/newsfirstlive-kannada/media/media_files/2025/08/16/surya_kumar-2025-08-16-20-05-08.jpg)
ಟೀಮ್ ಇಂಡಿಯಾಕ್ಕೆ ಈಗ ಏನಿದ್ದರೂ 2025ರ ಏಷ್ಯಾ ಕಪ್ ಗೆಲ್ಲಬೇಕು ಎನ್ನುವ ಉದ್ದೇಶ ಒಂದೇ ಅದರ ಮುಂದಿದೆ. ಇದಕ್ಕಾಗಿ ಬಿಸಿಸಿಐ ಆಯ್ಕೆ ಸಮಿತಿ ಬಲಿಷ್ಠ ಆಟಗಾರರ ಸೇನೆ ಕಟ್ಟಲು ಮುಂದಾಗಿದ್ದು ಯಾವ್ಯಾವ ಪ್ಲೇಯರ್ಗಳ ಹೆಸರನ್ನು ಅಂತಿಮ ಮಾಡುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಇದರ ನಡುವೆ ಈ ಆಟಗಾರರು ಏಷ್ಯಾ ಕಪ್ನಲ್ಲಿ ಆಡುವುದು ಕನ್ಫರ್ಮ್ ಎಂದು ಹೇಳಲಾಗುತ್ತಿದೆ.
ಬಿಸಿಸಿಐ 2026ರಲ್ಲಿನ ಟಿ20 ವಿಶ್ವಕಪ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಟೀಮ್ ಇಂಡಿಯಾದಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಮಹತ್ವ ಕೊಡಲಾಗುತ್ತದೆ. ಏಷ್ಯಾ ಕಪ್ನಲ್ಲಿ ಉತ್ತಮ ಪರ್ಫಾಮೆನ್ಸ್ ತೋರಿದವರಿಗೆ ಮುಂದೆ ವಿಶ್ವಕಪ್ಗೆ ಅದೃಷ್ಟಗಳು ಕುಲಾಯಿಸಬಹುದು. ಆಗಸ್ಟ್ 19 ರಂದು ಭಾರತ ತಂಡದ ಆಟಗಾರರ ಹೆಸರುಗಳನ್ನು ಬಿಸಿಸಿಐ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರು ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಪಾಕ್ ಜೊತೆ ಭಾರತ ಕ್ರಿಕೆಟ್ ಆಡಬಾರದು.. ರಕ್ತ, ನೀರು ಒಟ್ಟಿಗೆ ಹರಿಯಲ್ಲ, ದೇಶ ಮೊದಲು- ಮಾಜಿ ಆಟಗಾರ!
ಈ ಬಲಿಷ್ಠ ತಂಡದಲ್ಲಿ ನಾಯಕ ಸೂರ್ಯಕುಮಾರ್ ಸ್ಥಾನ ಫಿಕ್ಸ್ ಆಗಿದೆ. ಏಕೆಂದರೆ ಟಿ20ಗೆ ನಾಯಕನಾಗಿರುವ ಸೂರ್ಯಕುಮಾರ್ ಭಾರತ ತಂಡವನ್ನ ಮುನ್ನಡೆಸುವುದು ಫಿಕ್ಸ್. ಇವರ ಜೊತೆಗೆ ಅನುಭವಿ ಹಾಗೂ ಹಿರಿಯ ಆಟಗಾರ ಹಾರ್ದಿಕ್ ಪಾಂಡ್ಯ 11ರ ಬಳಗದಲ್ಲಿ ಇರಲಿದ್ದಾರೆ. ಹೊಡಿಬಡಿ ಬ್ಯಾಟಿಂಗ್ನಿಂದ ಎದುರಾಳಿಯ ಎದೆ ನಡುಗಿಸುವ ಅಭಿಷೇಕ್ ಶರ್ಮಾ ಕೂಡ ಏಷ್ಯಾ ಕಪ್ ಆಡುವುದು ಪಕ್ಕಾ ಆಗಿದೆ ಎಂದು ಹೇಳಲಾಗುತ್ತಿದೆ.
ಶುಭ್ಮನ್ ಗಿಲ್ಗೆ ಸ್ಥಾನ ಸಿಗುತ್ತಾ?
ಆದರೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕ್ಯಾಪ್ಟನ್ ಆಗಿ ಯಶಸ್ಸು ಕಂಡಿದ್ದ ಶುಭ್ಮನ್ ಗಿಲ್ ಅವರು ಏಷ್ಯಾ ಕಪ್ಗೆ ಆಯ್ಕೆ ಆಗುತ್ತಾರೋ, ಇಲ್ವೋ ಎನ್ನುವುದು ಅನುಮಾನ ಇದೆ. ಏಕೆಂದರೆ ಈ ಹಿಂದೆ ಟೀಮ್ ಇಂಡಿಯಾ ಆಡಿದ್ದ ಕೆಲವು ಟಿ20 ಸರಣಿಗಳಿಗೆ ಗಿಲ್ ಅವರನ್ನು ಹೊರಗಿಡಲಾಗಿತ್ತು. ಓಪನಿಂಗ್ನಲ್ಲಿ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಟವೆಲ್ ಹಾಕಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಗಿಲ್ಗೆ ಅವಕಾಶ ಸಿಗುವ ನಿರೀಕ್ಷೆ ಅಂತೂ ಇದೆ ಎನ್ನಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ