/newsfirstlive-kannada/media/media_files/2025/09/07/shiva_tour_rail-2025-09-07-17-31-07.jpg)
ನವದೆಹಲಿ: ದೇಶದಲ್ಲಿರುವ 7 ಜ್ಯೋತಿರ್ಲಿಂಗಗಳ ದರ್ಶನ ಪಡೆಯಬೇಕು ಎನ್ನುವ ಆಸೆ ಇದೆಯಾ?, ಜ್ಯೋತಿರ್ಲಿಂಗಗಳು ಇದ್ದಲ್ಲಿಗೆ ಹೋಗಿ ಕಣ್ತುಂಬಿಕೊಳ್ಳಬೇಕು ಎನ್ನುವ ಬಯಕೆ ಇದೆಯಾ?. ಶಿವನ 7 ಅವತಾರಗಳನ್ನು ನೋಡಬೇಕು ಎನ್ನುವವವರಿಗೆ ಇಲ್ಲೊಂದು ಸುವರ್ಣಾವಕಾಶ ಇದೆ. ಅದೇ ಭಾರತದ ರೈಲ್ವೆ ಇಲಾಖೆಯು ಶಿವನ ಭಕ್ತರಿಗಾಗಿ ವಿಶೇಷವಾದ ಪ್ಯಾಕೇಜ್ ಘೋಷಿಸಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೆಷನ್ (ಐಆರ್ಸಿಟಿಸಿ) ಭಾರತ್ ಗೌರವ್ ಟ್ರೈನ್ ಪ್ಯಾಕೇಜ್ ಇದಾಗಿದೆ. ಇದು ಕೇವಲ 24,100 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ನವೆಂಬರ್ 18 ರಿಂದ ಈ ಜ್ಯೋತಿರ್ಲಿಂಗಗಳ ಪ್ರದೇಶಕ್ಕೆ ತೆರಳುವ ಪ್ರವಾಸ ಆರಂಭವಾಗಲಿದೆ. ಒಟ್ಟು 12 ದಿನಗಳ ಆಧ್ಯಾತ್ಮಿಕ ಪ್ರವಾಸ ಇದಾಗಿದ್ದು ಏಳು ಜ್ಯೋತಿರ್ಲಿಂಗಗಳ ದರ್ಶನ ಮಾಡೋರಿಗೆ ಇದೊಂದು ಉಡುಗೊರೆ ಎಂದೇ ಹೇಳಬಹುದು.
ಯಾವ್ಯಾವ ಸ್ಥಳಗಳಿಗೆ ಭೇಟಿ?
- ಓಂಕಾರೇಶ್ವರ
- ಮಹಾಕಾಳೇಶ್ವರ
- ನಾಗೇಶ್ವರ್
- ಸೋಮನಾಥ
- ತ್ರಯಂಬಕೇಶ್ವರ
- ಭೀಮಾಶಂಕರ
- ಗೃಷ್ಣೇಶ್ವರ
- ದ್ವಾರಕಾಧೀಶ್ ಮತ್ತು ಬೆಟ್ ದ್ವಾರಕಾದಂತಹ ಇತರ ಪ್ರಮುಖ ತಾಣಗಳಿಗೆ ಭೇಟಿ ಇರುತ್ತದೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
IRCTC ಅಧಿಕೃತ ವೆಬ್ಸೈಟ್ ಅಥವಾ ಅಧಿಕೃತ ಮಳಿಗೆಗಳ ಮೂಲಕ ಬುಕ್ ಮಾಡಬಹುದು
- Comfort- (2AC)- Rs 54,390 per person
- Standard- (3AC)- Rs 40,890 per person
- Economy- (Sleeper)- Rs 24,100 per person
ಈ ಫ್ಯಾಕೇಜ್ನಲ್ಲಿ ಏನೇನು ಲಭ್ಯ ಇವೆ?
- ಅತ್ಯುತ್ತಮ ಹೋಟೆಲ್ಗಳಲ್ಲಿ ರಾತ್ರಿ ತಂಗುವುದು (ನಿಮ್ಮ ಟಿಕೆಟ್ ಬಜೆಟ್ ತಕ್ಕನಾಗೆ ಇರುತ್ತದೆ)
- ಊಟ (ಸಸ್ಯಹಾರಿ ಮಾತ್ರ); ಬೆಳಗ್ಗೆ ಚಹಾ, ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ
- ಪ್ರಯಾಣಿಕರಿಗೆ ಪ್ರಯಾಣ ವಿಮೆ ಇರುತ್ತೆ
- ವೃತ್ತಿಪರ ಪ್ರವಾಸಿ ಬೆಂಗಾವಲುಗಾರರ (Escorts) ಸೇವೆಗಳು ಇವೆ
- IRCTC ಪ್ರವಾಸ ವ್ಯವಸ್ಥಾಪಕರು ಪ್ರಯಾಣದುದ್ದಕ್ಕೂ ಇರುತ್ತಾರೆ
- ಅನ್ವಯವಾಗುವ ಎಲ್ಲಾ ತೆರಿಗೆಗಳು ಪಾವತಿ
ಇದನ್ನೂ ಓದಿ: 17 ವಜ್ರದ ಉಂಗುರ, 24 Kgಗೂ ಅಧಿಕ ಚಿನ್ನ.. ಅಬ್ಬಾಬ್ಬ! ವೀರೇಂದ್ರ ಪಪ್ಪಿ ಅಕ್ರಮ ಆಸ್ತಿ ಎಷ್ಟು?
ಇವು ಫ್ಯಾಕೇಜ್ನಲ್ಲಿ ಇರುವುದಿಲ್ಲ
- ಸ್ಮಾರಕ, ದೇವಾಲಯ ಪ್ರವೇಶ, ಬೋಟಿಂಗ್ ಸೇರಿ ಇತರೆ ಶುಲ್ಕಗಳು
- ಪ್ರವಾಸದ ವೇಳೆ ಗೈಡ್ಗಳ ಶುಲ್ಕ, ಅವರ ಪ್ರವೇಶ ಇತ್ಯಾದಿ
- ಡ್ರೈವರ್ಗಳಿಗೆ, ವೇಟರ್ಸ್, ಗೈಡ್ಸ್ ಇತರರಿಗೆ ಟಿಪ್ಸ್
- ಲಾಂಡ್ರಿ, ನೀರು, ಆಹಾರ ಮತ್ತು ಪಾನೀಯಗಳಂತಹ ವೈಯಕ್ತಿಕ ವೆಚ್ಚಗಳು
ಪ್ರಯಾಣದ ಪ್ರಮುಖ ವಿವರ ಹೇಗಿದೆ?
ಈ ಜ್ಯೋತಿರ್ಲಿಂಗಗಳ ದರ್ಶನ ಪಡೆಯುವ ಪ್ರಯಾಣವು ನವೆಂಬರ್ 18 ರಿಂದ ಆರಂಭವಾಗಿ ನವೆಂಬರ್ 29ಕ್ಕೆ ಕೊನೆಗೊಳ್ಳುತ್ತದೆ. ಪ್ರವಾಸವು ಒಟ್ಟು 11 ರಾತ್ರಿಗಳು ಅಥವಾ 12 ದಿನಗಳು ಆಗಿರುತ್ತವೆ. ಯೋಗ ನಗರವಾದ ಋಷಿಕೇಷದಿಂದ ಈ ಪವಿತ್ರಾ ಯಾತ್ರೆ ಆರಂಭವಾಗುತ್ತದೆ. ಹರಿದ್ವಾರ, ಲಕ್ನೋ, ಕಾನ್ಪುರ ಸೇರಿ ಇತರೆ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರು ರೈಲು ಹತ್ತಬಹುದು. ಒಟ್ಟು 767 ಪ್ಯಾಸೆಂಜರ್ಸ್ಗೆ ಮಾತ್ರ ಇಲ್ಲಿ ಅವಕಾಶ ಇರುತ್ತದೆ. ಈ ಪ್ರವಾಸಕ್ಕೆ ಬರಬೇಕು ಎನ್ನುವವರು ಒಂದು ಗುರುತಿಚಿನ ಚೀಟಿ ಮತ್ತು ಕೋವಿಡ್-19 ಲಸಿಕೆಯ ಪಡೆದ ಸರ್ಟಿಫಿಕೆಟ್ ಇರಲೇಬೇಕು ಎಂದು ತಿಳಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ