/newsfirstlive-kannada/media/media_files/2025/08/05/ksrtc-2025-08-05-15-26-58.jpg)
ಬೆಂಗಗಳೂರು: ಆಗಸ್ಟ್ 5 ರಂದು ಸಾರಿಗೆ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ ಎಂದು 30,000 ನೌಕರರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಸಾರಿಗೆ ಮುಷ್ಕರ ನಡೆಸದಂತೆ ಹೈಕೋರ್ಟ್ ನಿರ್ದೇಶನ ನೀಡಿದ್ದರೂ ಚಾಲಕರು, ನಿರ್ವಾಹಕರು, ಡಿಪೋ ಸಿಬ್ಬಂದಿ ಸೇರಿ ಹಲವರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಇಷ್ಟೇ ಅಲ್ಲದೇ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗದೇ ಇರುವವರು, ಮಧ್ಯಾಹ್ನದ ಬಳಿಕ ಹಾಜರಾಗಲು ಕಾರಣವೇನು? ಎಂದು ಈ ಬಗ್ಗೆ ವಿವರಣೆ ನೀಡುವಂತೆ ನೋಟಿಸ್​ ನೀಡಲಾಗಿದೆ.
ಅಂದಿನ ದಿನ ರಜೆ ಹಾಕದೇ ಯಾರಿಗೂ ಹೇಳದೆ ಕೆಲಸಕ್ಕೆ ಹಾಜರಾಗದೇ ಇರುವುದರಿಂದ ಜನರಿಗೆ ಸಮಸ್ಯೆ ಆಗಿದೆ. ಜೊತೆಗೆ ಮುಷ್ಕರಕ್ಕೆ ಬೆಂಬಲ ನೀಡಿದ್ದೀರಿ. ನ್ಯಾಯಾಲಯದ ಆದೇಶ ಇದ್ದರೂ ಮುಷ್ಕರದಲ್ಲಿ ಭಾಗವಹಿಸುವ ಮೂಲಕ ಸಂಸ್ಥೆಗೆ ವಿರುದ್ಧವಾಗಿ ವರ್ತಿಸಿದ್ದೀರಿ. ನಿಗಮದ ಶಿಸ್ತು ಕ್ರಮ, ನಡೆತೆ ಉಲ್ಲಂಘಿಸಲಾಗಿದೆ ಎಂದು ನೋಟಿಸ್​ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ವರಲಕ್ಷ್ಮೀ ವೃತದಿಂದ ಸಂತೋಷ, ಸಮೃದ್ಧಿ.. ವರಮಹಾಲಕ್ಷ್ಮೀ ಪೂಜೆಗೆ ಮುಹೂರ್ತ ಹೇಗಿದೆ..?
ಹೈಕೋರ್ಟ್​ ಮುಷ್ಕರ ನಡೆಸದಂತೆ ನಿರ್ದೇಶನ ನೀಡಿರುವುದನ್ನು ಎಲ್ಲರಿಗೂ ತಿಳಿಸಲಾದರೂ ಕೆಲಸಕ್ಕೆ ಹಾಜರು ಆಗಿರಲಿಲ್ಲ. 2ನೇ ಬಾರಿ ವಿಚಾರಣೆ ವೇಳೆ ಮುಷ್ಕರದಲ್ಲಿ ಭಾಗಿಯಾದರೆ ಬಂಧಿಸಿ ಎಂದು ಹೈಕೋರ್ಟ್ ಹೇಳಿದ ಮೇಲೆ ಕೆಲವರು ಕೆಲಸಕ್ಕೆ ಹಾಜರು ಆಗಿದ್ದರು. ಅವರಿಗೆ ತಡವಾಗಿದ್ದಕ್ಕೆ ಕಾರಣ ಕೇಳಲಾಗಿದೆ. ಇನ್ನು 2ನೇ ಬಾರಿ ನ್ಯಾಯಾಲಯ ಹೇಳಿದ ಮೇಲೆಯೂ ಕೆಲಸಕ್ಕೆ ಹಾಜರಾಗದೇ ಇರುವವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ​
30,000 ನೌಕರರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ನೀವು ಬೇಡಿಕೆ ಈಡೇರಿಸಿದ್ದರೇ ಇದೆಲ್ಲ ಆಗುತ್ತಿರಲಿಲ್ಲ ಎಂದಿದೆ. ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಮತ್ತೊಂದು ಸಭೆ ನಡೆಸಲಾಗುತ್ತದೆ. ಆಗಸ್ಟ್ 28ರಂದು ಮತ್ತೊಂದು ಸುತ್ತಿನ ಸಭೆ ಇದ್ದು ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ನೇತೃತ್ವ ವಹಿಸಲಿರೋ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ