/newsfirstlive-kannada/media/media_files/2025/09/07/veerendra_puppy-1-2025-09-07-15-35-10.jpg)
ಚಿತ್ರದುರ್ಗ: ಆನ್ ಲೈನ್ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಕಾಂಗ್ರೆಸ್​ ಶಾಸಕ ವೀರೇಂದ್ರ ಪಪ್ಪಿಯನ್ನು ಸಿಕ್ಕಿಂನಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅಲ್ಲದೇ ವೀರೇಂದ್ರ ಪಪ್ಪಿ ನಿವಾಸದ ಮೇಲೆ ದಾಳಿ ಮಾಡಿದ್ದ ವೇಳೆ ಕೋಟ್ಯಂತರ ರೂಪಾಯಿ, ಚಿನ್ನ, ಬೆಳ್ಳಿ ವಶಕ್ಕೆ ಪಡೆಯಲಾಗಿತ್ತು. ಈಗ ಇದರ ಬೆನ್ನಲ್ಲೇ ಬ್ಯಾಂಕ್​ ಲಾಕರ್​ಗಳಲ್ಲೂ ಪರಿಶೀಲನೆ ನಡೆಸಿದ್ದು ಇಡಿ ಅಧಿಕಾರಿಗಳು ಅಕ್ಷರಶಃ ದಂಗಾಗಿ ಹೋಗಿದ್ದಾರೆ.
ಸದ್ಯ ಇಡಿ ವಶದಲ್ಲಿ ಇರುವ ಕಾಂಗ್ರೆಸ್​ ಶಾಸಕನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಆನ್ ಲೈನ್ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆ ಇಡಿ ತನಿಖೆ ನಡೆಯುತ್ತಿದೆ. ಚಳ್ಳಕೆರೆ ನಗರದ ಬ್ಯಾಂಕ್​ಗಳಿಗೆ ಇಡಿ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಂಗ್ರೆಸ್​ ಶಾಸಕನ ಬ್ಯಾಂಕ್ ಲಾಕರ್​​ ಓಪನ್ ಮಾಡಿ ನೋಡಿದಾಗ ಅಧಿಕಾರಿಗಳೇ ಫುಲ್ ಶಾಕ್ ಆಗಿದ್ದಾರೆ.
/filters:format(webp)/newsfirstlive-kannada/media/media_files/2025/08/24/veerendra_puppy-2025-08-24-12-37-47.jpg)
ಎಐಎಸ್​ಎಕ್ಸ್​ ಬ್ಯಾಂಕ್​ನ ಲಾಕರ್​​ಗಳಲ್ಲಿ 24.5 ಕೆ.ಜಿ ಗೋಲ್ಡ್ ಬಿಸ್ಕೆಟ್, 17 ವಜ್ರದ ಉಂಗುರಗಳು ಪತ್ತೆ ಆಗಿವೆ. ಇವುಗಳ ಜೊತೆಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಪತ್ರಗಳನ್ನು ಪರಿಶೀಲನೆ ಮಾಡುವಾಗ ಕಂಡು ಅಧಿಕಾರಿಗಳ ತಲೆ ಗಿರ್​ರ್​​.. ಎಂದಿದೆ. ಈ ಬ್ಯಾಂಕ್ ಅಲ್ಲದೇ ಕೋಟಕ್ ಮಹೀಂದ್ರಾ ಬ್ಯಾಂಕ್​​ನಲ್ಲಿ ಸುಮಾರು 5 ಕೆ.ಜಿ ಗೋಲ್ಡ್ ಬಿಸ್ಕೆಟ್ ಅಧಿಕಾರಿಗಳಿಗೆ ಲಭ್ಯವಾಗಿದೆ.
ಎಸ್​​ಬಿಐ ಬ್ಯಾಂಕ್​ನಲ್ಲೂ ದುಪಟ್ಟು ಗಟ್ಟಿ ಬಂಗಾರದ ಬಿಸ್ಕೆಟ್, ಆಸ್ತಿ ಪತ್ರಗಳು ಸಿಕ್ಕಿವೆ. ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿ ಶಾಸಕ ಪಪ್ಪಿಗೆ ಇಡಿ ಡ್ರಿಲ್ ಮಾಡುತ್ತಿದೆ. ಈ ವೇಳೆ ಅವರ ಹೇಳಿಕೆ ಆಧರಿಸಿ ಚಳ್ಳಕೆರೆ ನಗರದ ಬ್ಯಾಂಕ್​ಗಳಲ್ಲಿ ಪರಿಶೀಲನೆ ಮಾಡಲಾಗಿತ್ತು. ಕೈ ಶಾಸಕ ವೀರೇಂದ್ರ ಪಪ್ಪಿ ವಾಸವಿದ್ದ ಚಳ್ಳಕೆರೆ ಬ್ಯಾಂಕ್​ಗಳಲ್ಲಿ 3 ಬಾರಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us