/newsfirstlive-kannada/media/media_files/2025/10/13/pooja_up_arrest-2025-10-13-22-20-54.jpg)
ಜೈಪುರ್: ಸ್ಥಳೀಯ ಉದ್ಯಮಿಯೊಬ್ಬರ ಹತ್ಯೆ ಪ್ರಕರಣದಲ್ಲಿ ಆಲ್ ಇಂಡಿಯಾ ಹಿಂದೂ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣೆ ನಂತರ ಜೈಲಿಗೆ ಹಾಕಲಾಗಿದೆ ಎಂದು ಹೇಳಲಾಗಿದೆ.
ಉದ್ಯಮಿ ಅಭಿಷೇಕ್ ಗುಪ್ತಾ ಅವರ ಪ್ರಕರಣದಲ್ಲಿ ಆಲ್ ಇಂಡಿಯಾ ಹಿಂದೂ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ರಾಜಸ್ತಾನದ ಭರತ್​ಪುರ ಜಿಲ್ಲೆಯ ಆಗ್ರಾ-ಜೈಪುರ ಹೆದ್ದಾರಿಯಲ್ಲಿರುವ ಲೋಧಾ ಬೈಪಾಸ್​ನಲ್ಲಿ ಪೂಜಾಳನ್ನು ಅರೆಸ್ಟ್ ಮಾಡಲಾಗಿತ್ತು. ಬಳಿಕ ಕೋರ್ಟ್​ಗೆ ಹಾಜರು ಪಡಿಸಿ ಜೈಲಿಗೆ ಹಾಕಲಾಗಿದೆ.
ಈ ಪ್ರಕರಣದಲ್ಲಿ ಇದು ಒಟ್ಟು 4ನೇ ಬಂಧನವಾಗಿದೆ. ಇದಕ್ಕೂ ಮೊದಲು ಪೂಜಾ ಗಂಡ ಅಶೋಕ್​ ಪಾಂಡೆ ಹಾಗೂ ಶಾರ್ಪ್​ ಶೂಟರ್ಸ್​ ಮೊಹಮ್ಮದ್ ಫಾಜಿಲ್, ಆಸಿಫ್​ನನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಆಲ್ ಇಂಡಿಯಾ ಹಿಂದೂ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪೂಜಾ ಜೈಲಿಗೆ ಹೋಗಿದ್ದಾರೆ.
ಏನಿದು ಘಟನೆ..?
ಉದ್ಯಮಿ ಅಭಿಷೇಕ್ ಗುಪ್ತಾಗೆ ಹಣಕಾಸಿನ ಸಂಬಂಧ ಪೂಜಾ ಕಡೆಯಿಂದ ಬೆದರಿಕೆ ನೀಡಲಾಗುತ್ತಿತ್ತು. ಸೆಪ್ಟೆಂಬರ್​ 26 ರಂದು ಅಲಿಗಢ ನಗರದ ಹೊರವಲಯದ ಮುಖ್ಯ ಖೇರೇಶ್ವರ ಮಂದಿರ ಕ್ರಾಸಿಂಗ್‌ನಲ್ಲಿ ತನ್ನ ತಂದೆ ಜೊತೆ ಬಸ್ ಹತ್ತುವಾಗ ಗುಪ್ತಾ ಅವರಿಗೆ ಗುಂಡಿಕ್ಕಲಾಯಿತು. ತಕ್ಷಣ ಅವರನ್ನು ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಬರುವಾಗಲೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು.
ಈ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಸುಪಾರಿ ಕೊಟ್ಟು ಗುಪ್ತಾರನ್ನು ಮುಗಿಸಲಾಗಿದೆ ಎಂಬುದು ಕಂಡುಕೊಂಡಿದ್ದರು. ಹಣಕಾಸಿಗಾಗಿ ಈ ರೀತಿ ಪೂಜಾ, ಅಶೋಕ್ ಸೇರಿ ಪ್ಲಾನ್ ಮಾಡಿ ಮಾಡಿಸಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿತ್ತು. ಅಲ್ಲದೇ ಗುಪ್ತಾಗೆ ನಿರಂತರ ಕಿರುಕುಳ ಕೂಡ ಕೊಟ್ಟಿದ್ದರು. ಈ ಯಾವುದಕ್ಕೂ ಮಣಿಯದ ಗುಪ್ತಾರನ್ನು ಮುಗಿಸಲು ತಮ್ಮ ಮನೆಗೆ ಯಾವಾಗಲೂ ಬರುತ್ತಿದ್ದ ಶಾರ್ಪ್​ ಶೂಟರ್ಸ್​ ಮೊಹಮ್ಮದ್ ಫಾಜಿಲ್, ಆಸಿಫ್​ಗೆ ಡೀಲ್ ಒಪ್ಪಿಸಿ ಜೀವ ತೆಗೆದಿದ್ದರು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ