/newsfirstlive-kannada/media/media_files/2025/08/26/rr_mother_doughter-2025-08-26-09-02-52.jpg)
ವರದಕ್ಷಿಣೆ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದೆ. ಗ್ರೇಟರ್ ನೋಯ್ಡಾ ಹಾಗೂ ದೆಹಲಿಯ ಪ್ರಕರಣಗಳು ಮಾಸುವ ಮೊದಲೇ ರಾಜಸ್ಥಾನದಲ್ಲಿ ಭಯಾನಕವಾದ ಕೃತ್ಯ ಬೆಳಕಿಗೆ ಬಂದಿದೆ. ಅಸಲಿಗೆ ಏನಿದು ಪ್ರಕರಣ, ಆಗಿದ್ದು ಆದರೂ ಹೇಗೆ. ಈಕೃತ್ಯದಲ್ಲಿ ಯಾರು ಯಾರು ಇದ್ದಾರೆ?.
ಮೊನ್ನೆ ಮೊನ್ನೆಯಷ್ಟೇ ಅಂದ್ರೆ ಆಗಸ್ಟ್​ 21 ರಂದು ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ಪತಿ ಹಾಗೂ ಅವರ ಮನೆಯವರ ಧನದಾಹದ ಕಿಚ್ಚಿಗೆ ಮಹಿಳೆ ಬೆಂಕಿಯಲ್ಲಿ ಬೆಂದು ಜೀವ ಬಿಟ್ಟಿದ್ದಳು. ಮಕ್ಕಳ ಮಂದೆಯೇ ನರಳಿ ನರಳಿ ಪ್ರಾಣ ಬಿಟ್ಟಿದ್ದು ಹೃದಯ ವಿದ್ರಾವಕ ಘಟನೆ ಆಗಿದೆ. ಈ ಘಟನೆ ಇನ್ನು ಕಣ್ಣಿಗೆ ಕಟ್ಟಿದಂತೆ ಇದೆ. ಈ ಘಟನೆ ಮಾಸುವ ಮೊದಲೇ ವರದಕ್ಷಿಣೆ ಕಿರುಕುಳಕ್ಕೆ ರಾಜಸ್ಥಾನದಲ್ಲಿ ಮತ್ತೆರಡು ಜೀವಗಳು ಬಲಿಯಾಗಿವೆ.
/filters:format(webp)/newsfirstlive-kannada/media/media_files/2025/08/25/up_woman-3-2025-08-25-07-35-32.jpg)
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸಾವಿಗೆ ಶರಣಾದ ಶಿಕ್ಷಕಿ
ವರದಕ್ಷಿಣಿಯ ಕಿರುಕುಳಕ್ಕೆ ನತದೃಷ್ಟ ಅಮ್ಮ, ಮಗಳು ಬಲಿಯಾಗಿದ್ದಾರೆ. ಪುಟ್ಟ ಕಂದಮ್ಮನ ಹೆಸರು ಯಶಸ್ವಿ, ತಾಯಿ ಸಂಜು ಬಿಷ್ಣೋಯ್. ಈಕೆ ಹೇಳಿ ಕೇಳಿ ಸರ್ಕಾರಿ ಶಾಲಾ ಉಪನ್ಯಾಸಕಿ ಆಗಿದ್ದಾರೆ. ಈಕೆಗೆ ಪತಿ ಕುಟುಂಬ ಕೊಟ್ಟ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ದೇಹದ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಜೀವ ಬೆಂಕಿಯಲ್ಲಿ ಬೆಂದು ಹೋಗಿದೆ. ರಾಜಸ್ಥಾನದ ಜೋಧಪುರ ಕಮಿಷನರೇಟ್‌ನ ಸರ್ನಾದ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಿರುಕುಳಕ್ಕೆ ಬೆಂದ ತಾಯಿ-ಮಗು!
ಆಗಸ್ಟ್​ 22 ರಂದು ಕೆಲಸ ಮುಗಿಸಿ ಮನೆಗೆ ಬಂದಿದ್ದ ಸಂಜು ಬಿಷ್ಣೋಯ್, ಮನೆಯಲ್ಲಿರೋ ಡೈನಿಂಗ್​ ಚೇರ್​ ಮೇಲೆ ಕುಳಿತು ಬೆಂಕಿ ಹಚ್ಚಿಕೊಂಡು ಜೀವ ಬಿಟ್ಟಿದ್ದಾಳೆ. ತಾನು ಹೋದ ಮೇಲೆ ತನ್ನ ಮಗಳೇನು ಮಾಡ್ತಾಳೆ ಅಂತ ಭಯ ಪಟ್ಟ ಸಂಜು, ಮಗಳ ಮೇಲೂ ಪೆಟ್ರೋಲ್​ ಸುರಿದಿದ್ದಾಳೆ. ಇದೇನು ತಿಳಿಯದ ಆ ಮಗು ತಾಯಿಯನ್ನ ನೋಡುತ್ತಿರುವಾಗ್ಲೇ ಬೆಂಕಿ ಹಚ್ಚಿದ್ದಾಳೆ. ಮೂರು ವರ್ಷದ ಯಶ್ವಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಸಂಜು ಮತ್ತು ಆಕೆಯ ಮಗಳು ಬೆಂಕಿಯಲ್ಲಿ ಸುಟ್ಟು ಕರಕಲಾದಾದ ವೇಳೆಯಲ್ಲಿ ಪತಿ, ಅವರ ಅತ್ತೆ ಮನೆಯವರು ಯಾರು ಇರಲಿಲ್ಲ ಅಂತ ತಿಳಿದು ಬಂದಿದೆ. ಮನೆಯಿಂದ ಹೊಗೆ ಬರುತ್ತಿರುವುದನ್ನ ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮತ್ತು ಪತಿ ದಿಲೀಪ್ ಬಿಷ್ಣೋಯ್ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಸಂಜುಳನ್ನ ಆಸ್ಪತ್ರೆಗ ಸಾಗಿಸಲಾಯ್ತು. ಆದ್ರೆ ಪುಟ್ಟ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಮನೆಯಲ್ಲಿ ಪರಿಶೀಲನೆ ವೇಳೆ ಡೆತ್​ನೋಟು ಸಿಕಿದ್ದು ಸಾವಿನ ರಹಸ್ಯ ಬಯಲಾಗಿದೆ.
ಇದನ್ನೂ ಓದಿ:ಘೋರ ದುರಂತ.. ಸೊಸೆಗೆ ಬೆಂಕಿ ಹಚ್ಚಿ ಜೀವ ತೆಗೆದ ಅತ್ತೆ, ಮಾವ, ಗಂಡ.. ಮಗು ಹೇಳಿದ್ದೇನು?
/filters:format(webp)/newsfirstlive-kannada/media/media_files/2025/08/26/rr_mother_doughter_1-2025-08-26-09-03-38.jpg)
ಡೆತ್​ ನೋಟ್​ನಲ್ಲಿ ಏನಿದೆ?
- ವರದಕ್ಷಿಣೆಗಾಗಿ ಪತಿಯ ಮನೆಯವರಿಂದ ಕಿರುಕುಳ
- ಪತಿ ದಿಲೀಪ್, ಅವರ ತಾಯಿ-ತಂದೆಯಿಂದ ಹಿಂಸೆ
- ಡೆತ್​ ನೋಟ್​ನಲ್ಲಿ ಗಣಪತ್ ಸಿಂಗ್ ಹೆಸರು ಉಲ್ಲೇಖ
- ಪತಿ ದಿಲೀಪ್​ ಬಿಷ್ಣೋಯ್, ಗಣಪತ್ ಸಿಂಗ್ ಹಲ್ಲೆ
- ಸಾಕ್ಷ್ಯಗಳನ್ನ ಸಂಗ್ರಹಿಸ್ತಿದ್ದ ವೇಳೆ ಡೆತ್​ ನೋಟ್​ ಪತ್ತೆ
- ಪೆಟ್ರೋಲ್​ ಕ್ಯಾನ್, ಮೃತ ಸಂಜು ಮೊಬೈಲ್​ ವಶಕ್ಕೆ
- ಮೃತ ಮಹಿಳೆಯ ಮೊಬೈಲ್​ ಫಾರೆನ್ಸಿಕ್ಸ್ ಟೆಸ್ಟ್​ಗೆ ರವಾನೆ
10 ವರ್ಷಗಳ ಹಿಂದೆ ದಿಲೀಪ್ ಬಿಷ್ಣೋಯ್, ಸಂಜು ವಿವಾಹವಾಗಿದ್ದರು ಎಂದು ಹೇಳಲಾಗ್ತಿದೆ. ಅದ್ಹೇನೆ ಇರಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನಿಖೆಯಿಂದ ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು ಅನ್ನೋದು ಸಂಜು ಪೋಷಕರ ಅಳಲು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us