/newsfirstlive-kannada/media/media_files/2025/08/06/dharmastala-clash-2025-08-06-22-48-37.jpg)
ಧರ್ಮಸ್ಥಳ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ
ಮಂಗಳೂರು: ಧರ್ಮಸ್ಥಳದಲ್ಲಿ ಇವತ್ತು ನಡೆದ ಘರ್ಷಣೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯೂಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆ ಮತ್ತು ಎರಡು ವಾಹನಗಳಿಗೆ ಹಾನಿ ನಡೆಸಿದ ಬಗ್ಗೆ ಕೇಸ್ ದಾಖಲಾಗಿದೆ.
ಹಾಗೆಯೇ ಖಾಸಗಿ ನ್ಯೂಸ್ ಚಾನೆಲ್​​ನ ವರದಿಗಾರನ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿಯೂ ಪ್ರಕರಣ ದಾಖಲಾಗಿದೆ. ಧರ್ಮಸ್ಥಳ ಪಾಂಗಾಳದಲ್ಲಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣಾ ಆವರಣದಲ್ಲಿ ಗುಂಪು ಸೇರಿ ಶಾಂತಿ ಭಂಗಕ್ಕೆ ಸಂಬಂಧಿಸಿಯೂ ಕೇಸ್ ದಾಖಲಾಗಿದೆ. ಹಾಗೆಯೇ ಆಸ್ಪತ್ರೆಯ ಮುಂದೆ ಕಾನೂನು ಬಾಹಿರ ಗುಂಪು ಸೇರಿರುವ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಗಲಾಟೆಗೆ ಸಂಬಂಧಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಲು ಎಸ್​ಪಿ ಅರುಣ್ ಸೂಚನೆ ನೀಡಿದ್ದು, ಅಂತೆಯೇ ಕೇಸ್ ದಾಖಲಾಗಿದೆ.
ಇದನ್ನೂ ಓದಿ: Breaking: ಧರ್ಮಸ್ಥಳ ಗ್ರಾಮದಲ್ಲಿ ಯೂಟ್ಯೂಬರ್​ಗಳ ಮೇಲೆ ಹಲ್ಲೆ..
/filters:format(webp)/newsfirstlive-kannada/media/media_files/2025/08/06/dharmasthala-youtuber-2025-08-06-19-50-22.jpg)
ಏನಿದು ಪ್ರಕರಣ..?
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅಸಹಜ ಸಾವು ಪ್ರಕರಣದ ತನಿಖೆಯನ್ನು ಎಸ್​ಐಟಿ ನಡೆಸ್ತಿದೆ. ಅನಾಮಿಕ ದೂರುದಾರ ಕೊಟ್ಟ ಮಾಹಿತಿ ಆಧಾರದ ಮೇಲೆ ಎಸ್​ಐಟಿ, ಅಲ್ಲೇ ಬೀಡು ಬಿಟ್ಟು ತೀವ್ರ ತನಿಖೆ ನಡೆಸ್ತಿದೆ. ಸದ್ಯ ಬುರುಡೆ ರಹಸ್ಯವನ್ನು ಬೆನ್ನು ಹತ್ತಿರುವ ಅಧಿಕಾರಿಗಳು, ಅನಾಮಿಕ ಗುರುತು ಮಾಡಿದ ಜಾಗವನ್ನು ಅಗೆದು ಅಸ್ಥಿ ಪಂಜರಕ್ಕಾಗಿ ಹುಡುಕಾಟ ನಡೆಸ್ತಿದೆ.
ಮತ್ತೊಂದು ಕಡೆ ಎಸ್​​ಐಟಿ ತನಿಖೆಯನ್ನು ಮಾಧ್ಯಮಗಳು ಹಾಗೂ ಯುಟ್ಯೂಬರ್​​ಗಳು ನಿರಂತರವಾಗಿ ವರದಿ ಮಾಡುತ್ತಿವೆ. ಆದರೆ ಕೆಲವು ಯೂಟ್ಯೂಬರ್​ಗಳು, ಧರ್ಮಸ್ಥಳ ಪ್ರಕರಣದ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿವೆ ಅನ್ನೋದು ಅಲ್ಲಿನ ಸ್ಥಳೀಯರ ಆರೋಪ. ನಮ್ಮ ಕ್ಷೇತ್ರದ ಮತ್ತು ಪ್ರತಿಷ್ಠಿತ ಕುಟುಂಬ ಒಂದನ್ನು ಗುರಿಯಾಗಿಸಿಕೊಂಡು ಯೂಟ್ಯೂಬರ್​ಗಳು ಸುಳ್ಳು ಸುದ್ದಿಯನ್ನು ಹೇಳ್ತಿದ್ದಾರೆ ಎಂದು ಸ್ಥಳೀಯರು ರೊಚ್ಚಿಗೆದ್ದಿದ್ದಾರೆ.
ಇವತ್ತು ಆಗಿದ್ದು ಏನು..?
ಧರ್ಮಸ್ಥಳ ಪ್ರಕರಣದ ಬಗ್ಗೆ ನಿರಂತರವಾಗಿ ವರದಿ ಮಾಡಿಕೊಂಡು ಬರುತ್ತಿದ್ದ ಸುಮಾರು 40 ಯೂಟ್ಯೂಬರ್​ಗಳು ಇವತ್ತು ಧರ್ಮಸ್ಥಳಕ್ಕೆ ಬರುತ್ತಿದ್ದರು. ಈ ವಿಚಾರ ಅಲ್ಲಿನ ಸ್ಥಳೀಯರಿಗೆ ಗೊತ್ತಾಗಿದೆ. ಯೂಟ್ಯೂಬರ್​ಗಳ ಸುಳ್ಳು ಸುದ್ದಿಯನ್ನು ಖಂಡಿಸಿ ಪ್ರತಿಭಟನೆ ಮುಂದಾಗಿದ್ದಾರೆ. ಈ ವೇಳೆ ಯೂಟ್ಯೂಬರ್​ಗಳು ಹಾಗೂ ಧರ್ಮಸ್ಥಳ ಗ್ರಾಮದ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಆಗ ನೂಕಾಟ, ತಳ್ಳಾಟ ನಡೆದು ಕೆಲವು ಯೂಟ್ಯೂಬರ್​ಗಳ ಮೇಲೆ ಹಲ್ಲೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನು, ಗಂಭೀರವಾಗಿ ಗಾಯಗೊಂಡಿರುವ ಮೂವರು ಯೂಟ್ಯೂಬರ್​ಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ವಿಧಿ ಎಂಥ ಕ್ರೂರ ನೋಡಿ.. ಕಣ್ಮುಚ್ಚಿದ ಅಮ್ಮ, ಒಂದು ದಿನದ ಕಂದಮ್ಮ ಈಗ ತಬ್ಬಲಿ
ತೀವ್ರಗೊಂಡ ಗಲಾಟೆ..
ನೂಕಾಟ, ತಳ್ಳಾಟದಲ್ಲಿ ಗಲಾಟೆ ತೀವ್ರಗೊಂಡಿತ್ತು. ಸ್ಥಳೀಯರು ಹಲ್ಲೆ ಮಾಡ್ತಿರುವ ದೃಶ್ಯಗಳು ಮೊಬೈಲ್​ನಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೊತೆಗೆ ಕೆಲವು ಕ್ಯಾಮರಾಗಳನ್ನೂ ಒಡೆದು ಹಾಕಲಾಗಿದೆ. ಅದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋಗಳು ಕೂಡ ಸಾಕ್ಷಿಯಾಗಿ ಇವೆ.
ಸ್ಥಳೀಯರ ಆರೋಪ ಏನು..?
ಧರ್ಮಸ್ಥಳ ವಿರುದ್ಧದ ಆರೋಪ ಪ್ರಕರಣದಲ್ಲಿ ಎಸ್​ಐಟಿ ತನಿಖೆ ನಡೆಸ್ತಿದೆ. ತನಿಖೆಯಿಂದ ಸತ್ಯ ಹೊರ ಬರಲಿದೆ. ಆದರೆ ಕೆಲವು ಯೂಟ್ಯೂಬರ್​ಗಳು ಸುಖಾ ಸುಮ್ಮನೆ ಕ್ಷೇತ್ರದ ಬಗ್ಗೆ ಸುಳ್ಳು ಆರೋಪ ಮಾಡ್ತಿದ್ದಾರೆ. ಇದು ನಿಲ್ಲಬೇಕು. ಯೂಟ್ಯೂಬರ್​ಗಳು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬಾರದು ಅಂತಾ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಏನಾಗ್ತಿದೆ..?
ಸದ್ಯ ಧರ್ಮಸ್ಥಳ ಗ್ರಾಮಸ್ಥರೆಲ್ಲ ಅಲ್ಲಿನ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದಾರೆ. ಯೂಟ್ಯೂಬರ್​ಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಕ್ಷೇತ್ರದ ಬಗ್ಗೆ ಸುಳ್ಳು ಮಾಹಿತಿ ನೀಡ್ತೀರೋದನ್ನು ನಾವು ಸಹಿಸಲ್ಲ. ನಮಗೆ ನ್ಯಾಯಬೇಕು. ಕ್ಷೇತವನ್ನು ನಾವು ಉಳಿಸಿಕೊಳ್ಳಬೇಕು. ಇದಕ್ಕೆಲ್ಲ ಪೊಲೀಸರು ನಮಗೆ ಪರಿಹಾರ ನೀಡಬೇಕು ಅಂತಾ ಧರ್ಮಸ್ಥಳ ಠಾಣೆ ಮುಂದು ಪ್ರತಿಭಟನೆ ನಡೆಸ್ತಿದ್ದಾರೆ. ಪೊಲೀಸರು ಸ್ಥಳೀಯರ ಮನವೊಲಿಸರು ಪ್ರಯತ್ನ ಮಾಡ್ತಿದ್ದಾರೆ.
ಇದನ್ನೂ ಓದಿ: ರಮ್ಯಾಗೆ ಅಶ್ಲೀಲ ಮೆಸೇಜ್ ಪ್ರಕರಣ.. ಕೊಪ್ಪಳದಲ್ಲಿ ಮತ್ತೊಬ್ಬ ಆರೋಪಿಯ ಬೇಟೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us