/newsfirstlive-kannada/media/media_files/2025/08/17/dhoni-2025-08-17-15-34-46.jpg)
ಟೀಮ್ ಇಂಡಿಯಾ ಕಂಡ ಸಕ್ಸಸ್ಫುಲ್ ಕ್ಯಾಪ್ಟನ್ ಧೋನಿ, ತಮಗೆ ಇಷ್ಟ ಅಲ್ಲ ಅಂದ್ರೆ ಅವರನ್ನ ಟಾರ್ಗೆಟ್ ಮಾಡ್ತಿದ್ರಾ?, ಹೀಗೊಂದು ಪ್ರಶ್ನೆ ಹುಟ್ಟಿದೆ. ಇದಕ್ಕೆ ಕಾರಣ ಇರ್ಫಾನ್ ಪಠಾಣ್, ವೀರೇಂದ್ರ ಸೆಹ್ವಾಗ್ ನೀಡಿರೋ ಸ್ಟೇಟ್ಮೆಂಟ್ಗಳು. ಧೋನಿ ವಿಚಾರದಲ್ಲಿ ಪಠಾಣ್, ಸೆಹ್ವಾಗ್ ಸಿಡಿಸಿದ ಬಾಂಬ್ ಏನು?.
ಎಂ.ಎಸ್ ಧೋನಿ ಒಂದಲ್ಲ, ಎರಡಲ್ಲ ಮೂರು ಐಸಿಸಿ ಟ್ರೋಫಿಗಳನ್ನ ಗೆದ್ದ ಏಕೈಕ ನಾಯಕ. ಭಾರತಕ್ಕೆ ಚೊಚ್ಚಲ ಟಿ20 ವಿಶ್ವಕಪ್, 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ. ಧೋನಿ ನಾಯಕತ್ವವನ್ನ ವಿಶ್ವವೇ ಮೆಚ್ಚಿದೆ. ವಿಶ್ವ ಕ್ರಿಕೆಟ್ ಕಂಡ ಒನ್ ಆಫ್ ದ ಶ್ರೇಷ್ಟ ಕ್ಯಾಪ್ಟನ್ ಎಂದು ಕೊಂಡಾಡಿದೆ.
ಧೋನಿ ನಾಯಕತ್ವದ ಬಗ್ಗೆ ದಿಗ್ಗಜರ ಬಿಗ್ ಬಾಂಬ್.!
ಕ್ಯಾಪ್ಟನ್ ಧೋನಿ ಎರಡು ವಿಚಾರಕ್ಕೆ ಸದಾ ಸುದ್ದಿಯಲ್ಲಿರ್ತಾರೆ. ಚಾಣಾಕ್ಯ ನಾಯಕತ್ವ, ಅತ್ಯದ್ಭುತ ಸಾಧನೆಯಿಂದ ಒಂದು ಕಾರಣಕ್ಕೆ. ಇನ್ನೊಂದು ವಿವಾದಗಳಿಂದ. ಧೋನಿ ನಾಯಕತ್ವದಡಿಯಲ್ಲಿ ಆಡಿದ ಆಟಗಾರರು ನೀಡೋ ಹೇಳಿಕೆಗಳು ಸದಾ ಸೆನ್ಸೇಷನ್ ಸೃಷ್ಟಿಸ್ತವೆ. ಹಲವು ಮಾಜಿ ಕ್ರಿಕೆಟರ್ಸ್ ತಮ್ಮ ಕರಿಯರ್ ಅಂತ್ಯವಾಗೋದಕ್ಕೆ ಧೋನಿ ಕಾರಣ ಎಂದ ಹಲವು ಉದಾಹರಣೆಗಳಿವೆ. ಇದೀಗ ಮತ್ತಿಬ್ಬರು ಕ್ರಿಕೆಟರ್ಸ್ ಧೋನಿಯನ್ನ ಬ್ಲೇಮ್ ಮಾಡಿದ್ದಾರೆ.
ಧೋನಿಯಿಂದಾಗಿ ಕರಿಯರ್ ಅಂತ್ಯ ಎಂದ ಪಠಾಣ್.!
ಧೋನಿ ವಿಚಾರದಲ್ಲಿ ಸದ್ಯ ಹೊಸ ಬಾಂಬಾ ಹಾಕಿರೋದು ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್. ಒನ್ ಅಫ್ ದ ಬೆಸ್ಟ್ ಅಲ್ರೌಂಡರ್ ಎನಿಸಿಕೊಂಡಿದ್ದ ಇರ್ಫಾನ್ ಪಠಾಣ್, ಇದಕ್ಕಿದ್ದಂತೆ ಟೀಮ್ ಇಂಡಿಯಾದಿಂದ ದೂರವಾದ್ರು. ಏಕದಿನ ವಿಶ್ವಕಪ್ ಆಡೋ ಅವಕಾಶವೂ ಸಿಗಲಿಲ್ಲ. ಅದ್ರ ಹಿಂದಿನ ಕಥೆಯೇನು ಅನ್ನೋದನ್ನ ಇದೀಗ ಪಠಾಣ್ ರಿವೀಲ್ ಮಾಡಿದ್ದಾರೆ.
ಡ್ರಾಪ್ ಆಗೋಕೆ ಧೋನಿ ಕಾರಣ
ನಾನು ಮತ್ತು ಸಹೋದರ ಶ್ರೀಲಂಕಾದಲ್ಲಿ ಪಂದ್ಯ ಗೆಲ್ಲಿಸಿದ್ವಿ. ನಮ್ಮ ಜಾಗದಲ್ಲಿ ಬೇರೆ ಯಾರೆ ಇದ್ದಿದ್ರೂ ಆ ಬಳಿಕ ಒಂದು ವರ್ಷ ಡ್ರಾಪ್ ಆಗ್ತಾ ಇರಲಿಲ್ಲ. ಆ ಪಂದ್ಯದಲ್ಲಿ ನಮ್ಮ ಗೆಲುವಿಗೆ 27-28 ಎಸೆತಗಳಲ್ಲಿ 60 ರನ್ ಬೇಕಿದ್ವು. ಅಲ್ಲಿಂದ ನಾವು ಪಂದ್ಯ ಗೆಲ್ಲಿಸಿದ್ವಿ. ಆದ್ರೆ, ನ್ಯೂಜಿಲೆಂಡ್ನಲ್ಲಿ ನನ್ನನ್ನ ಬೆಂಚ್ಗೆ ಸೀಮಿತಗೊಳಿಸಲಾಯ್ತು. ಆಗ ನಾನು ಗ್ಯಾರಿ ಬಳಿ ನನ್ನನ್ನ ಯಾಕೆ ಡ್ರಾಪ್ ಮಾಡಲಾಗಿದೆ ಎಂದು ಕೇಳಿದೆ. ಆಗ ಗ್ಯಾರಿ ನನ್ನ ಕೈಯಲ್ಲಿ ಏನೂ ಇಲ್ಲ ಅಂದ್ರು. ನನಗೆ ಇದ್ರಲ್ಲಿ ಯಾರ ಕೈ ಇದೆ ಅನ್ನೋದು ಗೊತ್ತಾಯ್ತು. ನಾಯಕ ಪ್ಲೇಯಿಂಗ್-XI ನಿರ್ಧರಿಸ್ತಾ ಇದ್ದ. ಆಗ ಧೋನಿ ನಮ್ಮ ನಾಯಕನಾಗಿದ್ರು.
ಇರ್ಫಾನ್ ಪಠಾಣ್, ಮಾಜಿ ಕ್ರಿಕೆಟಿಗ
2009ರಲ್ಲಿ ಶ್ರೀಲಂಕಾ ಎದುರು ಮ್ಯಾಚ್ ಗೆಲ್ಲಿಸಿದ ನಂತರ ಪಠಾಣ್ ಮತ್ತೆ ಏಕದಿನ ಪಂದ್ಯವನ್ನಾಡಿದ್ರು 2011ರ ಡಿಸೆಂಬರ್ನಲ್ಲಿ. ಕಷ್ಟ ಪಟ್ಟು ಕಮ್ಬ್ಯಾಕ್ ಮಾಡಿದ್ರೂ ಯುವ ಆಟಗಾರರ ನಡುವಿನ ಪೈಪೋಟಿಯಲ್ಲಿ ಕಳೆದು ಹೋದ್ರು. ಅಂತಿಮವಾಗಿ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರು.
ಧೋನಿಯಿಂದಾಗಿ ನಿವೃತ್ತಿಗೆ ಮುಂದಾಗಿದ್ದೆ.!
ಪಠಾಣ್ ಮಾತ್ರವಲ್ಲ, ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ, ಸ್ಪೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಕೂಡ ಧೋನಿ ಬಗ್ಗೆ ಇದೀಗ ಆರೋಪ ಮಾಡಿದ್ದಾರೆ. ಧೋನಿಯಿಂದಾಗಿ 2008ರಲ್ಲೇ ನಾನು ಕ್ರಿಕೆಟ್ಗೆ ಗುಡ್ ಬೈ ಹೇಳೋಕೆ ಮುಂದಾಗಿದ್ದೆ ಎಂದಿದ್ದಾರೆ.
‘ನಿವೃತ್ತಿ ಬಗ್ಗೆ ಯೋಚಿಸಿದ್ದೆ’
2007-08ರ ಆಸ್ಟ್ರೇಲಿಯಾ ಸರಣಿಯಲ್ಲಿ ನಾನು ಮೊದಲ 3 ಪಂದ್ಯ ಆಡಿದೆ. ಆ ಬಳಿಕ MS ಧೋನಿ ನನ್ನನ್ನ ಡ್ರಾಪ್ ಮಾಡಿದ್ರು. ಆ ಬಳಿಕ ಕೆಲ ಕಾಲ ನಾನು ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಪ್ಲೇಯಿಂಗ್- XIನಲ್ಲಿ ನನಗೆ ಚಾನ್ಸ್ ಇಲ್ಲ ಎಂದ ಮೇಲೆ ಏಕದಿನ ಆಡೋದ್ರಲ್ಲಿ ಏನೂ ಉಪಯೋಗ ಇಲ್ಲ ಎನಿಸಿತು. ನಾನು ಸಚಿನ್ ಬಳಿ ತೆರಳಿ ಏಕದಿನದಿಂದ ನಿವೃತ್ತಿ ಬಗ್ಗೆ ಯೋಚಿಸಿದ್ದೇನೆ ಎಂದೆ. ಅದಕ್ಕೆ ಸಚಿನ್ ನಾನು ಕೂಡ 1999-2000ರಲ್ಲಿ ಈ ಪರಿಸ್ಥಿತಿ ಎದುರಿಸಿ ನಿವೃತ್ತಿ ಬಗ್ಗೆ ಯೋಚಿಸಿದ್ದೆ. ಅದು ಬರುತ್ತೆ, ಹೋಗುತ್ತೆ. ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳಬೇಡ ಎಂದಿದ್ರು.
ವೀರೇಂದ್ರ ಸೆಹ್ವಾಗ್, ಮಾಜಿ ಕ್ರಿಕೆಟಿಗ
ಇದನ್ನೂ ಓದಿ:ಏಷ್ಯಾ ಕಪ್ 2025; ಸೂರ್ಯ ಸೇರಿ ಈ ಬಿಗ್ ಹಿಟ್ಟರ್, ಬಲಿಷ್ಠ ಆಲ್ರೌಂಡರ್ ಆಡೋದು ಪಕ್ಕಾ..!
ತಂಡದಲ್ಲಿದ್ದೂ ಚಾನ್ಸ್ ಸಿಗದೇ ಬೇಸತ್ತು ಏಕದಿನಕ್ಕೆ ಗುಡ್ ಬೈ ಹೇಳೋಕೆ ಹೊರಟಿದ್ದ ಸೆಹ್ವಾಗ್ನ ಸಚಿನ್ ತಡೆದ್ರು. ಆ ಬಳಿಕ ಏಕದಿನ ವಿಶ್ವಕಪ್ ಆಡಿದ ಸೆಹ್ವಾಗ್, ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.
ಪಠಾಣ್, ಸೆಹ್ವಾಗ್ ಈಗ ಧೋನಿ ವಿಚಾರದಲ್ಲಿ ಬಾಂಬ್ ಸಿಡಿಸಿದ್ದಾರೆ. ಆದ್ರೆ, ಈ ಹಿಂದೆಯೇ ಗೌತಮ್ ಗಂಭೀರ್, ಯುವರಾಜ್ ಸಿಂಗ್ ಸೇರಿದಂತೆ ಹಲವರು ಧೋನಿಯ ನಾಯಕತ್ವದ ವಿಚಾರದಲ್ಲಿ ಇದೇ ತರಹದ ಹೇಳಿಕೆಗಳನ್ನ ನೀಡಿದ್ರು. ಕ್ರಿಕೆಟ್ ಲೋಕದಲ್ಲಿ ಅವು ಸಖತ್ ಸುದ್ದಿ ಕೂಡ ಆಗಿದ್ವು. ಆದ್ರೆ, ಧೋನಿಯದ್ದು ಮಾತ್ರ ಈ ವಿಚಾರದಲ್ಲಿ ಮೌನವೇ ಉತ್ತರ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ