/newsfirstlive-kannada/media/media_files/2025/08/16/kl_rahul_shreyas_iyer-2025-08-16-17-43-50.jpg)
ಏಷ್ಯಾಕಪ್ ಟೂರ್ನಿಗೆ ಈಗಾಗಲೇ ಸಿದ್ಧತೆ ನಡೆದಿದ್ದು ಸೆಪ್ಟೆಂಬರ್ 9 ರಿಂದ ಗ್ರ್ಯಾಂಡ್ ಓಪನಿಂಗ್ ಪಡೆಯಲಿದೆ. ಒಟ್ಟು 8 ತಂಡಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದು ಫೈನಲ್ ಪಂದ್ಯ ಸೆಪ್ಟೆಂಬರ್ 28 ರಂದು ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ- ಪಾಕಿಸ್ತಾನ ಕೂಡ ಸೆಣಸಾಡಲಿವೆ. ಸದ್ಯ ಈ ಸಂಬಂಧ ಭಾರತದ ಮಾಜಿ ಲೆಜೆಂಡರಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು, ಪಾಕಿಸ್ತಾನ ವಿರುದ್ಧ ಭಾರತ ಪಂದ್ಯ ಆಡಬಾರದು ಎಂದು ಖಡಕ್ ಆಗಿ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾಶ್ಮಿರದ ಪಹಲ್ಗಾಮ್ ಅಟ್ಯಾಕ್ ಬಳಿಕ ಇದೇ ಮೊದಲ ಬಾರಿಗೆ ಮುಖಾಮುಖಿ ಆಗುತ್ತಿವೆ. ಅಮಾಯಕ ಜನರು ಜೀವ ಕಳೆದುಕೊಂಡ ಮೇಲೆ ಎರಡು ರಾಷ್ಟ್ರಗಳ ಮಧ್ಯೆ ಘರ್ಷಣೆ ಉಂಟಾಗಿತ್ತು. ಇದರಿಂದ ರಾಷ್ಟ್ರಗಳ ನಡುವಿನ ಎಲ್ಲ ಸಂಬಂಧ ಮುರಿದು ಬಿದ್ದಿವೆ. ಅದರಂತೆ ಇತ್ತೀಚೆಗೆ 2025ರ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡರಿ ಟೂರ್ನಿಯಲ್ಲಿ ಪಾಕ್ ವಿರುದ್ಧ ಭಾರತ ಪಂದ್ಯವಾಡಲಿಲ್ಲ. ಅದರಂತೆ ಏಷ್ಯಾ ಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಆಡಬಾರದು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಹರ್ಭಜನ್ ಸಿಂಗ್ ಅವರು, ಇತ್ತೀಚೆಗೆ ಭಾರತದ ಯೋಧರು ಜೀವ ಕಳೆದುಕೊಂಡಾಗ ಪಾಕಿಸ್ತಾನದವರು ಅಪಹಾಸ್ಯ ಮಾಡಿದ್ದರು. ಅವರಿಗೆ ಇದು ಸುಲಭ ಎನಿಸಬಹುದು. ಆದರೆ ಪಾಕಿಸ್ತಾನದವರಿಗೆ ಯಾವುದು ಮುಖ್ಯ ಎಂಬುದನ್ನು ಅರ್ಥ ಮಾಡಿಸಬೇಕು. ಕುಟುಂಬ ತೊರೆದು ಯೋಧರು ಗಡಿ ಕಾಯುತ್ತಿರುತ್ತಾರೆ. ಎಷ್ಟೋ ಸೈನಿಕರು ಗಡಿಯಲ್ಲಿ ಪ್ರಾಣ ಕಳೆದುಕೊಂಡ ಮೇಲೆ ಅವರನ್ನ ಮನೆಗೆ ತೆಗೆದುಕೊಂಡು ಹೋಗುವಾಗ ಅವರ ತ್ಯಾಗ ನಾವು ಮೆಚ್ಚಲೇಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಾರಾ, ತಮ್ಮನಾದ ಅರ್ಜುನ್ ತೆಂಡುಲ್ಕರ್ ಮೊದಲೇ ಮದುವೆ ಆಗ್ತಿರೋದು ಯಾಕೆ..?
ಇಂತಹದರ ಮುಂದೆ ಕ್ರಿಕೆಟ್ ತುಂಬಾ ಚಿಕ್ಕದು. ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ಭಾರತ ಆಡದೇ ಇರುವುದೇ ಒಳ್ಳೆಯದು. ಈಗಾಗಲೇ ಸರ್ಕಾರ ತನ್ನ ನಿಲುವು ತಿಳಿಸಿದ್ದು ರಕ್ತ ಮತ್ತು ನೀರು ಒಟ್ಟಿಗೆ ಹರಿಯಲ್ಲ ಎಂದು ಹೇಳಿದೆ. ಪಾಕಿಸ್ತಾನಕ್ಕೆ ಹೋಗಿ ಭಾರತ ಕ್ರಿಕೆಟ್ ಆಡುತ್ತಿಲ್ಲ, ಗಡಿಯಲ್ಲಿ ಸಾಕಷ್ಟು ಘರ್ಷಣೆ, ಸಮಸ್ಯೆಗಳು ಇವೆ. ಇವೆಲ್ಲದರ ಮಧ್ಯೆ ನಾವು ಕ್ರಿಕೆಟ್ ಆಡುವುದು ಮುಖ್ಯನಾ?. ನಮ್ಮ ದೇಶದ ದೊಡ್ಡ ದೊಡ್ಡ ಸಮಸ್ಯೆಗಳ ಮುಂದೆ ಕ್ರಿಕೆಟ್ ಸಣ್ಣ ವಿಷಯ. ದೇಶ ಮೊದಲು, ನಂತರ ಎಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ದೇಶಕ್ಕಿಂತ ಯಾವುದು ದೊಡ್ಡದಿಲ್ಲ. ಭಾರತೀಯ ಆಟಗಾರರು ಮೊದಲು ಅದನ್ನು ಗೌರವಿಸಬೇಕು. ನಮಗೆ ಯಾವುದೇ ಗೌರವ ಬಂದರು ಅದಕ್ಕೆ ಕಾರಣ ನಮ್ಮ ದೇಶ. ಕ್ರಿಕೆಟಿಗರು, ನಟರು ಸೇರಿದಂತೆ ಎಲ್ಲರೂ ದೇಶಕ್ಕಿಂತ ದೊಡ್ಡವರಲ್ಲ. ದೇಶ ಎನ್ನುವುದು ಮೊದಲು ಬರುತ್ತದೆ. ಅದಕ್ಕೆ ನಮ್ಮದೇ ಆದ ಕರ್ತವ್ಯಗಳನ್ನು, ಗೌರವಗಳನ್ನ ಸಲ್ಲಿಸಬೇಕು ಎಂದು ಭಜ್ಜಿ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ