/newsfirstlive-kannada/media/media_files/2025/09/06/rcr_rims-2025-09-06-10-36-30.jpg)
ರಾಯಚೂರು: ರಿಮ್ಸ್ ಆಸ್ಪತ್ರೆ ಹೆಸರಲ್ಲಿ ಸೈಬರ್ ವಂಚನೆ ನಡೆದಿದ್ದು ರೋಗಿಗಳನ್ನೇ ಟಾರ್ಗೆಟ್ ಮಾಡಿರುವ ಖದೀಮರು ಹಣ ಲಪಟಾಯಿಸುತ್ತಿದ್ದಾರೆ. ಸರ್ಕಾರದಿಂದ ಹಣ ಮಂಜೂರಾಗಿದೆ ಎಂದು ನಂಬಿಸಿ ವಂಚಕರು ಮೋಸ ಮಾಡುತ್ತಿದ್ದಾರೆ.
ಜಿಲ್ಲೆಯ ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ಅಥವಾ ಇತರೆ ಯಾವುದೇ ಚಿಕಿತ್ಸೆ ತೆಗೆದುಕೊಂಡಿದ್ದರೇ ಅವರನ್ನು ಕಿರಾತಕರು ಟಾರ್ಗೆಟ್ ಮಾಡುತ್ತಿದ್ದಾರೆ. ಒಂದು ಎರಡು ತಿಂಗಳಿನಿಂದ ಅಲ್ಲ, ಕಳೆದ 1 ವರ್ಷದಿಂದ ರೋಗಿಗಳನ್ನು ವಂಚನೆಗೆ ಒಳಪಡಿಸಲಾಗುತ್ತಿದೆ. ಆಸ್ಪತ್ರೆ ಸಿಬ್ಬಂದಿಯಂತೆ ವರ್ತಿಸಿ ಪುಸಲಾಯಿಸಿ ಈವರೆಗೆ 60ಕ್ಕೂ ಹೆಚ್ಚು ಜನರಿಂದ ಹಣ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಸೇನೆಗೆ ಸೇರಬೇಕು ಎನ್ನುವರಿಗೆ ಸುವರ್ಣಾವಕಾಶ.. ಸರ್ಕಾರದಿಂದ ಉಚಿತ ತರಬೇತಿ, ಅಪ್ಲೇ ಮಾಡಿ
ಸ್ಕ್ಯಾನಿಂಗ್, ಔಷಧ ಹಾಗೂ ಎಕ್ಸ್‌ರೇ ವಿಭಾಗಗಳಲ್ಲಿ ರೋಗಿಗಳ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ ಪಡೆದು ವಂಚಿಸುತ್ತಿರುವ ಅನುಮಾನ ಇದೆ. ಚಿಕಿತ್ಸೆ ಪಡೆದ ಕೆಲ ದಿನಗಳ ನಂತರ ಕಿರಾತಕ ವಂಚಕರು, ರೋಗಿಗಳಿಗೆ ಕರೆ ಮಾಡಿ ನಾವು ರಿಮ್ಸ್ ಆಸ್ಪತ್ರೆಯಿಂದ ಕರೆ ಮಾಡುತ್ತಿದ್ದೇವೆ. ಸರ್ಕಾರದಿಂದ ನಿಮಗೆ 25,750 ರೂಪಾಯಿ ಮಂಜೂರಾಗಿದೆ. ಈ ಹಣ ಪಡೆಯಲು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ವಾಟ್ಸಾಪ್ ಮಾಡಿ ಎನ್ನುತ್ತಾರೆ. ಜೊತೆಗೆ 2,200 ರೂಪಾಯಿ ನೋಂದಣಿ ಶುಲ್ಕ ಪಾವತಿಸಿ ಎಂದು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
ರೋಗಿಗಳಿಗೆ ಈ ರೀತಿ ಮಾಡಿ ಹಣ ವಂಚನೆ ಮಾಡಿದ ಬಳಿಕ ವಾಪಸ್ ಫೋನ್ ಮಾಡಿದರೆ ಮೊಬೈಲ್ ಸ್ವಿಚ್ಡ್ ಆಫ್ ಆಗಿರುತ್ತದೆ. ಈವರೆಗೂ 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇದೇ ಮಾದರಿಯಾಗಿ 1.20 ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ. ಇಂತಹ ಪ್ರಕರಣಗಳು ನಿರಂತರ ಹೆಚ್ಚಾಗುತ್ತಿರುವ ಕಾರಣ ರಾಯಚೂರಿನ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ