/newsfirstlive-kannada/media/media_files/2025/08/07/karnataka-tiger-2025-08-07-20-00-31.jpg)
ಹುಲಿ Photograph: (AI)
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಬರುವ ಭದ್ರಾ ಅಭಯಾರಣ್ಯದ ಹುಲಿ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿ ವ್ಯಾಘ್ರವೊಂದು ಮೃತಪಟ್ಟಿದೆ.
ಲಕ್ಕವಳ್ಳಿ ವಲಯದ ಕೂಟ್ ರಸ್ತೆಯಲ್ಲಿ ಹುಲಿಯ ಕಳೇಬರ ಪತ್ತೆಯಾಗಿದೆ. ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಕಣ್ಣಿಗೆ ಹುಲಿ ಕಳೇಬರ ಪತ್ತೆ ಆಗಿದೆ. ವಾಸನೆ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿದಾಗ ಅಸಲಿ ವಿಚಾರ ಗೊತ್ತಾಗಿದೆ.
7 ವರ್ಷ ಪ್ರಾಯದ ಹೆಣ್ಣು ಹುಲಿಯ ಮೃತದೇಹ ಇದಾಗಿದೆ. ಎರಡು ಹುಲಿಗಳ ಮಧ್ಯೆ ಕಾದಾಟದಲ್ಲಿ ಮೃತಪಟ್ಟಿರುವ ಶಂಕೆ ಇದೆ. ಮೃತಪಟ್ಟಿರುವ ಹುಲಿಯ ದೇಹದ ಮೇಲೆ ಕಾದಾಟ ನಡೆಸಿರುವ ಗಾಯದ ಗುರುತಿದೆ. ಸದ್ಯ ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ತನಿಖೆಯ ಭಾಗವಾಗಿ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ, ರಕ್ತ ಮಾದರಿ, ದೇಹದ ಕೆಲ ಭಾಗ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಇದನ್ನೂ ಓದಿ:ಕಲಬುರಗಿಯಲ್ಲಿ ಸಾರಾಯಿ ಚಟ ಬಿಡಿಸಲು ಕೊಟ್ಟ ನಾಟಿ ಔಷಧಿ ಸೇವನೆಯಿಂದ ನಾಲ್ವರು ಬಲಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ