/newsfirstlive-kannada/media/media_files/2025/09/19/panipuri-2025-09-19-19-19-16.jpg)
ಪಾನಿಪುರಿ ಎಂದರೆ ಹಲವು ಜನರಿಗೆ ಎಲ್ಲಿಲ್ಲದ ಪ್ರೀತಿ. ರಸ್ತೆ ಬದಿ ಹೋಗುವಾಗ ಅವುಗಳನ್ನು ನೋಡಿ ಹೊಟ್ಟೆ ತುಂಬಾ ತಿನ್ನಬೇಕು ಎಂದುಕೊಳ್ಳುತ್ತಾರೆ. ಆದರೆ ಅಂಗಡಿ ಬಳಿ ಹೋದರೆ ನಾವು ಕೊಟ್ಟ ಹಣಕ್ಕೆ ಐದೋ, ಆರೋ ಪಾನಿಪುರಿ ಕೊಡುತ್ತಾರೆ. ಅದಕ್ಕೆ ಹೊಟ್ಟೆನೂ ತುಂಬಲ್ಲ, ಬಾಯಿ ರುಚಿಗೂ ಸರಿ ಹೋಗಲ್ಲ. ಕೈಯಲ್ಲಿ ಹಣ ಇಲ್ಲದಕ್ಕೆ ಇಷ್ಟೇ ಸಾಕು ಎಂದು ಬಿಡೋದು. ಆದರೆ ಈ ಪಾನಿಪುರಿಗಾಗಿ ಹೋರಾಟ ನಡೆದಿದೆ. ಇದು ಅಂತಿಂಥ ಧರಣಿಯಲ್ಲ, ನಡು ರಸ್ತೆಯಲ್ಲಿ ಕುಳಿತು ಪಾನಿಪುರಿಗಾಗಿ ನಡೆದ ಧರಣಿ.
ಗುಜರಾತ್​ನ ವಡೋದರಾದ ಮಧ್ಯ ವಯಸ್ಕದ, ದಡೂತಿ ದೇಹ ಹೊಂದಿದ ಮಹಿಳೆಯೊಬ್ಬರು ತಮ್ಮ ನಿವಾಸದ ಸಮೀಪ ಇರುವ ಸುರಸಾಗರ ಸರೋವರ ಬಳಿ ಪಾನಿಪುರಿ ತಿನ್ನಲು ಹೋಗಿದ್ದಾರೆ. ಸುರಸಾಗರ ಸರೋವರ ಬಳಿಯ ಅಂಗಡಿಯಲ್ಲಿ 20 ರೂಪಾಯಿಗೆ 6 ಪಾನಿಪುರಿಗಳು ಕೊಡಲಾಗುತ್ತದೆ. ಆದರೆ ಮಹಿಳೆ ಪಾನಿಪುರಿ ತಿನ್ನುವಾಗ ಕೇವಲ ನಾಲ್ಕೇ 4 ಪಾನಿಪುರಿಗಳನ್ನು ಅಂಗಡಿಯವನು ಕೊಟ್ಟಿದ್ದಾನಂತೆ.
ಹೀಗಾಗಿ ಮಹಿಳೆ ಇನ್ನೆರಡು ಪಾನಿಪುರಿಗಾಗಿ ರಂಪಾಟ ಮಾಡಿದ್ದಾಳೆ. ನೀನು 4 ಪಾನಿಪುರಿ ಹಾಕಿರುವುದು. 6 ಪಾನಿಪುರಿ ಹಾಕಿಲ್ಲ ಎಂದು ಮಹಿಳೆ ಕಣ್ಣೀರು ಹಾಕಿದ್ದಾಳೆ. ಈ ಸಂಗತಿ ಇಲ್ಲಿಗೆ ನಿಂತಿಲ್ಲ. ತಾನು ಕಳೆದುಕೊಂಡ ಎರಡೇ 2 ಪಾನಿಪುರಿಗಾಗಿ ಮಹಿಳೆ ರಸ್ತೆ ಮಧ್ಯೆ ಕುಳಿತು ಧರಣಿ ಆರಂಭಿಸಿದ್ದಾಳೆ. ಆ ಎರಡು ಪಾನಿಪುರಿ ಕೊಡುವವರೆಗೂ ನನ್ನ ಧರಣಿ ಮುಂದುವರೆಯುತ್ತದೆ ಎಂದು ಕಣ್ಣೀರು ಇಡುತ್ತ ಹೇಳಿದ್ದಾಳೆ.
ಇದನ್ನೂ ಓದಿ: ತಾಯಿಯ ಚಿನ್ನಾಭರಣಕ್ಕಾಗಿ ಸಹೋದರರ ನಡುವೆ ಗಲಾಟೆ.. ಅಣ್ಣ, ಅತ್ತಿಗೆ ಮೇಲೆ ಕಲ್ಲು ಹಾಕಿದ ತಮ್ಮ!
ಈ ವೇಳೆ ವಾಹನಗಳು, ಸವಾರರು ರಸ್ತೆ ಮಧ್ಯೆ ಆಕೆ ಕುಳಿತ್ತಿದ್ದರಿಂದ ಮೆಲ್ಲಗೆ ಪಕ್ಕದಿಂದ ಹಾದು ಹೋಗಿದ್ದಾರೆ. ಆದರೂ ಟ್ರಾಫಿಕ್​ ಬಿಸಿ ಜೋರಾಗಿತ್ತು. ಹೀಗಾಗಿ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಏನು ಎಂದು ಆ ದಡೂತಿ ಮಹಿಳೆಯನ್ನು ಕೇಳಿದ್ದಾರೆ. ಅದಕ್ಕೆ 20 ರೂಪಾಯಿಗೆ 6 ಪಾನಿಪುರಿ ಕೊಡಬೇಕು. ಆದ್ರೆ 4 ಕೊಟ್ಟಿದ್ದಾನೆ. ಇನ್ನು ಎರಡು ಕೊಡುತ್ತಿಲ್ಲ ಎಂದು ಮಹಿಳೆ ಪೊಲೀಸರ ಎದುರು ಕಣ್ಣೀರು ಹಾಕುತ್ತ ಹೇಳಿದ್ದಾಳೆ.
ಇದಕ್ಕೆ ಮಹಿಳಾ ಪೊಲೀಸ್ ಅಧಿಕಾರಿಯಂತೂ ಮುಖ ತಿರುಗಿಸಿಕೊಂಡು ನಕ್ಕಿದ್ದಾಳೆ. ಅಂತಹ ಘಟನೆ ಎಂದು ಪೊಲೀಸರು ಫುಲ್​ ನಕ್ಕು.. ನಕ್ಕು ಸುಸ್ತಾಗಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದವರೆಲ್ಲ ಈ ವಿಷಯ ಕೇಳಿ ನಗುಮುಖದಿಂದಲೇ ಮನೆಗೆ ಹೋಗಿದ್ದಾರೆ. ಆದರೆ ಪೊಲೀಸರು ಕೊನೆಗೆ ಮಹಿಳೆಗೆ ಪಾನಿಪುರಿ ಕೊಡಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಕನ್​ಫರ್ಮ್​​ ಇಲ್ಲ.
A woman started crying and protesting on the road in Surat, because a Panipuriwala gave her 4 panipuris instead of 6 for 20Rs
— 𝕲𝖆𝖓𝖊𝖘𝖍 * (@ggganeshh) September 19, 2025
Grave injustice .pic.twitter.com/v3tTbFW02O
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ