/newsfirstlive-kannada/media/media_files/2025/08/15/suryakumar_yadav-2025-08-15-14-39-25.jpg)
2025ರ ಟಿ20 ಏಷ್ಯಾ ಕಪ್ ಟೂರ್ನಿಗೆ ಟೀಮ್ ಇಂಡಿಯಾದ ಆಟಗಾರರ ಹೆಸರು ಘೋಷಣೆ ಮಾಡಬೇಕಿದೆ. ಆಗಸ್ಟ್ 19 ರಂದು ಬಲಿಷ್ಠ ತಂಡವನ್ನು ಬಿಸಿಸಿಐ ಪ್ರಕಟ ಮಾಡಲಿದೆ. ಈ ಸಂಬಂಧ ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಬೆಂಗಳೂರಿನಿಂದ ಮುಂಬೈಗೆ ಪ್ರಯಾಣ ಬೆಳಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸೂರ್ಯಕುಮಾರ್ ಯಾದವ್ ಅವರು ಬಿಸಿಸಿಐನ ಸೆಂಟರ್ ಆಫ್ ಎಕ್ಸ್ಲೆನ್ಸ್ನಲ್ಲಿ ಕ್ರೀಡಾ ಹರ್ನಿಯಾ ಶಸ್ತ್ರಚಿಕಿತ್ಸೆಯ ನಂತರ ರಿಹ್ಯಾಬ್ಗೆ ಒಳಗಾಗುತ್ತಿದ್ದಾರೆ. ಸೂರ್ಯಕುಮಾರ್ ಈಗಾಗಲೇ ನೆಟ್ಸ್‌ನಲ್ಲಿ ಬ್ಯಾಟಿಂಗ್, ಫೀಲ್ಡಿಂಗ್ ಅಭ್ಯಾಸ ಮಾಡಿದ್ದಾರೆ. ಹೀಗಾಗಿ ಏಷ್ಯಾ ಕಪ್ನಲ್ಲಿ ಸೂರ್ಯಕುಮಾರ್ ಅವರೇ ನಾಯಕನಾಗಿ ಮುಂದುವರೆಯಲಿದ್ದಾರೆ ಎನ್ನುವುದು ಇದು ಖಚಿತ ಪಡಿಸುತ್ತದೆ.
ಇದನ್ನೂ ಓದಿ:ಸ್ವಾತಂತ್ರ್ಯ ದಿನಾಚರಣೆಗೆ ಮಕ್ಕಳು, ಗಂಡ PSI ಅಧಿಕಾರಿನ ಕಳುಹಿಸಿ ಮನೆಯಲ್ಲಿ ಜೀವ ಬಿಟ್ಟ ಗೃಹಿಣಿ
/filters:format(webp)/newsfirstlive-kannada/media/media_files/2025/08/12/shubman-gill-captain-2025-08-12-17-22-12.jpg)
ಬೆಂಗಳೂರಿನಿಂದ ಮುಂಬೈಗೆ ತೆರಳುವ ಸೂರ್ಯಕುಮಾರ್ ಯಾದವ್ ಅವರು ಬಿಸಿಸಿಐನ ಸೆಲೆಕ್ಷನ್ ಕಮಿಟಿಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಆಗಸ್ಟ್ 19 ರಂದು ಆಟಗಾರರ ಆಯ್ಕೆಯಲ್ಲಿ ತಮ್ಮ ಅನಿಸಿಕೆ ಹಾಗೂ ಯಾವ ಯಾವ ಆಟಗಾರರು ಉತ್ತಮ ಎನ್ನುವ ಅಭಿಪ್ರಾಯ ತಿಳಿಸಲಿದ್ದಾರೆ. ಸಭೆಯಲ್ಲಿ ಆಟಗಾರರನ್ನು ಆಯ್ಕೆ ಮಾಡಿದ ಮೇಲೆ ಬಿಸಿಸಿಐ ಚೀಫ್ ಸೆಲೆಕ್ಟರ್, ಭಾರತದ ಮಾಜಿ ಪೇಸರ್ ಅಜಿತ್ ಅಗರ್ಕರ್ ಅವರ ಜೊತೆ ಮಾಧ್ಯಮಗೋಷ್ಠಿಯಲ್ಲಿ ಸೂರ್ಯಕುಮಾರ್ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ಭಾರತದ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ ಅವರಿಗೆ ಉಪನಾಯಕನ ಸ್ಥಾನ ಪಕ್ಕಾ ಎನ್ನಲಾಗಿದ್ದು ಅವರನ್ನು ಹೊರಗಿಡುವುದು ಅಸಾಧ್ಯದ ಮಾತಾಗಿದೆ. ಇನ್ನು ಈ ಟೂರ್ನಿಯಿಂದ ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಅವರನ್ನು ಹೊರಗಿಡಲಾಗುತ್ತಿದೆ. ಯುವ ಆಟಗಾರರಿಗೆ ಟೆಸ್ಟ್ ಕಡೆಗೆ ಹೆಚ್ಚಿನ ಗಮನ ಹರಿಸಲು ತಿಳಿಸಲಾಗಿದ್ದರಿಂದ ಅಯ್ಯರ್, ಜೈಸ್ವಾಲ್ಗೆ ಅವಕಾಶ ಇಲ್ಲ ಎಂದು ಬಿಸಿಸಿಐ ಮೂಲಗಳು ಹೇಳುತ್ತವೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ