/newsfirstlive-kannada/media/media_files/2025/08/16/sachin_family-2025-08-16-15-30-44.jpg)
ಡಿವೋರ್ಸ್, ಬ್ರೇಕ್ ಅಪ್ ಸುದ್ದಿಗಳಿಂದಲೇ ಸದ್ದು ಮಾಡಿದ್ದ ಕ್ರಿಕೆಟ್ ಲೋಕದಲ್ಲೀಗ ಖುಷಿ ಸುದ್ದಿಯೊಂದು ಹೊರಬಿದ್ದಿದೆ. ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕುಟುಂಬದಲ್ಲಿ ಫುಲ್ ಸಂಭ್ರಮ ಮನೆ ಮಾಡಿದೆ. ಸದ್ದಿಲ್ಲದೇ ಸಮಾರಂಭವೊಂದು ನಡೆದಿದ್ದು, ಬ್ಯಾಚುಲರ್ ಲೈಫ್ಗೆ ಟಾಟಾ ಮಾಡೋಕೆ ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ರೆಡಿಯಾಗಿದ್ದಾರೆ.
ಸಾನಿಯಾ ಚಂದೋಕ್ ಜೊತೆ ಅರ್ಜುನ್ ಎಂಗೇಜ್.!
ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಸದ್ದಿಲ್ಲದೇ ಜೀವನದ ಹೊಸ ಇನ್ನಿಂಗ್ಸ್ ಶುರು ಮಾಡೋಕೆ ರೆಡಿಯಾಗಿದ್ದಾರೆ. ಬಹುಕಾಲದ ಗೆಳತಿಯೊಂದಿಗೆ ಅರ್ಜುನ್ ತೆಂಡುಲ್ಕರ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಸಾನಿಯಾ ಚಂದೋಕ್ ಹಾಗೂ ಅರ್ಜುನ್ ತೆಂಡುಲ್ಕರ್ ರಿಂಗ್ ಬದಲಾಯಿಸಿಕೊಂಡಿದ್ದಾರೆ. ಸಾನಿಯಾ, ಅರ್ಜುನ್ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಈ ಸಮಾರಂಭದಲ್ಲಿ ಭಾಗಿಯಾಗಿದ್ರು ಎನ್ನಲಾಗಿದೆ.
ಬಾಲ್ಯದ ಗೆಳತಿ, ಇನ್ಮುಂದೆ ಬಾಳ ಸಂಗಾತಿ.!
ಸಾನಿಯಾ ಚಂದೋಕ್ ಅರ್ಜುನ್ ತೆಂಡುಲ್ಕರ್ ಬಾಲ್ಯದ ಗೆಳೆಯರು. ಬಾಲ್ಯದಿಂದ ಉತ್ತಮ ಸ್ನೇಹಿತರಾಗಿದ್ದ ಇವರಿಬ್ಬರು ಕೆಲ ವರ್ಷಗಳಿಂದ ಪ್ರೇಮಿಗಳಾಗಿದ್ದರು. ಕೆಲ ವರ್ಷಗಳಿಂದ ಪ್ರೀತಿಸ್ತಾ ಇದ್ರು ಅನ್ನೋದು ಆಪ್ತ ಮೂಲಗಳ ಮಾಹಿತಿಯಾಗಿದೆ.
ಸಾನಿಯಾ ಚಂದೋಕ್ ಯಾರು.? ಹಿನ್ನೆಲೆ ಏನು.?
ಸಚಿನ್ ತೆಂಡುಲ್ಕರ್ ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳಿದ ದಶಕವೇ ಉರುಳಿದೆ. ಆದ್ರೆ, ಈಗಲೂ ಕೂಡ ಸಚಿನ್ ತೆಂಡುಲ್ಕರ್ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ಸಂಬಂಧ ಬೆಳೆಸಿರುವ ಕುಟುಂಬ ಕೂಡ ದೇಶದ ಶ್ರೀಮಂತ ಕುಟುಂಬವೇ. ಸಾನಿಯಾ ಚಂದೋಕ್ ಖ್ಯಾತ ಬ್ಯುಸಿನಸ್ಮನ್ ರವಿ ಘಾಯ್ರ ಮೊಮ್ಮಗಳು. hospitality ಇಂಡಸ್ಟ್ರಿಯಲ್ಲಿ ರವಿ ಘಾಯ್ ದೊಡ್ಡ ಬ್ಯುಸಿನೆಸ್ಮನ್ ಆಗಿ ಗುರುತಿಸಿಕೊಂಡಿದ್ದಾರೆ.
ಗ್ರಾವಿಸ್ ಗ್ರೂಪ್ಗೆ ರವಿ ಘಾಯ್ ಚೇರ್ಮನ್ ಆಗಿದ್ದು, ಈ ಕಂಪನಿಯ 23-24ರ ರೆವಿನ್ಯೂನೇ ಬರೋಬ್ಬರಿ 624 ಕೋಟಿ ಎಂದು ವರದಿಯಾಗಿದೆ. ಹೋಟೆಲ್, ಐಸ್ಕ್ರೀಮ್ ಸೇರಿದಂತೆ ಹಲವು ಉದ್ದಿಮೆಗಳಲ್ಲಿ ಸಾನಿಯಾ ಕುಟುಂಬದವರು ಹೂಡಿಕೆ ಮಾಡಿದ್ದಾರೆ. ಇನ್ನು ಸಾನಿಯಾ ಚಂದೋಕ್ ಕೂಡ ಬ್ಯುಸಿನೆಸ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಮಿಸ್ಟರ್ ಪಾವ್ಸ್ ಪೆಟ್ ಸ್ಪಾ & ಸ್ಟೋರ್ (Mr. Paws Pet Spa & Store) ನಡೆಸ್ತಿದ್ದು, ಇದಕ್ಕೆ ಸಾನಿಯಾನೇ ಡೈರೆಕ್ಟರ್ ಆಗಿದ್ದಾರೆ.
ಸಾರಾಗಿಂತ ಮೊದಲು ತಮ್ಮನ ವಿವಾಹ ಯಾಕೆ.?
ಅರ್ಜುನ್ ತೆಂಡುಲ್ಕರ್ ಎಂಗೇಜ್ಮೆಂಟ್ ಮಾಡಿಕೊಳ್ತಿದ್ದಂತೆ ಎಲ್ಲರನ್ನ ಕಾಡ್ತಿರೋ ಪ್ರಶ್ನೆಯಿದು. ಶುಭ್ಮನ್ ಗಿಲ್, ಸಿದ್ಧಾರ್ಥ್ ಚತುರ್ವೇದಿ ಸೇರಿದಂತೆ ಹಲವರ ಜೊತೆಗೆ ಸಾರಾ ಹೆಸರು ಆಗಾಗ ಕೇಳಿ ಬರ್ತಾ ಇರುತ್ತೆ. ಹೀಗಿದ್ರೂ ಸಾರಾಗೂ ಮುನ್ನ 25 ವರ್ಷದ ಅರ್ಜುನ್ ವಿವಾಹ ಮಾಡಲು ಸಚಿನ್ ಮುಂದಾಗಿದ್ದಾರೆ. ಯಾಕಂದ್ರೆ ಸಾರಾ ತೆಂಡುಲ್ಕರ್ಗೆ ಈಗಲೇ ವಿವಾಹ ಇಷ್ಟವಿಲ್ಲವಂತೆ.
ಇದನ್ನೂ ಓದಿ:Asia Cup T20; ಕ್ಯಾಪ್ಟನ್ ಸೂರ್ಯಕುಮಾರ್ ಕೈಯಲ್ಲಿ ಬಲಿಷ್ಠ ತಂಡದ ಆಯ್ಕೆ..!
ಮಾಡೆಲಿಂಗ್ ಕ್ಷೇತ್ರದಲ್ಲಿ ಮುಂದುವರೆಯಬೇಕು ಅನ್ನೋದು ಸಚಿನ್ ಪುತ್ರಿ ಸಾರಾ ತೆಂಡುಲ್ಕರ್ ಆಸೆಯಂತೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯನ್ ಟೂರಿಸಮ್ನ ಅಂಬಾಸಿಡರ್ ಆಗಿ ಸಾರಾ ಆಯ್ಕೆಯಾಗಿದ್ದಾರೆ. ಇದ್ರ ಜೊತೆಗೆ ಸಚಿನ್ ತೆಂಡುಲ್ಕರ್ ಫೌಂಡೇಶನ್ನ ಡೈರೆಕ್ಟರ್ ಆಗಿರೋ ಸಾರಾಗೆ ಸಾಮಾಜಿಕ ಕೆಲಸ ಮಾಡಬೇಕು ಅನ್ನೋ ಕಾಳಜಿಯನ್ನ ಹೊಂದಿದ್ದಾರೆ. ಈ ಎಲ್ಲಾ ಕಾರಣದಿಂದ ಈಗಲೇ ವಿವಾಹ ಬೇಡ ಎಂಬ ನಿರ್ಧಾರಕ್ಕೆ ಸಾರಾ ಬಂದಿದ್ದು, ಸಚಿನ್ ಕೂಡ ಮಗಳ ಇಷ್ಟ ನನ್ನಿಷ್ಟ ಎಂದಿದ್ದಾರಂತೆ.
ಸದ್ಯ ಸದ್ದಿಲ್ಲದೇ ನಿಶ್ಚಿತಾರ್ಥ ಮುಗಿಸಿರುವ ಸಚಿನ್ಗೆ ಮಗನ ವಿವಾಹವನ್ನ ಅದ್ಧೂರಿಯಾಗಿ ಮಾಡೋ ಕನಸಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಮುಂದಿನ ವರ್ಷದಲ್ಲಿ ತೆಂಡುಲ್ಕರ್ ಪುತ್ರನ ಅದ್ಧೂರಿ ವಿವಾಹ ನಡೆಯಲಿದೆ ಅನ್ನೋದು ಕುಟುಂಬದ ಮೂಲಗಳ ಮಾಹಿತಿಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ