/newsfirstlive-kannada/media/media_files/2025/08/07/mangalore-cooker-case-2025-08-07-20-51-39.jpg)
ಮಂಗಳೂರು ಕುಕ್ಕರ್ ಬ್ಲಾಸ್ಟ್ ಕ್ರಿಮಿಗಳ ಬೆನ್ನುಬಿದ್ದ ಇ.ಡಿ ಅಧಿಕಾರಿಗಳು ಭಯಾನಕ ಸತ್ಯವೊಂದನ್ನ ಬಯಲಿಗೆಳೆದಿದ್ದಾರೆ. ಧರ್ಮಸ್ಥಳವೇ ಕುಕ್ಕರ್ ಕಿರಾತಕರ ಟಾರ್ಗೆಟ್ ಆಗಿತ್ತು ಅನ್ನೋ ವರದಿಯನ್ನ ಇ.ಡಿ ಬಿಚ್ಚಿಟ್ಟಿದೆ. ಕ್ರಿಮಿಗಳ ಕೃತ್ಯಕ್ಕೆ ಕ್ರಿಪ್ಟೊ ಕರೆನ್ಸಿ ಮೂಲಕ ಹಣ ಸಂದಾಯ ಆಗಿತ್ತು ಅನ್ನೋದು ದೇಶವನ್ನೇ ಬೆಚ್ಚಿಬೀಳಿಸಿದೆ.
2022ರ ನವೆಂಬರ್ 19ರಂದು ಮಂಗಳೂರಿನ ಹೊರವಲಯದ ಕಂಕನಾಡಿಯಲ್ಲಿ ಬ್ಲಾಸ್ಟ್ ಆಗಿದ್ದ ಈ ಆಟೋ ಕೇವಲ ರಾಜ್ಯ ಮಾತ್ರವಲ್ಲ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಆಟೋದಲ್ಲಿ ಸ್ಫೋ*ಟಗೊಂಡಿದ್ದ ಕುಕ್ಕರ್ ಬಾಂ*ಬ್ ಕರಾಳ ಸತ್ಯವೊಂದನ್ನ ಬಿಚ್ಚಿಟ್ಟಿತ್ತು. ಈ ಕುಕ್ಕರ್ ಬಾಂ*ಬ್ ಕ್ರಿಮಿ ಶಾರೀಕ್ನ ಜಾಡು ಹಿಡಿದು ಹೊರಟ ಇ.ಡಿ ತಂಡದ ಮುಂದೆ ಭಯಾನಕ ಸತ್ಯವೊಂದು ಬಯಲಾಗಿದೆ.
ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಕೇಸಲ್ಲಿ ಸ್ಫೋ*ಟಕ ಸತ್ಯ ಬಯಲು
ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿ ಪೊಲೀಸರ ಕೈಗೆ ಲಾಕ್ ಆದ ಉಗ್ರ ಮಹಮ್ಮದ್ ಶಾರೀಕ್ ಮತ್ತೊಂದು ಮುಖವಾಡ ಬಯಲಾಗಿದೆ. ಈ ಶಾರಿಕ್ ಧರ್ಮಸ್ಥಳ ಮಂಜುನಾಥ ದೇಗುಲದ ಬಳಿ ಬ್ಲಾಸ್ಟ್ ಮಾಡಲು ಸ್ಕೆಚ್ ಹಾಕಿದ್ನಂತೆ. ಆದ್ರೆ ಗುರುವಿಗೆ ತಿರುಮಂತ್ರ ಅನ್ನೋ ಹಾಗೆ ಆ ಬ್ಲಾಸ್ಟ್ ಪ್ಲಾನ್ ಫೇಲ್ ಆಗಿ ಕುಕ್ಕರ್ ಮಂಗಳೂರಿನಲ್ಲೇ ಬ್ಲಾಸ್ಟ್ ಆಗಿತ್ತು.
ಇದನ್ನೂ ಓದಿ: ಯೂಟ್ಯೂಬರ್ಸ್ ಮೇಲೆ ಹಲ್ಲೆ.. ಧರ್ಮಸ್ಥಳ ಉದ್ವಿಘ್ನ, ಕೇಸ್ ದಾಖಲು
ಧರ್ಮಸ್ಥಳದಲ್ಲಿ ಸ್ಫೋ*ಟಕ್ಕೆ ಸ್ಕೆಚ್!
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲದ ಬಳಿ ಸ್ಫೋಟಕ್ಕೆ ಉಗ್ರ ಮಹಮ್ಮದ್ ಶಾರೀಕ್ ಸಂಚು ರೂಪಿಸಿದ್ದ.. ಶಾರಿಕ್ ಮೂಲಕ ಆಟೋದಲ್ಲಿ ಕುಕ್ಕರ್ ಬಾಂಬ್ ಇಟ್ಟು ಐಸಿಸ್ ಉಗ್ರರು ಬ್ಲಾಸ್ಟ್ ಮಾಡಲು ಪ್ಲಾನ್ ಮಾಡಿದ್ರು. ಆದ್ರೆ ಉಗ್ರರ ಟೈಮರ್ ಯಡವಟ್ಟಿನಿಂದ ಮಾರ್ಗಮಧ್ಯೆ ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿತ್ತು.. 90 ನಿಮಿಷಗಳ ಬದಲಿಗೆ 9 ನಿಮಿಷಗಳಿಗೆ ಕುಕ್ಕರ್ ಬಾಂ*ಬ್ ಸ್ಫೋಟಗೊಂಡು ಶಾರಿಕ್ ಗಂಭೀರವಾಗಿ ಗಾಯಗೊಂಡಿದ್ದ.
ಕುಕ್ಕರ್ ಸ್ಫೋ*ಟಕ್ಕೆ ಟೆಲಿಗ್ರಾಂ ಆ್ಯಪ್ ಮೂಲಕ ತರಬೇತಿ!
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲದ ಬಳಿ ಸ್ಫೋ*ಟ ನಡೆಸಲು ಟೆಲಿಗ್ರಾಂ ಆ್ಯಪ್ ಮೂಲಕ ತರಬೇತಿ ನೀಡಲಾಗಿತ್ತಂತೆ. ಉಗ್ರ ಶಾರಿಕ್ಗೆ ಟೆಲಿಗ್ರಾಂ ಆ್ಯಪ್ ಮೂಲಕ ಐಸಿಸ್ ಉಗ್ರರು ಕುಕ್ಕರ್ ಬಾಂ*ಬ್ ತಯಾರಿ ಬಗ್ಗೆ ತರಬೇತಿ ನೀಡಿದ್ರಂತೆ.. ಅಲ್ಲದೇ ಇದಕ್ಕಾಗಿ ಕ್ರಿಪ್ಟೊ ಕರೆನ್ಸಿ ಮೂಲಕ ಶಾರೀಕ್ ಹಣ ಸಹ ವರ್ಗಾಯಿಸಿಕೊಂಡಿದ್ದನಂತೆ.. 2 ಲಕ್ಷ 68 ಸಾವಿರ ಹಣವನ್ನ ಕ್ರಿಪ್ಟೋ ಕರೆನ್ಸಿ ಮೂಲಕ ಕಳಿಸಿಕೊಂಡಿದ್ದ ಶಾರಿಕ್, ಈ ಹಣದಿಂದ IED ಬಾಂಬ್ ತಯಾರಿಕೆಗೆ ಬೇಕಾಗಿದ್ದನ್ನ ಖರೀದಿ ಮಾಡಿದ್ದ.. ಮೈಸೂರು, ಕೇರಳ, ತಮಿಳುನಾಡುನಲ್ಲೂ ಬಾಂ*ಬ್ ಇಡಲು ಉಗ್ರರು ಪ್ಲಾನ್ ಮಾಡಿದ್ರಂತೆ.
ಇದನ್ನೂ ಓದಿ: ಧರ್ಮಸ್ಥಳ ಘರ್ಷಣೆ; ಸ್ಥಳದಲ್ಲಿ ನಡೆದ ಘಟನೆ ಬಗ್ಗೆ ಸತ್ಯ ಬಿಚ್ಚಿಟ್ಟ ಬಿಗ್ಬಾಸ್ ಸ್ಪರ್ಧಿ ರಜತ್ ಕಿಶನ್
ಅದಕ್ಕೂ ಮುನ್ನ ಧರ್ಮಸ್ಥಳ ದೇಗುಲ ಬಳಿ ಬ್ಲಾಸ್ಟ್‌ಗೆ ಪ್ಲಾನ್ ಮಾಡಲಾಗಿತ್ತು.. ಈ ಪ್ರಕರಣದ ಪ್ರಮುಖ ಆರೋಪಿ ಮಾಜ್ ಮುನೀರ್ ಪ್ಲಾನ್ ಸದ್ಯ ಇ.ಡಿ ವಿಚಾರಣೆ ವೇಳೆ ಬಯಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವನಾದ ಸೈಯದ್ ಯಾಸಿನ್ ಖಾತೆಯಲ್ಲಿದ್ದ 29,176 ರೂಪಾಯಿ ಹಣವನ್ನ ಸದ್ಯ ಇ.ಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಒಟ್ನಲ್ಲಿ ಕುಕ್ಕರ್ ಬಾಂ*ಬ್ ಕೃತ್ಯದ ಕ್ರಿಮಿಗಳು ಧರ್ಮಸ್ಥಳ ದೇವಸ್ಥಾನದ ಬಳಿ ಬ್ಲಾಸ್ಟ್‌ಗೆ ಪ್ಲಾನ್ ಮಾಡಿದ್ರೂ ಅನ್ನೋ ಸತ್ಯ ನಿಜಕ್ಕೂ ರಾಜ್ಯವನ್ನ ಬೆಚ್ಚಿ ಬೇಳಿಸಿದೆ.. ಇನ್ನೂ ಈ ಕ್ರಿಮಿಗಳಿಂದ ಅದ್ಯಾವ ಸತ್ಯವನ್ನ ಇ.ಡಿ ಅಧಿಕಾರಿಗಳು ಬಾಯ್ಬಿಡಿಸುತ್ತಾರೆ ಕಾದು ನೋಡಬೇಕಿದೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ; ಪಾಯಿಂಟ್ 13ರ ಪರಿಶೋಧನೆಗೆ GPR ಬಳಕೆ ಮಾಡಲು ಎಸ್ಐಟಿ ಪ್ಲಾನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ