/newsfirstlive-kannada/media/media_files/2025/09/03/team_india-4-2025-09-03-10-46-16.jpg)
ರವಿಚಂದ್ರನ್ ಅಶ್ವಿನ್ ಅವರು 2026ರ ಐಪಿಎಲ್ಗೂ ಮೊದಲೇ ವಿದಾಯ ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದ ಆರ್ ಅಶ್ವಿನ್ ಅವರು ಮೊನ್ನೆ ಮೊನ್ನೆ ಅಷ್ಟೇ ಐಪಿಎಲ್ಗೆ ನಿವೃತ್ತಿ ಹೇಳಿದ್ದರು. ಇದರ ಬೆನ್ನಲ್ಲೇ ಇತರೆ ಟಿ20 ಲೀಗ್ಗಳಲ್ಲಿ ಆಡಲು ನನಗೆ ಇಷ್ಟ ಇದೆ ಎಂದು ಆರ್ ಅಶ್ವಿನ್ ಹೇಳಿದ್ದಾರೆ. ಅಲ್ಲದೇ ಈ ಬಾರಿಯ ಬಿಬಿಎಲ್ನಲ್ಲೂ ಆರ್ ಅಶ್ವಿನ್ ಆಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಭಾರತದ ಲೆಜೆಂಡರಿ ಆಫ್ ಸ್ಪಿನ್ನರ್ ಆಗಿರುವ ಆರ್ ಅಶ್ವಿನ್ ಇತರೆ ಟಿ20 ಲೀಗ್ಗಳಲ್ಲಿ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅಶ್ವಿನ್ ಅವರು ಐಎಲ್ಟಿ20 ಮೆಗಾ ಆಕ್ಷನ್ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ಮುಂದಿನ ಬಿಗ್ ಬ್ಯಾಷ್ ಲೀಗ್ನಲ್ಲಿ ಆರ್ ಅಶ್ವಿನ್ ಅವರು ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಳಾಗಿದೆ.
ಇದನ್ನೂ ಓದಿ: ಅದ್ಧೂರಿ ಗಣೇಶ ಮೆರವಣಿಗೆ.. ವಿದ್ಯುತ್ ತಂತಿ ಮೇಲೆತ್ತುವಾಗ ಶಾಕ್ನಿಂದ ಯುವಕ ಬಲಿ
ಇನ್ನು ಆರ್ ಅಶ್ವಿನ್ ಅವರನ್ನು ಬಿಬಿಎಲ್ನಲ್ಲಿ ಆಡಿಸಲು ಆಸ್ಟ್ರೇಲಿಯಾದ ಕ್ರಿಕೆಟ್‌ನ ಸಿಇಒ ಟೊಡ್ ಗ್ರೀನ್ಬರ್ಗ್ ಅವರು ಉತ್ಸುಕರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸಖತ್ ಫೇಮಸ್ ಆಗಿರುವ ಈ ಬಿಬಿಎಲ್ ಲೀಗ್ನಲ್ಲಿ ಮೊಟ್ಟ ಮೊದಲ ಬಾರಿಗೆ ಆಡಿದ ಭಾರತದ ಆಟಗಾರ ಎಂದರೆ ಅದು ಉನ್ಮುಕ್ತ್ ಚಂದ್ ಆಗಿದ್ದಾರೆ. ಒಂದು ವೇಳೆ ಈ ಬಾರಿ ಆರ್ ಅಶ್ವಿನ್ ಅವರು ಅಖಾಡಕ್ಕೆ ಧುಮುಕಿದರೆ 2ನೇ ಭಾರತೀಯ ಎನ್ನುವ ಖ್ಯಾತಿ ಪಡೆಯಲಿದ್ದಾರೆ.
ಲಂಡನ್ನ ನ್ಯೂಲ್ಯಾಂಡ್ಸ್ನಲ್ಲಿ ನಡೆದ 2009ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆರ್.ಅಶ್ವಿನ್ ಡೆಬ್ಯು ಮಾಡಿದ್ದರು. ಆದರೆ ಈ ಪಂದ್ಯದಲ್ಲಿ ಎದುರಾಳಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿತ್ತು. ಟಿ20 ಪಂದ್ಯಗಳಲ್ಲಿ ಅತ್ಯುತ್ತಮ ಸ್ಪಿನ್ನರ್ ಎಂದು ಖ್ಯಾತಿ ಪಡೆದಿರುವ ಇವರು ಆಡಿದ ಐಪಿಎಲ್ ಟೂರ್ನಿಗಳಲ್ಲಿ ಇದುವರೆಗೆ 187 ವಿಕೆಟ್ಗಳನ್ನು ಉರುಳಿಸಿದ್ದಾರೆ. 833 ರನ್ ಗಳಿಸಿದ್ದು ಇದರಲ್ಲಿ ಒಂದು ಅರ್ಧಶತಕ ಇದೆ. ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ಆರ್ ಅಶ್ವಿನ್ 5ನೇ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ