/newsfirstlive-kannada/media/media_files/2025/08/17/babar_rizwan_new-2025-08-17-22-31-38.jpg)
2025ರ ಏಷ್ಯಾ ಕಪ್ ಆರಂಭವಾಗಲು ಇನ್ನು ಕೆಲವು ದಿನಗಳು ಬಾಕಿ ಉಳಿದಿವೆ. ಟೂರ್ನಿಯಲ್ಲಿ ಭಾಗವಹಿಸುವ ಎಂಟು ತಂಡಗಳ ಗುರಿ ಒಂದೇ ಅಗಿದ್ದು ಟ್ರೋಫಿ ಎತ್ತಿ ಹಿಡಿಯುವ ಕನಸು ಕಾಣುತ್ತಿವೆ. ಗ್ರೂಪ್- ಎ ನಲ್ಲಿ ನಾಲ್ಕು ತಂಡಗಳು ಹಾಗೂ ಗ್ರೂಪ್- ಬಿ ನಲ್ಲಿ 4 ತಂಡಗಳು ಇದ್ದು ಒಟ್ಟು 19 ಪಂದ್ಯಗಳು ನಡೆಯಲಿವೆ. ಇದರ ನಡುವೆ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರ ಹೆಸರನ್ನು ಅಲ್ಲಿನ ಕ್ರಿಕೆಟ್ ಮಂಡಳಿ ಘೋಷಣೆ ಮಾಡಿದೆ.
ಏಷ್ಯಾ ಕಪ್ 2025ರ ಟೂರ್ನಿಯು ಸೆಪ್ಟೆಂಬರ್ 9 ರಿಂದ 28 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯಲಿದೆ. ಈ ಟೂರ್ನಿಯ ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಈಗಾಗಲೇ ಪ್ರಕಟ ಮಾಡಿದೆ. ಎಲ್ಲ ಪಂದ್ಯಗಳು ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಪಂದ್ಯ ಸೆಪ್ಟೆಂಬರ್ 14 ರಂದು ದುಬೈನಲ್ಲಿ ನಡೆಯಲಿದೆ.
ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ಗೆ ಬಿಗ್ ಶಾಕ್ ಕೊಟ್ಟಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 17 ಆಟಗಾರರ ಹೆಸರನ್ನು ಘೋಷಣೆ ಮಾಡಿದೆ. ಸಲ್ಮಾನ್ ಅಲಿ ಆಘಾ ಪಾಕ್ ತಂಡವನ್ನು ಮುನ್ನಡೆಸಲಿದ್ದು ಮೊಹಮ್ಮದ್ ಹ್ಯಾರಿಸ್ ವಿಕೆಟ್ ಕೀಪರ್ ಸ್ಥಾನ ನಿರ್ವಹಿಸಲಿದ್ದಾರೆ. ಇದೇ ಆಟಗಾರರು ಯುಎಇ ಹಾಗೂ ಅಫ್ಘಾನಿಸ್ತಾನದ ನಡುವೆ ನಡೆಯುವಂತಹ ತ್ರಿಕೋನ ಸರಣಿಯನ್ನೂ ಆಡಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕ್ರಿಕೆಟರ್ಸ್ ಪ್ರಸಿದ್ಧ ಮಹಾಕಾಳೇಶ್ವರನ ಮೊರೆ ಹೋಗುವುದು ಯಾಕೆ..? ಸನ್ನಿಧಿಯಲ್ಲಿ ಹೆಡ್ ಕೋಚ್!
ಬಾಬರ್ ಹಾಗೂ ರಿಜ್ವಾನ್ ತಂಡಕ್ಕೆ ಆಯ್ಕೆ ಆಗುತ್ತಾರೆ ಎಂದು ಎಲ್ಲರು ಊಹಿಸಿದ್ದರು. ಆದರೆ ಪಿಸಿಬಿ ಇವರ ಬದಲಿಗೆ ಯಂಗ್ ಆಟಗಾರರಿಗೆ ಅವಕಾಶ ಕೊಟ್ಟಿದೆ. ಇದರಿಂದ ಬಾಬರ್ ಹಾಗೂ ರಿಜ್ವಾನ್ಗೆ ಅವಮಾನ ಆದಂತೆ ಆಗಿದೆ. ತಂಡದಲ್ಲಿ ಹಿರಿಯ ಆಟಗಾರರು ಆಗಿದ್ದ ಇವರನ್ನು ತ್ರಿಕೋನ ಸರಣಿಯಿಂದಲೂ ಹೊರಗಿಟ್ಟಿರುವುದು ಅಚ್ಚರಿ ಮೂಡಿದೆ. ಅದರಲ್ಲಿ ರಿಜ್ವಾನ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ತೋರಿತ್ತು.
ಸೆಪ್ಟೆಂಬರ್ 9 ರಿಂದ ಆರಂಭವಾಗುವ ಏಷ್ಯಾ ಕಪ್ನಲ್ಲಿ ಪಾಕಿಸ್ತಾನ, ಭಾರತ, ಯುಎಇ ಹಾಗೂ ಓಮನ್ ಗ್ರೂಪ್ ಎ ನಲ್ಲಿ ಸ್ಥಾನ ಪಡೆದುಕೊಂಡಿವೆ. ಸೆಪ್ಟೆಂಬರ್ 12 ರಂದು ಪಾಕ್ ಮೊದಲ ಪಂದ್ಯವನ್ನು ಓಮನ್ ವಿರುದ್ಧ ಆಡಲಿದೆ. ಇದಾದ ಮೇಲೆ ಸೆಪ್ಟೆಂಬರ್ 14 ರಂದು ಟೀಮ್ ಇಂಡಿಯಾ ಜೊತೆಗೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದಾದ ಮೇಲೆ ಯುಎಇ ವಿರುದ್ಧ ಪಾಕ್ ಅಖಾಡಕ್ಕೆ ಇಳಿಯದೆ.
ಏಷ್ಯಾ ಕಪ್ಗೆ ಪಾಕ್ ಕ್ರಿಕೆಟ್ ತಂಡದ ಸದಸ್ಯರು
ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸೀಮ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಅಫ್ರಿದಿ ಮತ್ತು ಸುಫ್ಯಾನ್ ಮೊಕಿಮ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ