/newsfirstlive-kannada/media/media_files/2025/10/25/bus_fire-2-2025-10-25-12-43-20.jpg)
ಹೈದರಾಬಾದ್​; ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆ ಬಳಿ ಖಾಸಗಿ ಕಾವೇರಿ ಬಸ್​ಗೆ ಬೆಂಕಿ ಹೊತ್ತಿಕೊಂಡು 22 ಪ್ರಯಾಣಿಕರು ಜೀವ ಕಳೆದುಕೊಂಡಿದ್ದರು. ಸದ್ಯ ಈ ಸಂಬಂಧ ತನಿಖೆ ಚುರುಕುಗೊಂಡಿದ್ದು ಬಸ್​ನಲ್ಲಿ 234 ರಿಯಲ್​ಮಿ ಸ್ಮಾರ್ಟ್​ಫೋನ್​ಗಳನ್ನು ಬೆಂಗಳೂರಿಗೆ ಪಾರ್ಸಲ್​ ಮಾಡಲಾಗುತ್ತಿತ್ತು ಎನ್ನುವ ಮಾಹಿತಿ ಬಹಿರಂಗಗೊಂಡಿದೆ.
ಬಸ್​ಗೆ ಬೆಂಕಿ ಹೊತ್ತಿಕೊಂಡಿದ್ದಾಗ ಈ ರಿಯಲ್​ಮಿ ಸ್ಮಾರ್ಟ್​ಫೋನ್​ಗಳ ಬ್ಯಾಟರಿಗಳು ಸ್ಪೋಟಗೊಂಡು ಅಗ್ನಿ ಇನ್ನಷ್ಟು ವ್ಯಾಪಿಸಿಕೊಳ್ಳಲು ಕಾರಣವಾಯಿತು. ಪ್ರಯಾಣಿಕರು ತಕ್ಷಣಕ್ಕೆ ಹೊರ ಬರಲು ಆಗಲಿಲ್ಲ. ಎಸಿಗಾಗಿಯೇ ಇದ್ದ ಬ್ಯಾಟರಿಗಳು ಕೂಡ ಸ್ಪೋಟಗೊಂಡಿವೆ. ಇದರಿಂದಲೇ ಹೆಚ್ಚಿನ ಪ್ರಯಾಣಿಕರ ಜೀವ ಹಾನಿಯಾಗಿದೆ ಎಂದು ಹೇಳಲಾಗಿದೆ.
ಈ ಎಲ್ಲ ರಿಯಲ್​ಮಿ ಸ್ಮಾರ್ಟ್​ಫೋನ್​ಗಳ ಬೆಲೆ ಎಷ್ಟು?
ಖಾಸಗಿ ಕಾವೇರಿ ಬಸ್​ನಲ್ಲಿ ಸಾಗಿಸುತ್ತಿದ್ದ 234 ಸ್ಮಾರ್ಟ್​ಫೋನ್​ಗಳ ಮೌಲ್ಯ 46 ಲಕ್ಷ ರೂಪಾಯಿ ಆಗಿದೆ. ಇವುಗಳನ್ನೆಲ್ಲಾ ಪ್ಯಾಕ್ ಮಾಡಿ ಹೈದರಾಬಾದ್ ಮೂಲದ ಉದ್ಯಮಿ ಮಂಗನಾಥ್ ಅವರು ಬಸ್​ ಮೂಲಕ ಬೆಂಗಳೂರಿಗೆ ಪಾರ್ಸಲ್ ಮಾಡುತ್ತಿದ್ದನು. ಆನ್​ಲೈನ್​ ದೈತ್ಯ ಕಂಪನಿಯಾಗಿರುವ ಫ್ಲಿಪ್​ಕಾರ್ಟ್​ ಕಂಪನಿಗೆ ಈ ಫೋನ್​ಗಳು ತಲುಪಬೇಕಿದ್ದವು. ಬಸ್​ನೊಳಗೆ ಫೋನ್​ಗಳ ಬ್ಯಾಟರಿ ಸ್ಪೋಟ ಆಗಿರುವುದರ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:BBK12; ದೊಡ್ಮನೆಯಲ್ಲಿ ಕೆಂಪೇಗೌಡ ಲುಕ್​ ಕೊಟ್ಟಿದ್ದ ಗಿಲ್ಲಿ ನಟ.. ಅರ್ಧ ಮೀಸೆ ಕಟ್!
/filters:format(webp)/newsfirstlive-kannada/media/media_files/2025/10/25/bus_fire_1-1-2025-10-25-07-24-04.jpg)
ಆಂಧ್ರ ಪ್ರದೇಶದ ಅಗ್ನಿ ಶಾಮಕ ಇಲಾಖೆಯ ಡೈರೆಕ್ಟರ್​ ಜನರಲ್ ಪಿ ವೆಂಕಟರಮಣ ಅವರು ಮಾತನಾಡಿ, ಈ ಸ್ಮಾರ್ಟ್​ಫೋನ್​ಗಳ ಸ್ಪೋಟಗೊಳ್ಳುವುದರ ಜೊತೆಗೆ ಎಸಿಗಳ ಎಲೆಕ್ಟ್ರಿಕಲ್ ಬ್ಯಾಟರಿಗಳು ಕೂಡ ಬ್ಲಾಸ್ಟ್ ಆಗಿವೆ. ಬಸ್​ಗೆ ಇದ್ದಂತಹ ಅಲ್ಯೂಮಿನಿಯಂ ಶೀಟ್​ಗಳು ಕೂಡ ಬೆಂಕಿಯ ಶಾಖದಿಂದ ಕರಗಿ ಹೋಗಿದ್ದವು.
ಆರಂಭದಲ್ಲಿ ಬಸ್​ನ ಮುಂಭಾಗದಲ್ಲಿ ಇಂಧನ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ. ಇದೇ ವೇಳೆ ಬೈಕ್​ ಬಂದು ಬಸ್​ಗೆ ಡಿಕ್ಕಿ ಹೊಡೆದು ಸಿಲುಕಿಕೊಂಡಿದೆ. ಬೈಕ್​ನ ಪೆಟ್ರೋಲ್​ ಕೂಡ ಲೀಕ್ ಆಗಿದೆ ಎನ್ನಲಾಗಿದೆ. ಈ ವೇಳೆ ಶಾಖವೋ ಅಥವಾ ಕಿಡಿಯಿಂದಲೋ ಬೆಂಕಿ ಕ್ಷಣಾರ್ಧದಲ್ಲೇ ಇಡೀ ಬಸ್​ ಅನ್ನು ವ್ಯಾಪಿಸಿಕೊಂಡಿದೆ. ಬೆಂಕಿಯಿಂದ ಸುಟ್ಟು ಮೂಳೆ ಹಾಗೂ ಬೂದಿ ಬೀಳುತ್ತಿರುವುದನ್ನು ಕಣ್ಣಾರೆ ಕಂಡಿದ್ದೇವೆ. ಇದು ಸಾವಿನ ಭೀಕರತೆ ಹೇಗಿತ್ತು ಅಂತ ತೋರಿಸುತ್ತದೆ ಎಂದು ಪಿ ವೆಂಕಟರಮಣ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us