Advertisment

1993ರಲ್ಲೇ ಮೋಡಿ ಮಾಡಿತ್ತು ‘ಲವ್‌ಬರ್ಡ್’! ದೇಶದ ಮೊದಲ ಎಲೆಕ್ಟ್ರಿಕ್ ಕಾರು ಯಾವ್ದು ಗೊತ್ತಾ?

ಇಂದು ಭಾರತದ ರಸ್ತೆಗಳಲ್ಲಿ ಟಾಟಾ ನೆಕ್ಸಾನ್ (Tata Nexon), ಎಂಜಿ ಕಾಮೆಟ್ ಅಥವಾ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳನ್ನು ನೋಡುವುದು ಸಾಮಾನ್ಯವಾಗಿದೆ. ಎಲೆಕ್ಟ್ರಿಕ್ ವಾಹನಗಳ (EV) ಕ್ರಾಂತಿ ಜೋರಾಗಿಯೇ ನಡೆಯುತ್ತಿದೆ. ಈ ಕ್ರಾಂತಿಗೆ ಅಡಿಪಾಯ ಹಾಕಿದ್ದು ಯಾವುದು ಗೊತ್ತಾ?

author-image
Ganesh Kerekuli
first EV
Advertisment

ಇಂದು ಭಾರತದ ರಸ್ತೆಗಳಲ್ಲಿ ಟಾಟಾ ನೆಕ್ಸಾನ್ (Tata Nexon), ಎಂಜಿ ಕಾಮೆಟ್ ಅಥವಾ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳನ್ನು ನೋಡುವುದು ಸಾಮಾನ್ಯವಾಗಿದೆ. ಎಲೆಕ್ಟ್ರಿಕ್ ವಾಹನಗಳ (EV) ಕ್ರಾಂತಿ ಜೋರಾಗಿಯೇ ನಡೆಯುತ್ತಿದೆ. ಈ ಕ್ರಾಂತಿಗೆ ಅಡಿಪಾಯ ಹಾಕಿದ್ದು ಯಾವುದು ಗೊತ್ತಾ?

Advertisment

ಬಹುತೇಕರು ‘ರೇವಾ’ (Reva) ಭಾರತದ ಮೊದಲ ಎಲೆಕ್ಟ್ರಿಕ್ ಕಾರು ಎಂದು ಭಾವಿಸಿದ್ದಾರೆ. ಆದರೆ ಅದಕ್ಕೂ ಮುನ್ನವೇ, ಅಂದರೆ 1993ರಲ್ಲೇ ಪುಟ್ಟ ಎಲೆಕ್ಟ್ರಿಕ್ ಕಾರೊಂದು ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು. ಅದರ ಹೆಸರೇ ‘ಲವ್‌ಬರ್ಡ್’ (Lovebird)!

ಇದನ್ನೂ ಓದಿ:ಪಾಂಡ್ಯ ಹೊಡೆತಕ್ಕೆ ಮೈದಾನದಲ್ಲೇ ಕುಸಿದುಬಿದ್ದ ಟೀಂ ಇಂಡಿಯಾ ಸ್ಟಾರ್​ ಬೌಲರ್​..!

ಯಾರು ತಯಾರಿಸಿದ್ದು ಈ ಕಾರು?

ಕೇರಳ ಮೂಲದ ‘ಎಡ್ಡಿ ಕರೆಂಟ್ ಕಂಟ್ರೋಲ್ಸ್’ (Eddy Current Controls) ಎಂಬ ಕಂಪನಿಯು ಜಪಾನ್‌ನ ‘ಯಸ್ಕಾವಾ ಎಲೆಕ್ಟ್ರಿಕ್ ಮ್ಯಾನುಫ್ಯಾಕ್ಚರಿಂಗ್’ (Yaskawa Electric Mfg. Co) ಸಹಭಾಗಿತ್ವದಲ್ಲಿ ಈ ಕಾರನ್ನು ತಯಾರಿಸಿತ್ತು. 1993ರಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಈ ‘ಲವ್‌ಬರ್ಡ್’ ಕಾರನ್ನು ಮೊದಲ ಬಾರಿಗೆ ಪ್ರದರ್ಶಿಸಲಾಗಿತ್ತು. ಇದು ಭಾರತದ ಆಟೋಮೊಬೈಲ್ ಇತಿಹಾಸದಲ್ಲೇ ಒಂದು ಮೈಲಿಗಲ್ಲು.

Advertisment

ಏನಿತ್ತು ಇದರ ವಿಶೇಷತೆ?

ವಿನ್ಯಾಸ: ಇದೊಂದು 2-ಸೀಟರ್ (ಇಬ್ಬರು ಕೂರುವ) ಕಾರಾಗಿತ್ತು. ನೋಡಲು ಆಟಿಕೆ ಕಾರಿನಂತೆ ಕ್ಯೂಟ್ ಆಗಿತ್ತು.
ಬ್ಯಾಟರಿ ಮತ್ತು ರೇಂಜ್: ಇದರಲ್ಲಿ ರೀಚಾರ್ಜ್ ಮಾಡಬಹುದಾದ ಪೋರ್ಟಬಲ್ ಲೆಡ್-ಆಸಿಡ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿತ್ತು. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 60 ಕಿಲೋಮೀಟರ್ ಮೈಲೇಜ್ (Range) ನೀಡುತ್ತಿತ್ತು.

ಇದನ್ನೂ ಓದಿ: 5 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ! ‘ಲೋಕಾ’ ಬಲೆಗೆ ಬಿದ್ದಿದ್ದು ಹೇಗೆ?

ತಂತ್ರಜ್ಞಾನ: ಆ ಕಾಲದಲ್ಲೇ ಈ ಕಾರಿನಲ್ಲಿ ಎಲೆಕ್ಟ್ರಾನಿಕ್ ಚಾಪರ್ ಕಂಟ್ರೋಲ್ (Electronic Chopper Control) ಬಳಸಲಾಗಿತ್ತು. ಇದು ಸ್ಮೂತ್ ಡ್ರೈವಿಂಗ್‌ಗೆ ಸಹಕಾರಿಯಾಗಿತ್ತು. 4-ಸ್ಪೀಡ್ ಟ್ರಾನ್ಸ್‌ಮಿಷನ್ ಮತ್ತು ರಿವರ್ಸ್ ಗೇರ್ ಕೂಡ ಇತ್ತು.
ಸಾಮರ್ಥ್ಯ: ಇದು 15 ಡಿಗ್ರಿಯಷ್ಟು ಎತ್ತರದ ರಸ್ತೆಗಳನ್ನು ಏರುವ ಸಾಮರ್ಥ್ಯ ಹೊಂದಿತ್ತು ಎಂದು ವರದಿಗಳು ಹೇಳುತ್ತವೆ.

Advertisment

ಏನಾಯ್ತು ಈ ಕಾರಿಗೆ?

ದುರಾದೃಷ್ಟವಶಾತ್, ‘ಲವ್‌ಬರ್ಡ್’ ಹೆಚ್ಚು ದಿನ ಮಾರುಕಟ್ಟೆಯಲ್ಲಿ ಓಡಾಡಲಿಲ್ಲ. ಆ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನರಲ್ಲಿ ಅರಿವಿರಲಿಲ್ಲ. ಜೊತೆಗೆ, ಸರ್ಕಾರವು ಆರಂಭದಲ್ಲಿ ನೀಡಿದ್ದ ಸಬ್ಸಿಡಿಯನ್ನು ಹಿಂಪಡೆಯಿತು. ಇದರಿಂದ ಕಾರಿನ ಬೆಲೆ ಹೆಚ್ಚಾಯಿತು. ಕಡಿಮೆ ಮಾರಾಟ (Low Sales) ಮತ್ತು ಮೂಲಸೌಕರ್ಯದ ಕೊರತೆಯಿಂದಾಗಿ ಕಂಪನಿ ಇದರ ಉತ್ಪಾದನೆಯನ್ನು ನಿಲ್ಲಿಸಬೇಕಾಯಿತು. ಇಂದು ನಾವು ನೋಡುತ್ತಿರುವ ಎಲೆಕ್ಟ್ರಿಕ್ ವಾಹನಗಳ ಯುಗಕ್ಕೆ ಅಂದು 1993ರಲ್ಲೇ ‘ಲವ್‌ಬರ್ಡ್’ ನಾಂದಿ ಹಾಡಿತ್ತು ಎಂಬುದನ್ನು ಮರೆಯುವಂತಿಲ್ಲ.

ಇದನ್ನೂ ಓದಿ:ಡಿಜಿಟಲ್, ಡೆಲಿವರಿ ಕ್ರಾಂತಿಗೆ ‘ಪುಟ್ಟ EV’ಗಳೇ ರಿಯಲ್ ಗೇಮ್ ಚೇಂಜರ್​! EV ಹೇಗೆ ದೇಶದ ಆರ್ಥಿಕತೆಯ ರೂಪುರೇಷೆ ಬದಲಿಸ್ತಿವೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

lovebird car EV VEHICLES BENEFITS
Advertisment
Advertisment
Advertisment