ವಿಧಿ ಎಂಥ ಕ್ರೂರ ನೋಡಿ.. ಕಣ್ಮುಚ್ಚಿದ ಅಮ್ಮ, ಒಂದು ದಿನದ ಕಂದಮ್ಮ ಈಗ ತಬ್ಬಲಿ

ಬೆಂಗಳೂರಲ್ಲಿ ದಾರುಣ ಘಟನೆ ನಡೆದಿದೆ. ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ, ಕೆಲವೇ ಹೊತ್ತಿನಲ್ಲೇ ಜೀವಕಳೆದುಕೊಂಡಿದ್ದಾಳೆ. ಪೋಷಕರು ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಖುಷಿಯಲ್ಲಿರಬೇಕಿದ್ದ ಕುಟುಂಬದಲ್ಲಿ ಶೋಕ ಆವರಿಸಿದೆ.

author-image
Ganesh
prognet lady died case
Advertisment

ತಾಯ್ತನ ಅನ್ನೋದೇ ಹೆಣ್ಣಿನ ಸೌಭಾಗ್ಯ.. 9 ತಿಂಗಳು.. ಆ ಒಂದು ದಿನಕ್ಕಾಗಿ ಅವಳು ತನ್ನೆಲ್ಲಾ ಕನಸು, ಆಸೆಗಳನ್ನ ಹೊತ್ಕೊಂಡು ಅಮ್ಮಾ ಅನ್ನೋ ಧ್ವನಿಗಾಗಿ, ಆ ಮಗುವಿನ ಹೆಜ್ಜೆಗಾಗಿ ಕಾಯ್ತಾ ಇದ್ಲು.. ಆದ್ರೆ ವಿಧಿ ಎಂತಹ ಕ್ರೂರಿ ನೋಡಿ.. ಮಗುವಿನ ಅಳೋ ಶಬ್ದ ಕೇಳೋಕು ಮುಂಚೆನೇ ಅವಳು ಕಣ್ಮುಚ್ಚಿ ಬಿಟ್ಟಿದ್ದಾಳೆ.. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತ ಪೋಷಕರು ಆಕ್ರೋಶ ಹೊರಹಾಕಿದ್ದಾರೆ  


ವೈದ್ಯರ ನಿರ್ಲಕ್ಷ್ಯ ಆರೋಪ

ಹೆಸ್ರು ತನುಶ್ರೀ.. 29 ವರ್ಷ.. ಅದ್ಧೂರಿಯಾಗಿ ಸೀಮಂತ ಮಾಡ್ಕೊಂಡಿದ್ದ ತನುಶ್ರೀ ಹೆಣ್ಣು ಮಗುವಿಗೆ ಜನ್ಮ ನೀಡಿ ಕೊನೆಯುಸಿರೆಳೆದ್ರೆ, ಅಮ್ಮನಿಲ್ಲದೇ ಕಂದಮ್ಮನ ಕಂಡು ತಂದೆ ಕಣ್ಣೀರು ಸುರಿಸಿದ್ದಾರೆ. ಇದಕ್ಕೆಲ್ಲಾ ವೈದ್ಯರೇ ಕಾರಣ ಅಂತ ಆಸ್ಪತ್ರೆ ಎದುರು ಕುಟುಂಬಸ್ಥರು ಪ್ರತಿಭಟಿಸಿದ್ದಾರೆ.

ಇದನ್ನೂ ಓದಿ: ಮಾಧುರಿ ಆನೆಗಾಗಿ ಅಂಬಾನಿ ವಿರುದ್ಧ ಸಿಡಿದು ನಿಂತ ಜನ- ಆರೋಪಗಳಿಗೆ ಸ್ಪಷ್ಟನೆ ಕೊಟ್ಟ ವಂತಾರ

ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ್ಲಾ ತಾಯಿ?

  • ಮೊನ್ನೆ ಕೋಣನಕುಂಟೆಯ ಆಸ್ಟ್ರಾ ಆಸ್ಪತ್ರೆಗೆ ತನುಶ್ರೀ ಅಡ್ಮಿಟ್​​
  • ತನುಶ್ರೀ ಸ್ಥಿತಿ ಕಂಡು ವೈದ್ಯರು ಡೆಲಿವರಿ ಡೇಟ್​​ ಆಗಿಲ್ಲ ಎಂದಿದ್ರು
  • ಹೆರಿಗೆ ನೋವು ಹೆಚ್ಚಾದ್ದರಿಂದ ನಿನ್ನೆ ರಾತ್ರಿ ಸಿಸೇರಿಯನ್ ಆಗಿತ್ತು 
  • ಹೆಣ್ಣು ಮಗುವಿಗೆ ಜನ್ಮ ನೀಡಿದವಳ ಆರೋಗ್ಯ ಚೆನ್ನಾಗಿಯೇ ಇತ್ತು
  • ರಾತ್ರಿ ಆರೋಗ್ಯದಲ್ಲಿ ಏರುಪೇರು, ಕೊನೆಯುಸಿರೆಳೆದ ತನುಶ್ರೀ
  • ತಕ್ಷಣ ಕುಟುಂಬಸ್ಥರು ವೈದ್ಯರನ್ನ ಕರೆದಾಗ ಯಾರೂ ಇರ್ಲಿಲ್ವಂತೆ
  • ತನುಶ್ರೀ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತ ಆರೋಪ 
  • ಈ ಆರೋಪವನ್ನ ತಳ್ಳಿ ಹಾಕಿದ ಆಸ್ಟ್ರಾ ಆಸ್ಪತ್ರೆ ಆಡಳಿತ ಮಂಡಳಿ 

ಈ ಆರೋಪವನ್ನ ಆಸ್ಪತ್ರೆ ಆಡಳಿತ ಮಂಡಳಿ ತಳ್ಳಿ ಹಾಕಿದೆ. ವೈದ್ಯರ ನಿರ್ಲಕ್ಷ್ಯ ಆಗಿಲ್ಲ ಈ ಕೇಸ್‌ನಲ್ಲಿ ಅಂತಿದೆ. ದುರಂತ ಅಂದ್ರೆ ತನುಶ್ರೀಗೂ ತಾಯಿ ಇರಲಿಲ್ಲ, ತನುಶ್ರೀ ಗಂಡನಿಗೂ ತಾಯಿ ಇರಲಿಲ್ಲ. ಇದೀಗ ತನುಶ್ರೀ ಮಗುವೂ ಕೂಡ ತಾಯಿ ಇಲ್ಲದೆ ತಬ್ಬಲಿಯಾಗಿರೋದು ನಿಜಕ್ಕೂ ದುರಂತ.

ಇದನ್ನೂ ಓದಿ: ಧರ್ಮಸ್ಥಳ ಗ್ರಾಮದಲ್ಲಿ ಯೂಟ್ಯೂಬರ್​ಗಳ ಮೇಲೆ ಹಲ್ಲೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News
Advertisment