ಗ್ರಾಹಕರಿಂದ ಭಾರೀ ವಿರೋಧ.. ತನ್ನ ನಿರ್ಧಾರ ಬದಲಿಸಿದ ICICI ಬ್ಯಾಂಕ್

ಆಗಸ್ಟ್​ 1 ರಿಂದ ಐಸಿಐಸಿ ಬ್ಯಾಂಕ್​ನಲ್ಲಿ ಹೊಸ ಖಾತೆ ಓಪನ್ ಮಾಡುವವರು ಕನಿಷ್ಠ ಸರಾಸರಿ ಬ್ಯಾಲೆನ್ಸ್ 50,000 ರೂಪಾಯಿ ಇರಿಸಬೇಕು ಎಂದು ಹೇಳಲಾಗಿತ್ತು. ಇದರಿಂದ ಸಾರ್ವಜನಿಕರ ವಲಯ ಸೇರಿದಂತೆ ಬ್ಯಾಂಕ್ ಗ್ರಾಹಕರು ಭಾರೀ ವಿರೋಧ ವ್ಯಕ್ತಪಡಿಸಿದ್ದರು.

author-image
Bhimappa
ICICI
Advertisment

ನವದೆಹಲಿ: ಗ್ರಾಹಕರ ತೀವ್ರ ವಿರೋಧದ ನಡುವೆ ಐಸಿಐಸಿ ಬ್ಯಾಂಕ್​ ತನ್ನ ನಿರ್ಧಾರ ಬದಲಾಯಿಸಿಕೊಂಡಿದೆ. ಬ್ಯಾಂಕ್​ ಅಕೌಂಟ್​ನಲ್ಲಿ ಕನಿಷ್ಠ ಸರಾಸರಿ ಮೊತ್ತ​ (Minimum Average Balance) ಅನ್ನು 50,000 ರೂಪಾಯಿಗಳಿಗೆ ಏರಿಕೆ ಮಾಡಿತ್ತು. ಇದೀಗ ಈ ನಿರ್ಧಾರದಿಂದ ಬ್ಯಾಂಕ್ ಹಿಂದೆ ಸರಿದಿದೆ. 

ಆಗಸ್ಟ್​ 1 ರಿಂದ ಐಸಿಐಸಿ ಬ್ಯಾಂಕ್​ನಲ್ಲಿ ಹೊಸ ಖಾತೆ ಓಪನ್ ಮಾಡುವವರು ಕನಿಷ್ಠ ಸರಾಸರಿ ಬ್ಯಾಲೆನ್ಸ್ 50,000 ರೂಪಾಯಿ ಇರಿಸಬೇಕು ಎಂದು ಹೇಳಲಾಗಿತ್ತು. ಇದರಿಂದ ಸಾರ್ವಜನಿಕರ ವಲಯ ಸೇರಿದಂತೆ ಬ್ಯಾಂಕ್  ಗ್ರಾಹಕರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಐಸಿಐಸಿ ಬ್ಯಾಂಕ್ 50 ಸಾವಿರ ರೂಪಾಯಿ ಬದಲಿಗೆ 15 ಸಾವಿರ ರೂಪಾಯಿಗಳನ್ನು ನಿಗದಿ ಮಾಡಿದೆ. 

ಇದನ್ನೂ ಓದಿ:ಮತ್ತೆ ಹೆಣ್ಣುಮಗು ಹುಟ್ಟಿದ್ದಕ್ಕೆ ಬಿಸ್ಕತ್​ನಲ್ಲಿ ವಿಷವಿಟ್ಟು ಜೀವ ತೆಗೆದ TSR ಯೋಧ!

JOB

ಮಹಾನಗರ ಹಾಗೂ ನಗರ ಪ್ರದೇಶಗಳಲ್ಲಿ ಖಾತೆ ಹೊಂದಿರುವವರು ತಮ್ಮ ಉಳಿತಾಯ ಖಾತೆಯಲ್ಲಿ ಮಾಸಿಕ ಕನಿಷ್ಠ ಸರಾಸರಿ ಮೊತ್ತವನ್ನು 15 ಸಾವಿರ ರೂಪಾಯಿ ಇರಿಸಿದರೆ ಸಾಕು ಎಂದಿದೆ. ಸೆಮಿ ಅರ್ಬನ್ (ಅರೆ-ನಗರ) ಪ್ರದೇಶಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು 25,000 ರೂಪಾಯಿಯಿಂದ 7,500 ರೂಪಾಯಿಗಳಿಗೆ ಇಳಿಕೆ ಮಾಡಲಾಗಿದೆ. ಗ್ರಾಮೀಣ ಮತ್ತು ಸೆಮಿ ಅರ್ಬನ್ ಪ್ರದೇಶಗಳಲ್ಲಿ ಹಳೆಯ ಗ್ರಾಹಕರಿಗೆ ಖಾತೆ ಮಿತಿಯನ್ನು 5,000 ರೂಪಾಯಿಯೇ ಇರಲಿದೆ. 

ಐಸಿಐಸಿಐ ಬ್ಯಾಂಕ್ ತನ್ನ ಕನಿಷ್ಠ ಸರಾಸರಿ ಬ್ಯಾಲೆನ್ಸ್ ಅನ್ನು 50,000 ರೂಪಾಗಳಿಗೆ ಏರಿಸಿರುವುದಕ್ಕೆ ಎಲ್ಲೆಡೆ ಟೀಕೆಗಳು ಕೇಳಿ ಬಂದಿದ್ದವು. 2020ರಲ್ಲಿ ಭಾರತದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​​ಬಿಐ) ಈ ನಿಯಮವನ್ನು ರದ್ದುಗೊಳಿಸಿತ್ತು. ಇತರ ಬ್ಯಾಂಕುಗಳು ಗಮನಾರ್ಹವಾಗಿ ಕಡಿಮೆ ಮಿತಿಗಳನ್ನು ಕಾಯ್ದುಕೊಳ್ಳುತ್ತಿವೆ. ಸಾಮಾನ್ಯವಾಗಿ 2,000 ರಿಂದ 10,000 ರೂಪಾಯಿ ವರೆಗೆ ನಿಗದಿ ಮಾಡಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ICIC Bank
Advertisment