Advertisment

ಶ್ರೀಕೃಷ್ಣ ರಥಕ್ಕೆ ವಿದ್ಯುತ್ ಸ್ಪರ್ಶಿಸಿ ಅನಾಹುತ.. ಐವರು ದುರಂತ ಅಂತ್ಯ

ಶ್ರೀಕೃಷ್ಣ ರಥಕ್ಕೆ ವಿದ್ಯುತ್ ಸ್ಪರ್ಶಿಸಿ ಐವರ ದುರ್ಮರಣ ಹೊಂದಿರುವ ಘಟನೆ ಹೈದ್ರಾಬಾದ್​ನ ಉಪ್ಪಲ್ ಠಾಣಾ ವ್ಯಾಪ್ತಿಯ ರಾಮಂತಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಮೆರವಣಿಗೆ ವೇಳೆ ರಥ ಎಳೆಯುತ್ತಿದ್ದಾಗ ದುರಂತ ಸಂಭವಿಸಿದೆ.

author-image
Ganesh Kerekuli
Hydrabad tragedy (2)
Advertisment

ಶ್ರೀಕೃಷ್ಣ ರಥಕ್ಕೆ ವಿದ್ಯುತ್ ಸ್ಪರ್ಶಿಸಿ ಐವರ ದುರ್ಮರಣ ಹೊಂದಿರುವ ಘಟನೆ ಹೈದ್ರಾಬಾದ್​ನ ಉಪ್ಪಲ್ ಠಾಣಾ ವ್ಯಾಪ್ತಿಯ ರಾಮಂತಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ. 

Advertisment

ಮೆರವಣಿಗೆ ವೇಳೆ ರಥ ಎಳೆಯುತ್ತಿದ್ದಾಗ ದುರಂತ ಸಂಭವಿಸಿದೆ. ದುರಂತದಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಶ್ರೀಕೃಷ್ಣ ಶೋಭಾ ಯಾತ್ರೆ ಮುಕ್ತಾಯ ಬಳಿಕ ಘಟನೆ ನಡೆದಿದೆ. 
ರಥವನ್ನು ತಳ್ಳುವಾಗ ವಿದ್ಯುತ್ ತಂತಿಗಳು ಸ್ಪರ್ಶಿಸಿ ಸಂಭವಿಸಿದ ಅವಘಡ ಇದು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರ ವಿವರಗಳು

ಕೃಷ್ಣ ಯಾದವ್ (24), ಅಂಜಿ ರೆಡ್ಡಿ ಅವರ ತಂದೆ ಶ್ರೀಕಾಂತ್ ರೆಡ್ಡಿ (35), ಸುರೇಶ್ ಯಾದವ್ (34), ರುದ್ರ ವಿಕಾಸ್ (39), ರಾಜೇಂದ್ರ ರೆಡ್ಡಿ (39) ಮೃತ ದುರ್ದೈವಿಗಳು. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಲ್ ಠಾಣೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. 

ಇದನ್ನೂ ಓದಿ:220 ಕಿಮೀ.. 9 ದಿನ ನಡಿಗೆ.. ಶತಾಯುಷಿ ತಾಯಿಯ ಹೆಗಲ ಮೇಲೆ ಹೊತ್ತು ವಿಠಲನ ತೋರಿಸಿದ ಸುಪುತ್ರ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Hyderabad tragedy Kannada News
Advertisment
Advertisment
Advertisment