/newsfirstlive-kannada/media/media_files/2025/08/18/belagavi-adhunika-shravankumara-2025-08-18-09-50-05.jpg)
55 ವರ್ಷದ ಸುಪುತ್ರನೊಬ್ಬ ಹೆತ್ತ ತಾಯಿಯನ್ನು 220 ಕಿಮೀ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ದೇವರ ದರ್ಶನ ಮಾಡಿಸುವ ಮೂಲಕ ಆಧುನಿಕ ಶಾವಣಕುಮಾರ ಎಂಬ ಬಿರುದಿಗೆ ಖ್ಯಾತನಾಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಅಮ್ಮನಿಗೆ ಪಾಂಡುರಂಗನ ವಿಠಲನ ದರ್ಶನ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದಲ್ಲಿ ತನ್ನ ಹೆತ್ತಮ್ಮಳನ್ನು ಮಹಾರಾಷ್ಟ್ರದ ಪಂಢರಪುರಕ್ಕೆ (Pandharpur) ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಪಾಂಡುರಂಗ ವಿಠಲನ ದರ್ಶನ ಮಾಡಿಸಿದ್ದಾರೆ. ಪುತ್ರ ಸದಾಶಿವ ಬಾನೆ ಎಂಬಾತ ಶತಾಯುಷಿ ತಾಯಿ ಸತ್ತೆವ್ವಾ ಲಕ್ಷಣ ಬಾನೆ (100) ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ವಿಠಲ ಪಾಂಡುರಂಗನ ದರ್ಶನ ಮಾಡಿಸಿದ್ದಾನೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಭಯಂಕರ ಮಳೆ.. ಶಾಲೆಗಳಿಗೆ ರಜೆ.. ಎಲ್ಲೆಲ್ಲಿ ಏನೆಲ್ಲ ಆಗ್ತಿದೆ..?
ಸದಾಶಿವ ಲಕ್ಷಣ ಬಾನೆ ಮಹಾರಾಜರು ತಮ್ಮ ತಾಯಿಯನ್ನು ಹೆಗಲ ಮೇಲೆ ಹೊತ್ತೊಕೊಂಡು ಭಕ್ತಿ ಪರಕಾಷ್ಟೆ ಮೆರೆದಿದ್ದಾರೆ. ಮಳೆಗಾಲದಲ್ಲಿ ಕೂಡ ಕುಗ್ಗದೆ ತಾಯಿಯನ್ನು ಪಂಡರಪುರ ದಿಂಡಿ ಪಾದಯಾತ್ರೆ ಮೂಲಕ 9 ದಿನಗಳ ಕಾಲ ಪಾದಯಾತ್ರೆಯಲ್ಲಿ ತಾನೊಬ್ಬನೆ ಹೆಗಲ ಮೇಲೆ ಕರೆದುಕೊಂಡು ಹೋಗಿ ವಿಠಲನ ದರ್ಶನ ಮಾಡಿಸಿದ್ದಾರೆ.
ಇದನ್ನೂ ಓದಿ: ತಂಡಕ್ಕೆ ಬೇಡವಾದ ಅಯ್ಯರ್, ಜೈಸ್ವಾಲ್.. ಬಿಸಿಸಿಐ ಮತ್ತೆ ಅನ್ಯಾಯ..?
ಸದಾಶಿವ ಅವರು ಪಂಡರಪುರ ವಿಠಲನ ಭಕ್ತರಾಗಿದ್ದಾರೆ. ಅಲ್ಲದೇ ಅವರು 15 ವರ್ಷಗಳಿಂದ ಪಂಡರಪುರಕ್ಕೆ ತೆರಳುತ್ತಾರೆ. ಶತಾಯಷಿ ತಮ್ಮ ತಾಯಿಯನ್ನು ಜೀವನದಲ್ಲಿ ಒಮ್ಮೆಯಾದರೂ ಪಂಡರಪುರದಿಂಡಿ ಪಾದಯಾತ್ರೆ ಮೂಲಕ ಹೆಗಲ ಮೇಲೆ ಹೊತ್ತುಕೊಂಡು ವಿಠಲನ ದರ್ಶನ ಮಾಡಬೇಕೆಂಬ ಮಹದಾಶೆ ಹೊಂದಿದ್ದಂತೆ.
ಇದನ್ನೂ ಓದಿ: 16ನೇ ವಯಸ್ಸಿನಿಂದಲೇ ಸಂಘಟನೆ, ಹೋರಾಟ.. CP ರಾಧಾಕೃಷ್ಣನ್ ಯಾರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ