/newsfirstlive-kannada/media/media_files/2025/08/15/jammu-kashmir1-2025-08-15-20-50-21.jpg)
ಕಣಿವೆನಾಡು ಜಮ್ಮುಕಾಶ್ಮೀರದಲ್ಲಿ ಮೇಘಸ್ಫೋಟ ಹಾಗೂ ರಣಪ್ರವಾಹಕ್ಕೆ ಸಿಲುಕಿ 60 ಮಂದಿ ಜೀವಬಿಟ್ಟಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯ ಸಾಗಿದೆ. ಬೆಟ್ಟದ ಮೇಲಿಂದ ನುಗ್ಗಿದ ಬಂದ ರಕ್ಕಸ ಪ್ರವಾಹ ಇಡೀ ಪ್ರದೇಶವನ್ನು ನೆಲಸಮ ಮಾಡಿದ್ದು ಅವಶೇಷಗಳನ್ನು ರಾಶಿಹಾಕಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೇ ಭಾರೀ ಸ್ಫೋಟ; ಜೀವ ಬಿಟ್ಟ ಬಾಲಕ, 9 ಮಂದಿ ಗಂಭೀರ
ಜಮ್ಮುಕಾಶ್ಮೀರದ ಕಿಶ್ತ್ವಾರ್ನ ಚಿಶೋತಿ ಗ್ರಾಮದಲ್ಲಿ ಭಾರೀ ಸಾವಿನ ಮೇಘಸ್ಫೋಟ ಸಂಭವಿಸಿದೆ. ದುರಂತದಲ್ಲಿ 60 ಮಂದಿ ನಿಧನರಾಗಿದ್ದಾರೆ. 120ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಕಿಶ್ತ್ವಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ 200ಕ್ಕೂ ಹೆಚ್ಚು ಜನ ನಾಪತ್ತೆಯಾಗಿರೋ ಮಾಹಿತಿ ಲಭ್ಯವಾಗಿದೆ. ಮೃತರ ಪೈಕಿ ಹೆಚ್ಚು ಜನರು ಮಚೇಲ್ ಮಾತಾ ದರ್ಶನಕ್ಕೆ ಬಂದವರು ಅಂತ ಹೇಳಲಾಗ್ತಿದೆ.
Shocking vdo of the moment cloudburst led to flash floods in Kishtwar of Jammu & Kashmir earlier today. More than 60 de@d,over 100+ r missing. Rescue Ops going on.
— R.T.Agyeya (@Vigour4bjp) August 14, 2025
Pray for the sufferers🙏
Russian President Putin-Trump r showing no sympathy. pic.twitter.com/UAGProOcAG
ಮೇಘಸ್ಫೋಟದಿಂದ ನುಗ್ಗಿ ಬರುತ್ತಿರುವ ಪ್ರವಾಹ ಕಂಡು ಜನ ಭಯಭೀತರಾಗಿ ಓಡಿದ್ದಾರೆ. ರಣಪ್ರವಾಹದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು, ದಿಢೀರ್ ಪ್ರವಾಹದಿಂದ ನೂರಾರು ಮನೆಗಳಿಗೆ ಹಾನಿಯಾಗಿದೆ. ಸರ್ಕಾರಿ ಕಟ್ಟಡಗಳು ಹಾಗೂ ತಾತ್ಕಾಲಿಕವಾಗಿ ನಿರ್ಮಿಸಿದ್ದ ಟೆಂಟ್ಗಳು ಅಪ್ಪಚ್ಚಿಯಾಗಿವೆ. ಹಲವು ವಾಹನಗಳು ಕೆಸರಿನಲ್ಲಿ ಹೂತು ಹೋಗಿವೆ.
ಈಗಾಗಲೇ 60 ಜನರಲ್ಲಿ 46 ಶವಗಳನ್ನು ಹೊರತೆಗೆಯಲಾಗಿದೆ. ಇವರಲ್ಲಿ 21 ಜನರ ಗುರುತು ಪತ್ತೆಯಾಗಿದೆ. ಇದುವರೆಗೆ 167 ಮಂದಿಯನ್ನು ರಕ್ಷಿಸಲಾಗಿದೆ. ಭಾರತೀಯ ಸೇನೆ, ಎನ್‌ಡಿಆರ್‌ಎಫ್, ಎಸ್ಡಿಆರ್ಎಫ್ ರಾಷ್ಟ್ರೀಯ ರೈಫಲ್ಸ್ನಿಂದ ರಕ್ಷಣಾ ಕಾರ್ಯಾಚರಣೆ ನಡೀತಿದ್ದು ಪ್ರತಿಕೂಲ ಹವಾಮಾನ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಈ ಮಧ್ಯೆ ಜಮ್ಮುಕಾಶ್ಮೀರದ ಆಡಳಿತದೊಂದಿಗೆ ಮಾತನಾಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಸಾಧ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಪ್ರವಾಹ ಸಂತ್ರಸ್ತರಾಗಿ ಸೇನೆ ಸಹಾಯವಾಣಿ ತೆರೆದಿದೆ. ದುರಂತ ಸಂಭವಿಸುವ ವೇಳೆ 1200ಕ್ಕೂ ಮಂದಿ ಯಾತ್ರೆಗೆ ಸಾಗ್ತಿದ್ದರು ಎನ್ನಲಾಗಿದ್ದು ನಾಪತ್ತೆಯಾಗಿರುವವರಿಗೆ ಹುಡುಕಾಟ ನಡೆಸಲಾಗ್ತಿದೆ. ಸಾವಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ, ಉತ್ತರಾಖಂಡ್ ಬೆನ್ನಲ್ಲೇ ಜಮ್ಮುಕಾಶ್ಮೀರದಲ್ಲೂ ಮೇಘಸ್ಫೋಟ ಅಪಾರ ಸಾವು-ನೋವು ತಂದಿದ್ದು ದುರಂತವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ