/newsfirstlive-kannada/media/media_files/2025/09/03/gst-2-2025-09-03-23-18-20.jpg)
ಸೆಪ್ಟೆಂಬರ್ 22 ರಿಂದ ಹೊಸ ಜಿಎಸ್ಟಿ ಜಾರಿಯಾಗಲಿದೆ. ಜಿಎಸ್ಟಿ ಕೌನ್ಸಿಲ್ನ (GST Council) 56ನೇ ಸಭೆಯು ಇಂದಿನಿಂದ ಪ್ರಾರಂಭವಾಗಿದ್ದು, ಇವತ್ತಿನ ಸಭೆಯಲ್ಲಿ ಸಭೆಯಲ್ಲಿ ಹಲವು ಪ್ರಸ್ತಾವನೆಗಳಿಗೆ ಅನುಮೋದನೆ ಸಿಕ್ಕಿದೆ.
ಇನ್ಮೇಲೆ ಕೇವಲ ಎರಡು ಜಿಎಸ್ಟಿ ಸ್ಲ್ಯಾಬ್‌ಗಳು ಮಾತ್ರ ಇರಲಿವೆ. ಶೇಕಡಾ 5 ಮತ್ತು ಶೇ 18 ಸ್ಲ್ಯಾಬ್‌ಗಳು ಮಾತ್ರ ಇರಲಿವೆ. 12 ಪ್ರತಿಶತ ಮತ್ತು 28 ಪ್ರತಿಶತದ ಸ್ಲ್ಯಾಬ್‌ಗಳನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 22 ರಿಂದ ಹೊಸ ಜಿಎಸ್ಟಿ ಜಾರಿಗೆ ಬರಲಿದೆ. ಜಿಎಸ್ಟಿ ಕಡಿತದಿಂದ ಯಾವೆಲ್ಲ ವಸ್ತುಗಳ ಬೆಲೆ ಕಡಿಮೆ ಆಗಲಿದೆ ಅನ್ನೋದ್ರ ವಿವರ ಇಲ್ಲಿದೆ.
ಯಾವುದಕ್ಕೆಲ್ಲ ಜಿಎಸ್ಟಿ ಇಲ್ಲ..?
- UHT ಹಾಲು
- ಛೇನಾ ಪನೀರ್
- ಪಿಜ್ಜಾ
- ಬ್ರೆಡ್
- ರೋಟಿ, ಪರೋಠಾಗೆ
- 33 ಜೀವ ಉಳಿಸುವ ಔಷಧಿಗಳು
- ಮೂರು ಕ್ಯಾನ್ಸರ್ ಔಷಧಿಗಳು
- ಬುಕ್ಸ್
- ಮ್ಯಾಪ್
- ಪೆನ್ಸಿಲ್
ಶೇಕಡಾ 5 ರಷ್ಟು GST
- ಶಾಂಪೂ
- ಸೋಪ್
- ಎಣ್ಣೆ
- ನಮ್ಮಿನ್
- ಪಾಸ್ತಾ
- ಕಾಫಿ
- ನೂಡಲ್ಸ್
- ಇತರ ದಿನನಿತ್ಯದ ಗೃಹೋಪಯೋಗಿ ವಸ್ತುಗಳು
ಶೇ 18 GST (ಶೇಕಡಾ 28ರ ಬದಲಿಗೆ ಶೇಕಡಾ 18 ರಷ್ಟು ಜಿಎಸ್ಟಿ)
- ಕಾರುಗಳು
- ಬೈಕ್ಗಳು
- ಟಿವಿಗಳು
- ಸಿಮೆಂಟ್ ವಸ್ತುಗಳು
ಸೂಪರ್ ಐಷಾರಾಮಿ ವಸ್ತುಗಳನ್ನು ಶೇಕಡಾ 40 ರಷ್ಟು ವಿಶೇಷ ವರ್ಗದಲ್ಲಿ ಇರಿಸಲಾಗಿದೆ. ಪಾನ್ ಮಸಾಲಾ, ಮತ್ತು ಇತರ ತಂಬಾಕು ಉತ್ಪನ್ನಗಳು, ಬೀಡಿಗಳನ್ನು ಈ ವರ್ಗದಲ್ಲಿ ಇರಿಸಲಾಗಿದೆ. ಸುವಾಸನೆಯ ಕಾರ್ಬೊನೆ ಪಾನೀಯಗಳನ್ನು ಸಹ ಈ ಸ್ಲ್ಯಾಬ್ನ ಅಡಿಯಲ್ಲಿ ಬರಲಿವೆ.
ಇದನ್ನೂ ಓದಿ:Breaking: ಜಿಎಸ್ಟಿ ಕಡಿತ! 2 ಸ್ಲ್ಯಾಬ್‌ಗಳು ರದ್ದು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ