/newsfirstlive-kannada/media/media_files/2025/09/03/rail_indian-2025-09-03-11-24-51.jpg)
ಶ್ರೀನಗರ: ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಯಲ್ಲಿ ಜಮ್ಮು ಮತ್ತು ಕತ್ರಾ ರೈಲ್ವೆ ಸ್ಟೇಷನ್ಗಳಿಂದ ಹೊರಡುವ ಹಾಗೂ ಒಳ ಬರುವಂತಹ 68 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ಭಾರತದ ರೈಲ್ವೆ ಇಲಾಖೆ ಹೇಳಿದೆ. ಸೆಪ್ಟೆಂಬರ್ 30ರ ವರೆಗೆ ರೈಲುಗಳ ಸಂಚಾರ ಕ್ಯಾನ್ಸಲ್ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಜಮ್ಮು ಮತ್ತು ಕತ್ರಾ ರೈಲ್ವೆ ಸ್ಟೇಷನ್ಗಳಿಂದ ಹೊರಡುವ ಹಾಗೂ ಒಳ ಬರುವ 68 ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ಇದರ ಜೊತೆಗೆ 24 ರೈಲುಗಳನ್ನು ಪುನಾರಂಭಿಸಲಾಗಿದೆ. ಜೋರಾದ ಮಳೆ ಹಾಗೂ ಹಠಾತ್ ಪ್ರವಾಹಗಳಿಂದ ರೈಲುಗಳ ಸಂಚಾರ ವೇಳಾಪಟ್ಟಿ ಜೋಡಣೆಯಾಗುತ್ತಿಲ್ಲ. ಹೀಗಾಗಿ ಕಳೆದ 8 ದಿನಗಳಿಂದ ಪಠಣ್ಕೋಟ್ ಹಾಗೂ ಜಮ್ಮು ವಿಭಾಗದ ಕೆಲವು ಪ್ರದೇಶಗಳ ರೈಲುಗಳ ಸಂಚಾರ ರದ್ದು ಮಾಡಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: IPLಗೆ ಗುಡ್ ಬೈ ಹೇಳಿದ ಬೆನ್ನಲ್ಲೇ ಪ್ರತಿಷ್ಠಿತ ಬಿಬಿಎಲ್ನಲ್ಲಿ ಕಾಣಿಸಿಕೊಳ್ತಾರಾ ಲೆಜೆಂಡರಿ ಪ್ಲೇಯರ್?
ಜಮ್ಮುಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರವಾದ ಮಳೆಯಾಗುತ್ತಿದೆ. ಈಗಾಗಲೇ ಸಾಕಷ್ಟು ಆಸ್ತಿ-ಪಾಸ್ತಿ ಹಾನಿಯಾಗಿದೆ. ಕೆಲವೊಂದು ಕಡೆ ಜೀವ ಹಾನಿ ಕೂಡ ಆಗಿದೆ. ಸೇತುವೆ, ಬ್ರಿಡ್ಜ್ಗಳು, ರೈಲು ಹಳಿಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ. ಮೊದಲೇ ಕಣಿವೆ ಪ್ರದೇಶವಾಗಿದ್ದರಿಂದ ಸ್ಥಳೀಯರ ಸಂಚಾರಕ್ಕೆ ಹೆಚ್ಚು ಅನಾನುಕೂಲ ಆಗಿದೆ. ಇನ್ನು ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ರೈಲುಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ನಿಷೇಧ ಮಾಡಲಾಗಿದೆ.
ಆಗಸ್ಟ್ 26 ರಿಂದ ಜಮ್ಮುಕಾಶ್ಮೀರದಲ್ಲಿ ರಣಭೀಕರವಾದ ಮಳೆಯಾಗುತ್ತಿದ್ದು ಜನರು, ಯಾತ್ರಿಕರು, ಕಾರ್ಮಿಕರು ಎಲ್ಲರು ಸಮಸ್ಯೆಗೆ ಸಿಲುಕಿದ್ದಾರೆ. ಮಾತಾ ವೈಷ್ಣೋ ದೇವಿ ಯಾತ್ರಿಕರ ಮೇಲೆ ಗುಡ್ಡ ಕುಸಿದು 34 ಜನರು ಜೀವ ಕಳೆದುಕೊಂಡಿದ್ದರು. ಧಾರಾಕಾರ ಮಳೆಯಿಂದ ಭೂಕುಸಿ, ಪ್ರವಾಹ, ಬೆಟ್ಟಗಳು ಕುಸಿದು ಬೀಳುವಂತಹ ಘಟನೆಗಳು ನಡೆಯುತ್ತಿವೆ. ಇದರಿಂದ ಹಲವೆಡೆ ರೈಲು ಹಳಿಗಳಿಗೂ ಹಾನಿಯಾಗಿದೆ. ಈ ಎಲ್ಲ ದೃಷ್ಟಿಯಲ್ಲಿಟ್ಟುಕೊಂಡು ಸೆಪ್ಟೆಂಬರ್ 30ರ ವರೆಗೆ 68 ರೈಲುಗಳನ್ನು ಕ್ಯಾನ್ಸಲ್ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ