/newsfirstlive-kannada/media/media_files/2025/08/08/bjp_gt-2025-08-08-07-25-29.jpg)
ಅಹಮದಾಬಾದ್: ಬಿಜೆಪಿ ಹಠವೋ ದೇಶ್ ಬಚವೋ ಎಂದು ಭಾವನಗರದ ಮಾಜಿ ಬಿಜೆಪಿ ಅಧ್ಯಕ್ಷ ಯೋಗೇಶ್ ಬದನಿ ಅವರು ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಇದು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ 13 ನಿಮಿಷಗಳ ನಂತರ ಡಿಲೇಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಇದು ಗುಜರಾತ್ನಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.
ಭಾವನಗರದ ಮಾಜಿ ಬಿಜೆಪಿ ಅಧ್ಯಕ್ಷ ಯೋಗೇಶ್ ಬದನಿ ಅವರು ತನ್ನ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಬಿಜೆಪಿ ಹಠವೋ ದೇಶ್ ಬಚವೋ ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಕೆಲವೇ ನಿಮಿಷಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೋಸ್ಟ್ ಅನ್ನು ಡಿಲೇಟ್ ಮಾಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಅವರು ತಮ್ಮ ಖಾತೆಯನ್ನು ಯಾರೋ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸಾರಿಗೆ ಮುಷ್ಕರದ ಎಫೆಕ್ಟ್; KSRTC, BMTC ಸೇರಿ 30,000 ಸಾವಿರ ನೌಕರರಿಗೆ ನೋಟಿಸ್
ಇದನ್ನು ಯಾರು ಪೋಸ್ಟ್ ಮಾಡಿದ್ದಾರೆ ಎಂದು ಗೊತ್ತಿಲ್ಲ. ಸ್ನೇಹಿತರೊಬ್ಬರು ಹೇಳಿದ ಮೇಲೆಯೇ ನನಗೆ ಗೊತ್ತಾಗಿದ್ದು. ತಕ್ಷಣ ಅದನ್ನು ಡಿಲೇಟ್ ಮಾಡಿದ್ದೇನೆ. ನಾನು ಅಧ್ಯಕ್ಷನಾಗಿದ್ದಾಗ ಈ ಖಾತೆ ಎಲ್ಲರಿಗೂ ಪರಿಚಯವಿದೆ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಬಿಜೆಪಿ ಹಠವೋ ದೇಶ್ ಬಚವೋ ಎನ್ನುವುದು ಪಕ್ಷಕ್ಕೆ ಮುಜುಗರ ತರುವಂತ ಪೋಸ್ಟ್ ಆಗಿದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರು ಅಚ್ಚರಿ ವ್ಯಕ್ತಪಡಿಸಿದ್ದರು ಎಂದಿದ್ದಾರೆ.
ಸದ್ಯದ ಭಾವನಗರದ ಬಿಜೆಪಿ ಅಧ್ಯಕ್ಷ ಕುಮಾರ್ಭಾಯ್ ಶಾಹ ಬದನಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಯೋಗೇಶ್ ಬದನಿ ಅವರ ಅಕೌಂಟ್ ಅನ್ನು ಯಾರೋ ಹ್ಯಾಕ್ ಮಾಡಿ ಈ ರೀತಿ ಮಾಡಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ