/newsfirstlive-kannada/media/media_files/2025/08/07/varalakshmi-vratam-2025-08-07-21-35-01.jpg)
ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಡಗರ ಮನೆ ಮಾಡಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದಂದು ವರಮಹಾಲಕ್ಷ್ಮೀ ವ್ರತವನ್ನು ಆಚರಿಸಲಾಗುತ್ತದೆ. ಈ ಉಪವಾಸವು ಅಷ್ಟ ಲಕ್ಷ್ಮೀಯ ಆರಾಧನೆಯನ್ನು ಹೋಲುತ್ತದೆ. ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಆಚರಿಸ್ತಾರೆ.
ಇದನ್ನೂ ಓದಿ: ಉಗ್ರರ ಟಾರ್ಗೆಟ್ ಆಗಿತ್ತು ಧರ್ಮಸ್ಥಳದ ಮಂಜುನಾಥ ದೇಗುಲ.. ಕುಕ್ಕರ್ ಬ್ಲಾಸ್ಟ್ ಕೇಸ್ನ ಸತ್ಯ ಬಯಲು
ವರಲಕ್ಷ್ಮೀ ವೃತ ಆಚರಿಸೋದ್ರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ವೈಭವ ಒಲಿದು ಬರುತ್ತದೆ. ಹಾಗೆಯೇ ಬಡತನ ಹಾಗೂ ದುಃಖಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ವರಲಕ್ಷ್ಮೀ ವೃತವನ್ನು ಲಕ್ಷ್ಮೀ ದೇವಿಗೆ ಅರ್ಪಿಸಲಾಗುತ್ತದೆ. ಈ ದಿನ ದೀಪಾವಳಿಯಂದು ಮಾಡುವಂತೆಯೇ ವರಲಕ್ಷ್ಮೀಯನ್ನು ಪೂಜಿಸಲಾಗುತ್ತದೆ.
ವರಲಕ್ಷ್ಮಿ ವ್ರತ
ಪಂಚಾಂಗದ ಪ್ರಕಾರ.. ವರಲಕ್ಷ್ಮೀ ವ್ರತದ ದಿನಾಂಕವು ಆಗಸ್ಟ್ 8 ರಂದು ಸೂರ್ಯೋದಯದೊಂದಿಗೆ ಪ್ರಾರಂಭವಾಗುತ್ತದೆ. ಆಗಸ್ಟ್ 9 ರಂದು ಸೂರ್ಯೋದಯದೊಂದಿಗೆ ಕೊನೆಗೊಳ್ಳುತ್ತದೆ.
- ಪೂಜೆ ಮುಹೂರ್ತ: ಸಿಂಹ ಲಗ್ನ ಪೂಜಾ ಮುಹೂರ್ತ - ಬೆಳಗ್ಗೆ 6:29 ರಿಂದ ಪ್ರಾರಂಭವಾಗಿ 8:46ಕ್ಕೆ ಕೊನೆಗೊಳ್ಳುತ್ತದೆ. ಇದರ ಅವಧಿ 2 ಗಂಟೆ 17 ನಿಮಿಷಗಳು.
- ವೃಶ್ಚಿಕ ಲಗ್ನ ಪೂಜಾ ಮುಹೂರ್ತ: ಮಧ್ಯಾಹ್ನ 1:22 ರಿಂದ 3:41 ರವರೆಗೆ ಇರುತ್ತದೆ. ಇದರ ಅವಧಿ 2 ಗಂಟೆ 19 ನಿಮಿಷಗಳು.
- ಕುಂಭ ಲಗ್ನ ಮುಹೂರ್ತ: ಸಂಜೆ 7:27 ರಿಂದ 8:54 ರವರೆಗೆ ಇರುತ್ತದೆ. ಇದರ ಅವಧಿ 1 ಗಂಟೆ 27 ನಿಮಿಷಗಳು.
- ವೃಷಭ ಲಗ್ನ ಮುಹೂರ್ತ: ಆಗಸ್ಟ್ 9 ರಂದು ರಾತ್ರಿ 11:55 ರಿಂದ ಬೆಳಗ್ಗೆ 1:50 ರವರೆಗೆ ಇರುತ್ತದೆ. ಇದರ ಅವಧಿ 1 ಗಂಟೆ 56 ನಿಮಿಷಗಳು.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಂದು ಹುಲಿ ಅಸಹಜ ಸಾವು; 7 ವರ್ಷದ ಹೆಣ್ಣು ಹುಲಿಯ ಕಳೇಬರ ಪತ್ತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ