ಅಂಬಾನಿಯ ‘ವಂತಾರ’ದಲ್ಲಿ ಕಳ್ಳಸಾಗಣೆ ಸೇರಿ ಅಕ್ರಮ ಆರೋಪ.. SIT ರಚಿಸಿದ ಸುಪ್ರೀಂ ಕೋರ್ಟ್​

ವಂತಾರ ವನ್ಯಜೀವಿ ಸಂರಕ್ಷಣಾ ಕೇಂದ್ರ ಕುರಿತು ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಜಾಸ್ತಿ ಚೆಲಮೇಶ್ವರ್​ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್​ಐಟಿ)ವನ್ನು ಸುಪ್ರೀಂ ಕೋರ್ಟ್ ರಚನೆ ಮಾಡಿದೆ.

author-image
Bhimappa
Vantara
Advertisment

ನವದೆಹಲಿ: ವಂತಾರ ವನ್ಯಜೀವಿ ಸಂರಕ್ಷಣಾ ಕೇಂದ್ರ ಕುರಿತು ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಜಾಸ್ತಿ ಚೆಲಮೇಶ್ವರ್​ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್​ಐಟಿ)ವನ್ನು ಸುಪ್ರೀಂ ಕೋರ್ಟ್ ರಚನೆ ಮಾಡಿದೆ. ಪರಿಸರ, ವನ್ಯಜೀವಿ ಆರ್ಥಿಕ ನಿಯಮಗಳ ಉಲ್ಲಂಘನೆ ಮಾಡುತ್ತಿರುವ ಕುರಿತು ಸಾಕಷ್ಟು ಅರ್ಜಿಗಳು ಬಂದಿರುವ ಕಾರಣ ಸುಪ್ರೀಂ ಕೋರ್ಟ್​ ಎಸ್​ಐಟಿಯನ್ನು ರಚನೆ ಮಾಡಿದೆ. 

ನಿವೃತ್ತ ನ್ಯಾಯಮೂರ್ತಿ ಜಾಸ್ತಿ ಚೆಲಮೇಶ್ವರ್​ ನೇತೃತ್ವದ ಎಸ್​ಐಟಿ ತಂಡದಲ್ಲಿ ಉತ್ತರಾಖಂಡ ಮತ್ತು ತೆಲಂಗಾಣ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್, ಮುಂಬೈನ ಮಾಜಿ ಪೊಲೀಸ್ ಆಯುಕ್ತ ಹೇಮಂತ್ ನಾಗ್ರಾಲೆ ಹಾಗೂ ಮಾಜಿ ಭಾರತೀಯ ಕಂದಾಯ ಸೇವೆ (ಐಆರ್​ಎಸ್​) ಅಧಿಕಾರಿ ಅನೀಶ್ ಗುಪ್ತಾ ಅವರು ತಂಡದಲ್ಲಿ ಇದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.  

ಗುಜರಾತ್​ನ ಜಾಮ್ನಾನಗರದಲ್ಲಿರುವ ಅಂಬಾನಿ ಕುಟುಂಬದ ರಿಲಯನ್ಸ್​ ಇಂಡಸ್ಟ್ರೀಸ್ ಮತ್ತು ರಿಲಯನ್ಸ್​​ ಫೌಂಡೇಷನ್ ವತಿಯಿಂದ ಆರಂಭಿಸಿದ ವಂತಾರ ವನ್ಯಜೀವಿ ಸಂರಕ್ಷಣಾ ಕೇಂದ್ರದಲ್ಲಿ ಅಕ್ರಮ ವನ್ಯಜೀವಿ ಸಾಗಾಟ, ಪರಿಸರ ಹಾಗೂ ಆರ್ಥಿಕ ನಿಯಮಗಳ ಕುರಿತು ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಸಾಕಷ್ಟು ಅರ್ಜಿಗಳು ಬಂದಿದ್ದರಿಂದ ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಎಸ್​ಐಟಿಯನ್ನು ರಚನೆ ಮಾಡಲಾಗಿದೆ. 

ಇದನ್ನೂ ಓದಿ: ನಿಲ್ಲದ ವರದಕ್ಷಿಣೆ ಕಿರುಕುಳ.. ಪೆಟ್ರೋಲ್ ಸುರಿದು 3 ವರ್ಷದ ಮಗಳ ಜೊತೆ ಬೆಂಕಿ ಹಚ್ಚಿಕೊಂಡ ತಾಯಿ

ಹೆತ್ತ ಕಂದಮ್ಮನ ಹುಡುಕುತ್ತ 150 ಕಿಮೀ ಅಲೆದಾಟ.. ಮೃತ ಮುದ್ದು ಮರಿಗಾಗಿ ತಾಯಿ ಮೂಕ ರೋಧನೆ..

ಯಾವ್ಯಾವ ವಿಷಯ ಎಸ್​ಐಟಿ ತನಿಖೆ ಮಾಡಲಿದೆ? 

  • ಸ್ವದೇಶ ಹಾಗೂ ವಿದೇಶಗಳಲ್ಲಿನ ಪ್ರಾಣಿಗಳನ್ನು ಹೇಗೆ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದ್ದರು. ಅದರಲ್ಲಿ ವಿಶೇಷವಾಗಿ ಆನೆಗಳನ್ನು ಯಾಕೆ ತೆಗೆದುಕೊಳ್ಳಲಾಗುತ್ತಿದೆ? 
  • 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಂತೆ ವಂತಾರದಲ್ಲಿ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆಯಾ? 
  • ಅಂತರಾಷ್ಟ್ರೀಯ ಪ್ರೋಟೋಕಾಲ್​​; ಅಳಿವಿನಂಚಿನಲ್ಲಿರುವ ಪ್ರಾಣಿ, ಸಸ್ಯಗಳನ್ನು ಆಮದು, ರಫ್ತು ಮಾಡುವಾಗ ಕಾನೂನುಗಳು ಪಾಲನೆ ಆಗಿವೆಯಾ ಎಂದು ಪರಿಶೀಲನೆ. 
  • ಪಶುಸಂಗೋಪನೆ, ಪಶುವೈದ್ಯಕೀಯ ಆರೈಕೆ, ಪ್ರಾಣಿ ಕಲ್ಯಾಣದಡಿ ಪ್ರಾಣಿಗಳು ಮರಣ ಹೊಂದಿದರೆ ಯಾವ್ಯಾವ ಮಾನದಂಡ ಪಾಲಿಸಲಾಗುತ್ತದೆ ಎಂಬುದರ ತನಿಖೆ
  • ವಂತಾರದ ಹವಾಮಾನ ಸೂಕ್ತತೆ ಹಾಗೂ ಕೈಗಾರಿಕೆಗಾಗಿ ಇರುವ ದೂರುಗಳ ಬಗ್ಗೆ ಪರಿಶೀಲನೆ
  • ತಳಿ ಪದ್ಧತಿ ಮತ್ತು ಜೀವ ವೈವಿದ್ಯತೆ ಸಂಪನ್ಮೂಲಗಳ ಬಳಕೆಗೆ ಸಂಬಂಧಿಸಿದ ಆರೋಪಗಳ ಕುರಿತು ಪರಿಶೀಲನೆ
  • ಜಲ ಸಂಪನ್ಮೂಲ ದುರ್ಬಳಕೆ ಹಾಗೂ ಕಾರ್ಬನ್ ಕ್ರೆಡಿಟ್ ಯೋಜನೆ ಕುರಿತು ತನಿಖೆ 
  • ಅಪಾದಿತ ಕಳ್ಳಸಾಗಣಿಕೆ ಚಟುವಟಿಕೆ ಸೇರಿದಂತೆ ವನ್ಯಜೀವ ಮತ್ತು ವ್ಯಾಪಾರ ಕಾನೂನುಗಳ ಉಲ್ಲಂಘನೆ ಆಗಿವೆಯಾ? 
  • ಹಣ ಕಾಸಿನ ಸಂಬಂಧ ಹಾಗೂ ಮನಿಲಾಂಡರಿಂಗ್ ಆರೋಪ ಕುರಿತು ಪರಿಶೀಲನೆ 
  • ಅರ್ಜಿಯಲ್ಲಿರುವ ಇತೆರ ಆರೋಪಗಳನ್ನು ಎಸ್​ಐಟಿ ಪರಿಶೀಲನೆ ಮಾಡಲಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Vantara
Advertisment