/newsfirstlive-kannada/media/media_files/2025/09/06/rr_bulding-2025-09-06-11-13-26.jpg)
ಜೈಪುರ: ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದು ತಂದೆ, ಮಗಳು ಸ್ಥಳದಲ್ಲೇ ಜೀವ ಬಿಟ್ಟಿದ್ದು ಇನ್ನು ಕೆಲ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜಸ್ತಾನದ ಜೈಪುರ ನಗರದ ಸುಭಾಷ್ ಚೌಕ್ ಪ್ರದೇಶದ ರಾಮಕುಮಾರ್ ಧವಾಯಿಯ ಬೀದಿಯಲ್ಲಿ ನಡೆದಿದೆ.
ರಾಮಕುಮಾರ್ ಧವಾಯಿಯ ರಸ್ತೆಯ ನಿವಾಸಿ ಪ್ರಭಾತ್ (33) ಇವರ ಮಗಳು ಪಿಹು (6) ಕೊನೆಯುಸಿರೆಳೆದಿದ್ದಾರೆ. ಈ ಘಟನೆಯಲ್ಲಿ ಪ್ರಭಾತ್ ಹೆಂಡತಿ ಸುನಿತಾ ಹಾಗೂ ಇತರೆ 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: ಆಸ್ಪತ್ರೆ ಹೆಸರಲ್ಲಿ ಫೋನ್ ಬಂದ್ರೆ ಹುಷಾರ್​.. ಸರ್ಕಾರದಿಂದ ಹಣ ಮಂಜೂರು ಎಂದು ವಂಚನೆ
/filters:format(webp)/newsfirstlive-kannada/media/media_files/2025/09/06/rr_bulding_1-2025-09-06-11-14-13.jpg)
ಬಾಡಿಗೆ ಮನೆಗಳು ಇರುವ ಕಟ್ಟಡವಾಗಿದ್ದು ಇದರಲ್ಲಿ ಸುಮಾರು 20 ಜನರು ವಾಸಿಸುತ್ತಿದ್ದರು. ರಾತ್ರಿ 1:15ರ ಸುಮಾರಿಗೆ ಏಕಾಏಕಿ 4 ಅಂತಸ್ತಿನ ಕಟ್ಟಡ ಕುಸಿದಿದೆ. ಹೀಗಾಗಿ ಗಾಡವಾದ ನಿದ್ರೆಯಲ್ಲಿದ್ದವರು ದೊಡ್ಡ ಆಘಾತವನ್ನು ಎದುರಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಎಸ್​​ಡಿಆರ್​ಎಫ್​ ತಂಡದವರು ರಕ್ಷಣಾ ಕಾರ್ಯದಲ್ಲಿ ತೊಡಗಿ ಜನರನ್ನು ರಕ್ಷಣೆ ಮಾಡಿದ್ದಾರೆ. ಇದರಲ್ಲಿ ಇಬ್ಬರು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.
7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದವರು ಸುರಕ್ಷಿತವಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದ ಕಟ್ಟಡವು ಕುಸಿದು ಬಿದ್ದಿದೆ. ಹಳೆಯ ಕಟ್ಟಡವಾಗಿದ್ದರಿಂದ ಮಳೆಗೆ ತಡೆಯಲಾಗಿದೆ ಕುಸಿದು ಬಿದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us