಾನಾ ಸೀರೆ ಟ್ರೆಂಡ್ ಜನಪ್ರಿಯತೆಯ ಪಡೆದಿದೆ. ಎಲ್ಲರಂತೆ ತಾನು ಕೂಡ ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆ ರೆಟ್ರೋ ಲುಕ್ ಫೋಟೋ ನೋಡಿ ಖುಷಿಪಟ್ಟಿದ್ದಾಳೆ. ಬಳಿಕ ಆ ಯುವತಿ ಅಚ್ಚರಿಯ ಸಂಗತಿ ಗಮನಿಸಿದ್ದಾಳೆ. ಈ ಬಗ್ಗೆ ಎಲ್ಲರೂ ತಂತ್ರಜ್ಞಾನದ ಬಗ್ಗೆ ಹುಷಾರ್ ಆಗಿರಬೇಕು, ಜಾಗೃತವಾಗಿರಿ ಎಂದು ತಮ್ಮ ಇನ್‌ಸ್ಟಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.
ಗೂಗಲ್ ಜೆಮಿನಿ ನೀಡಿದ ಹೊಸ ರೂಪದ ಫೋಟೋ ನೋಡಿ ಬೆರಗುಗೊಂಡಿದ್ದಾರೆ. ಮನುಷ್ಯನನ್ನು ತಂತ್ರಜ್ಞಾನ ಅರಿತುಕೊಳ್ಳುತ್ತಿರುವ ಆಳ ಮತ್ತು ಅದರ ಭಯಾನಕತೆ ಬಗ್ಗೆ ಅವರು ಅನುಭವ ಹಂಚಿಕೊಂಡಿದ್ದಾಳೆ. ಗೂಗಲ್‌ನ ಜೆಮಿನಿ ನ್ಯಾನೋ ಬನಾನಾ ಟೂಲ್‌ನಲ್ಲಿ ನಮ್ಮ ಫೋಟೋಗಳನ್ನು ಅಪ್ಲೋಡ್ ಮಾಡಿ ಪ್ರಾಂಪ್ಟ್ ಕೊಟ್ಟರೆ ಸಾಕು ಸೀರೆಯಲ್ಲಿ ಹೇಳೆಯ ಕಾಲದ ಸುಂದರ, ರೆಟ್ರೋ ಲುಕ್‌ನಲ್ಲಿನ ಫೋಟೋ ಬರುತ್ತದೆ. ಆದರೆ ದೇಹದ ಮೇಲಿನ ಸಣ್ಣದಾದ ಕಪ್ಪು ಚುಕ್ಕಿ ಹೇಗೆ ಗುರುತಿಸಿತು ಎನ್ನುವುದು ಯುವತಿಯ ಬಿಗ್ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ