ತಂಡಕ್ಕೆ ಬೇಡವಾದ ಅಯ್ಯರ್, ಜೈಸ್ವಾಲ್.. ಬಿಸಿಸಿಐ ಮತ್ತೆ ಅನ್ಯಾಯ..?

ಏಷ್ಯಾಕಪ್ ಟೀಮ್ (Asia Cup 2025) ಇಂಡಿಯಾ ಪ್ರಕಟಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ಇನ್ನೇನು ಮೂರ್ನಾಲ್ಕು ದಿನಗಳಲ್ಲಿ ಅನೌನ್ಸ್ ಮಾಡ್ತಾರೆ. ಈ ಏಷ್ಯಾಕಪ್​​ಗೆ ಪ್ರಕಟಿಸುವ ತಂಡದಲ್ಲಿ ಈ ಮುಂಬೈಕರ್​ ಮ್ಯಾಚ್ ವಿನ್ನರ್​ಗಳಿಗೆ ಸ್ಥಾನ ಸಿಗೋದು ಅನುಮಾನ.

author-image
Ganesh Kerekuli
yashaswi jaiswal shreyas iyer

ಜೈಸ್ವಾಲ್ ಮತ್ತು ಅಯ್ಯರ್

Advertisment

ಏಷ್ಯಾಕಪ್ ಟೀಮ್ (Asia Cup 2025) ಇಂಡಿಯಾ ಪ್ರಕಟಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ಇನ್ನೇನು ಮೂರ್ನಾಲ್ಕು ದಿನಗಳಲ್ಲಿ ಅನೌನ್ಸ್ ಮಾಡ್ತಾರೆ. ಈ ಏಷ್ಯಾಕಪ್​​ಗೆ ಪ್ರಕಟಿಸುವ ತಂಡದಲ್ಲಿ ಈ ಮುಂಬೈಕರ್​ ಮ್ಯಾಚ್ ವಿನ್ನರ್​ಗಳಿಗೆ ಸ್ಥಾನ ಸಿಗೋದು ಅನುಮಾನ. 

ಏಷ್ಯಾಕಪ್​​ಗೆ ಜೈಸ್ವಾಲ್​, ಅಯ್ಯರ್​ ಡೌಟ್​

ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ( Shreyas Iyer, Yashasvi Jaiswal). ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಪ್ಲೇಯರ್ಸ್​. ಜೈಸ್ವಾಲ್ ಆರಂಭಿಕನಾಗಿ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ್ರೆ, ಅಯ್ಯರ್, ಮಿಡಲ್ ಆರ್ಡರ್​​ನಲ್ಲಿ ಟೀಮ್ ಇಂಡಿಯಾದ ಗೇಮ್ ಚೇಂಜರ್​​​​​​​ ಪ್ಲೇಯರ್. ಇದೇ ಮ್ಯಾಚ್ ವಿನ್ನರ್​​ ಪ್ಲೇಯರ್​ಗಳ ಏಷ್ಯಾಕಪ್​ ಕನಸು ನುಚ್ಚುನೂರಾಗುವುದು ಕನ್ಫರ್ಮ್!

ಇದನ್ನೂ ಓದಿ: ಬಾಬರ್ ಅಜಮ್, ರಿಜ್ವಾನ್​ಗೆ ಭಾರೀ ಅವಮಾನ.. ಏಷ್ಯಾ ಕಪ್​ಗೆ ಪಾಕ್​ ಆಟಗಾರರ ಹೆಸರು ಘೋಷಣೆ

shubman_gill_bat

ಸೀಸನ್​-18ರ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಜೈಸ್ವಾಲ್, ಸಾಲಿಡ್ ಓಪನಿಂಗ್ ನೀಡಿದ್ರೆ, ಶ್ರೇಯಸ್ ಅಯ್ಯರ್ ನಾಯಕನಾಗಿ, ಪಂಜಾಬ್ ಕಿಂಗ್ಸ್​ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಬ್ಯಾಟ್ಸ್​ಮನ್ ಆಗಿ ರನ್ ಹೊಳೆಯನ್ನೇ ಹರಿಸಿದ್ದಾರೆ. ಆಯಾ ತಂಡಗಳ ಲೀಡಿಂಗ್ ರನ್​ ಸ್ಕೋರರ್​​​ಗಳಾಗಿದ್ದಾರೆ. 

ಶ್ರೇಯಸ್, ಜೈಸ್ವಾಲ್

ಸೀಸನ್​​-18ರಲ್ಲಿ ಅಯ್ಯರ್ ಆಡಿದ 17 ಪಂದ್ಯಗಳಿಂದ 604 ರನ್ ಗಳಿಸಿದ್ದಾರೆ. ಬರೋಬ್ಬರಿ 175.7ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸಿರುವ ಅಯ್ಯರ್​, 6 ಅರ್ಧಶತಕ ದಾಖಲಿಸಿದ್ದಾರೆ. ಆರಂಭಿಕನಾಗಿ ಯಶಸ್ವಿ ಜೈಸ್ವಾಲ್ ಆಡಿದ 14 ಪಂದ್ಯಗಳಿಂದ 559 ರನ್ ಕೊಳ್ಳೆ ಹೊಡೆದಿದ್ದಾರೆ. 159.71ರ ಸ್ಟ್ರೈಕ್​​ರೇಟ್ ಹೊಂದಿದ್ದಾರೆ. 6 ಅರ್ಧಶತಕ ದಾಖಲಿಸಿದ್ದಾರೆ. ಹೀಗಾದ್ರೂ ಶ್ರೇಯಸ್​​ ಹಾಗೂ ಜೈಸ್ವಾಲ್​​​​​​​​​​​​​​​​​​​​​​​​​​​​​​​​​​​​​​​​​​​​​​, ಟಿ20ಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗುವುದು ಡೌಟ್.

ಇದನ್ನೂ ಓದಿ: ಕ್ರಿಕೆಟರ್ಸ್ ಪ್ರಸಿದ್ಧ ಮಹಾಕಾಳೇಶ್ವರನ ಮೊರೆ ಹೋಗುವುದು ಯಾಕೆ​..? ಸನ್ನಿಧಿಯಲ್ಲಿ ಹೆಡ್​ ಕೋಚ್!

ಟಿ20 ಟೀಮ್​ಗೆ ಫಿಟ್ ಆಗಲ್ವಾ?

ಜೈಸ್ವಾಲ್, ಶ್ರೇಯಸ್ ಅಯ್ಯರ್. ಪಕ್ಕಾ ಟಿ20 ಪ್ಲೇಯರ್​ಗಳು ಅನ್ನೋದನ್ನ ಸ್ವತಃ ಅವರ ಐಪಿಎಲ್ ಅಂಕಿಅಂಶಗಳು ಹೇಳ್ತಿವೆ. ಆ ಸ್ಟ್ರೈಕ್​ರೇಟ್​ ಮೋಸ್ಟ್ ಡೇಂಜರಸ್ ಟಿ20 ಪ್ಲೇಯರ್​​ಗಳು ಅನ್ನೋದನ್ನ ಸಾರಿ ಸಾರಿ ಹೇಳ್ತಿವೆ. ಟೀಮ್ ಇಂಡಿಯಾ ಪರವೂ ಯಶಸ್ವಿ ಜೈಸ್ವಾಲ್, 164.31ರ ಸ್ಟ್ರೈಕ್​​ರೇಟ್​ನಲ್ಲಿ ರನ್ ಕೊಳ್ಳೆ ಹೊಡೆದಿದ್ದಾರೆ. ಈತನ ಅಗ್ರೆಸ್ಸಿವ್ ಇಂಟೆಂಟ್ ಆಫ್ ಬ್ಯಾಟಿಂಗ್​​ಗೆ ಫಿದಾ ಆಗಿದ್ದ ಸೆಲೆಕ್ಷನ್ ಕಮಿಟಿ, 2024ರ ಟಿ20 ವಿಶ್ವಕಪ್​​ನಲ್ಲಿ ಶುಭ್​ಮನ್​ಗೆ ಸೈಡ್​ಲೈನ್ ಮಾಡಿ ಜೈಸ್ವಾಲ್​ಗೆ ಸ್ಥಾನ ನೀಡಿತ್ತು. ಹೈಫ್ರಷರ್​​​​​​​​​ ಟೂರ್ನಿಯಲ್ಲೇ ಜೈಸ್ವಾಲ್​ಗೆ ಸ್ಥಾನ ನೀಡಿದ್ದ ಸೆಲೆಕ್ಷನ್ ಕಮಿಟಿಗೆ ಈಗ ಜೈಸ್ವಾಲ್ ಬೇಡವಾಗಿಬಿಟ್ರಾ? ಟಿ20 ಟೀಮ್​​ಗೆ ಇವರಿಬ್ಬರು ಫಿಟ್ ಆಗಲ್ವಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಇದನ್ನೂ ಓದಿ: MS ಧೋನಿ ಕ್ಯಾಪ್ಟನ್ಸಿಯಿಂದ ನಮ್ಮ ಕರಿಯರ್ ಅಂತ್ಯ.. ದಿಗ್ಗಜ ಆಟಗಾರರಿಂದ ಸ್ಫೋಟಕ ಹೇಳಿಕೆ..!

ಶ್ರೇಯಸ್​​​ಗೆ ಟೀಮ್ ಇಂಡಿಯಾದಲ್ಲಿ ಅನ್ಯಾಯ?

ಟೀಮ್ ಇಂಡಿಯಾದ ಥ್ರಿ ಫಾರ್ಮೆಟ್​ ಪ್ಲೇಯರ್ ಆಗಿದ್ದ ಶ್ರೇಯಸ್​​, 2023ರ ಏಕದಿನ ವಿಶ್ವಕಪ್ ಬಳಿಕ ಕೇವಲ ODIಗೆ ಸೀಮಿತರಾಗಿದ್ದಾರೆ. ಐಪಿಎಲ್​​ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ರೂ, ಡೊಮೆಸ್ಟಿಕ್ ಕ್ರಿಕೆಟ್​​ನಲ್ಲಿ ದಮ್ ಧಾರ್ ಪರ್ಫಾಮೆನ್ಸ್​ ನೀಡಿದ್ರು. ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಆಯ್ಕೆಯಾಗಲೇ ಇಲ್ಲ. ಐಪಿಎಲ್​​ನಲ್ಲಿ ಸಾಲಿಡ್ ಆಟವಾಡಿದ್ರೂ ಏಷ್ಯಾಕಪ್​​​ ಟೂರ್ನಿಗೆ ಸೆಲೆಕ್ಟ್​ ಆಗೋದು ಕಷ್ಟಕರ ಎನ್ನಲಾಗ್ತಿದೆ. ಇದು ಸಹಜವಾಗೇ ಶ್ರೇಯಸ್ ಅಯ್ಯರ್​ಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಅನ್ಯಾಯವಾಗ್ತಿದೆಯಾ ಎಂಬ ಅನುಮಾನಕ್ಕೆ ನಾಂದಿಯಾಡಿದೆ.

ಇದನ್ನೂ ಓದಿ: ಸಿಎಸ್​ಕೆ ಕಳ್ಳಾಟದ ಬಗ್ಗೆ ಬಾಯ್ಬಿಟ್ಟ ಅಶ್ವಿನ್; ಕೌಂಟರ್​ ಕೊಟ್ಟ ಫ್ರಾಂಚೈಸಿ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Asia Cup 2025 Jaiswal, Iyer
Advertisment