‘ನಾನು ಅದೇ ಬಸ್​ನಲ್ಲಿ ದೀಪಕ್ ಜೊತೆ ಪ್ರಯಾಣಿಸಿದ್ದೆ..’ ಹೃದಯ ಉಕ್ಕಿ ಬರೋ ಅನುಭವ ಹೇಳಿದ ಮತ್ತೊಬ್ಬ ಅಪರಿಚಿತ ಯುವತಿ..!

ಅಂದು ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಹುಡುಗಿ ಮೃತ ದೀಪಕ್ ಬಗ್ಗೆ ಆಡಿರುವ ಮಾತುಗಳು ಹೃದಯಸ್ಪರ್ಷಿಯಾಗಿವೆ. ಆದರೆ ಇನ್ನೊಬ್ಬ ಹುಡುಗಿ ಮಾಡಿದ ಆರೋಪ ನಿಜಕ್ಕೂ ಹೃದಯವಿದ್ರಾವಕ ಓರ್ವ ಮಹಿಳೆ ಮಾಡಿದ ಆರೋಪ ಬೆನ್ನಲ್ಲೇ ಸೋಶಿಯಲ್ ಮೀಡಿಯಾ ಅವರನ್ನ ಲೈಂಗಿಕ ದೌರ್ಜನ್ಯಗಾರ ಎಂಬ ಹಣಪಟ್ಟಿ ಕಟ್ಟಿ ಸಾಯಿಸಿದೆ

author-image
Ganesh Kerekuli
kerala deepak (3)
Advertisment

ಕೇರಳದಲ್ಲಿ ಇತ್ತೀಚೆಗೆ ನಡೆದ ಪ್ರಕರಣವೊಂದು ದೇಶದಾದ್ಯಂತ ಸಂಚಲನ ಮೂಡಿಸಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಿಂದ ಆಗಿರುವ ಅವಮಾನ ಸಹಿಸಲಾಗದೇ ದೀಪಕ್ (42) ಎಂಬ ವ್ಯಕ್ತಿ ದುಡುಕಿನ ನಿರ್ಧಾರ ತೆಗೆದುಕೊಂಡು ಬದುಕಿಗೆ ವಿದಾಯ ಹೇಳಿದ್ದಾರೆ.   

ಏನಿದು ಪ್ರಕರಣ..?

ಇವರ ದುರಂತ ಅಂತ್ಯದ ಬಗ್ಗೆ ಪರ, ವಿರೋಧದ ಚರ್ಚೆಗಳು ಜೋರಾಗಿವೆ. ಯಾವುದು ಸರಿ ಯಾವುದು ತಪ್ಪು ಅನ್ನೋದು ತನಿಖೆಯಿಂದ ತಿಳಿದುಬರಬೇಕಿದೆ. ಆದರೆ ಪ್ರಕರಣ ಏನು ಅಂತಾ ನೋಡೋದಾದ್ರೆ.. ಜವಳಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್, ಜೂನ್ 16 ರಂದು ಕೆಲಸ ನಿಮಿತ್ತ ಸಾರಿಗೆ ಬಸ್‌ನಲ್ಲಿ ಕಣ್ಣೂರಿಗೆ ಪ್ರಯಾಣಿಸಿದ್ದರು. ಅದೇ ಬಸ್‌ನಲ್ಲಿದ್ದ ಸಿಮ್ಜಿತಾ ಮುಸ್ತಫಾ ಎಂಬ ಮಹಿಳೆ 26 ಸೆಕೆಂಡ್​ಗಳ ರೀಲ್ಸ್ ಮಾಡಿದ್ದಳು. ತನ್ನ ಪಕ್ಕದಲ್ಲಿ ನಿಂತಿದ್ದ ದೀಪಕ್ ಬಸ್ಸಿನಲ್ಲಿ ಜನಸಂದಣಿಯ ಲಾಭ ಪಡೆದು ಅನುಚಿತವಾಗಿ ನನ್ನನ್ನು ಸ್ಪರ್ಷಿಸುತ್ತಿದ್ದಾನೆ ಎಂದು ಆ ವಿಡಿಯೋದಲ್ಲಿ ಆರೋಪಿಸಿದ್ದಳು. ಈ ವಿಡಿಯೋ ವೈರಲ್ ಬೆನ್ನಲ್ಲೇ ಅವಮಾನಕ್ಕೆ ಒಳಗಾದ ದೀಪಕ್, ಜನವರಿ 18 ರಂದು ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. 

ಈಗ ಏನಾಗಿದೆ..? 

ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ. ದೀಪಕ್ ನಿಧನದ ನಂತರ ವಿಡಿಯೋ ಮಾಡಿದ ಮಹಿಳೆಯ ವಿರುದ್ಧ ಕೇಸ್ ದಾಖಲಾಗಿದೆ. ಮಹಿಳೆ ಬೇಸಿಕಲಿ, ಸೋಶಿಯಲ್ ಇಂಪ್ಲ್ಯೂನ್ಸರ್. ರೀಲ್ಸ್ ಹಾಗೂ ಲೈಕ್ಸ್ ಪಡೆಯುವ ಉದ್ದೇಶದಿಂದ ಹಾಗೆ ಮಾಡಿ, ಒಂದು ಜೀವ ಬಲಿ ಪಡೆದಿದ್ದಾರೆ ಎಂಬ ಆರೋಪ ಇದೆ. ಮತ್ತೊಂದು ಕಡೆ ಜನಸಂದಣಿ ನಡುವೆ ದೀಪಕ್ ನಿಜಕ್ಕೂ ಅವರನ್ನು ಸ್ಪರ್ಷಿಸುತ್ತಿದ್ದರಾ? ಎಂಬ ಪ್ರಶ್ನೆ ಇದೆ. ಮೇಲ್ನೋಟಕ್ಕೆ ದೀಪಕ್ ಉದ್ದೇಶಪೂರ್ವಕವಾಗಿ ಹಾಗೆ ಮಾಡಿದಂತೆ ಕಾಣುತ್ತಿಲ್ಲವಾದರೂ ಚರ್ಚೆ ಆಗ್ತಿರೋದಂತೂ ಸತ್ಯ. 

ಇದನ್ನೂ ಓದಿ: ಬ್ಯಾಡ್ಮಿಂಟನ್ ಕ್ರೀಡೆಯಿಂದ ಅಧಿಕೃತ ನಿವೃತ್ತಿ ಘೋಷಿಸಿದ ಸೈನಾ ನೆಹ್ವಾಲ್‌: ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ?

Kerala deepak

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮೃತ ದೀಪಕ್ ಕುರಿತ ಸೋಶಿಯಲ್ ಮೀಡಿಯಾ ಪೋಸ್ಟ್ ಒಂದು ಭಾರೀ ವೈರಲ್ ಆಗಿದೆ. ಕಳೆದ ಒಂದು ವರ್ಷದ ಹಿಂದೆ ದೀಪಕ್ ಜೊತೆ ಪ್ರಯಾಣ ಮಾಡಿದ ಅಪರಿಚಿತ ಯುವತಿಯೊಬ್ಬಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ದೀಪಕ್ ಮೃತಪಟ್ಟ ವಿಚಾರ ತಿಳಿದು ಹೇಳಿದ್ದಾರೆ. ಅದನ್ನು ಖ್ಯಾತ ಮಲಿಯಾಳಂ ನಟ ಹರೀಶ್ ಕಣರನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Hareesh karan

ಆ ಪೋಸ್ಟ್​ನಲ್ಲಿ ಏನಿದೆ..?

ಸುಮಾರು ಒಂದು ವರ್ಷದ ಹಿಂದೆ.. ದೀಪಕ್ ಪ್ರಯಾಣಿಸ್ತಿದ್ದ ಬಸ್ಸಿನಲ್ಲಿ ನಾನೂ ಇದ್ದೆ. ಅಂದು ನನಗೆ ಪಿರಿಯಡ್ಸ್ ಆಗಿತ್ತು. ನಾನು ತುಂಬಾ ಬಳಲಿದ್ದೆ. ನನ್ನ ಮುಖ ಕೆಂಪಾಗಿ, ಸಪ್ಪೆಯಾಗಿ, ಬಾಡಿತ್ತು. ಇದು ಪಕ್ಕದಲ್ಲಿ ಕೂತಿದ್ದ ಅಪರಿಚಿತ ದೀಪಕ್​​ ಗಮನಕ್ಕೆ ಬಂದಿದೆ. ನನ್ನನ್ನು ಅವರು ಪ್ರೀತಿಯಿಂದ ದಿಟ್ಟಿಸಿದರು.

ಆತ ಅಲ್ಲಿಗೆ ಸುಮ್ಮನೆ ಕೂರಲಿಲ್ಲ. ಏನಾಯ್ತು ಮಗಳೇ ಎಂದು ವಿಚಾರಿಸಿದ. ನನಗೆ ಅದು ಕೇವಲ ಪ್ರಶ್ನೆ ಆಗಿರಲಿಲ್ಲ. ಸ್ವಂತ ತಂದೆಯೋ? ಅಣ್ಣನೋ, ತಮ್ಮನೋ ಕೇಳಿದಾಗೆ ಆಯಿತು. ಭಾವ ಉಕ್ಕಿ ಬಂದಿತ್ತು. ಅವರ ಪ್ರಶ್ನೆಗೆ ನಾನೂ ಏನೂ ಇಲ್ಲ ಅಂದೆ. ಮುಂದುವರಿದು ಮಾತನ್ನಾಡಿಸಿದ ಅವರು, ‘ನಿಮ್ಮ ಅಮ್ಮನಿಗೆ ಕರೆ ಮಾಡಿ ಮಾತನಾಡಲೇ’ ಎಂದರು. ಅದಕ್ಕೆ ನಾನು ‘ಬೇಡ’ ಎಂದೆ. 

ನಾನು ನೋವಿನಿಂದ ಬಳಲುತ್ತಿರೋದನ್ನು ನೋಡಿದ ಅವರು, ತಮ್ಮ ಬಳಿಯಿದ್ದ ಪ್ಯಾರಸಿಟಮಾಲ್ ಮಾತ್ರೆ ನೀಡಿದ್ದರು. ಮಾತ್ರೆ ನುಂಗಿದ ಬಳಕ ನಾನು ಚೇತರಿಸಿಕೊಳ್ಳಲು ಪ್ರಯತ್ನಿಸಿದೆ. ಆಗ ಅವರು, ನನಗೆ ನೋವು ಮರೆಸಲು ಪರೀಕ್ಷೆ ವಿಚಾರ ತೆಗೆದು ಮಾತನ್ನಾಡಿಸಿದರು. ನನ್ನ ಸ್ಟಡಿ ಬಗ್ಗೆ ಮಾತನ್ನಾಡಿದರು. ನಾನು ಹೇಳಿದ್ದೆ, ಪರೀಕ್ಷೆ ಅಂದರೆ ಭಯ ಅಂತಾ. ಅದಕ್ಕೆ ಅವರು ಹೇಳಿದ್ದರು, ಹಾಗೇನೂ ಇಲ್ಲ. ನನ್ನ ಕಾಲದಲ್ಲಿ ಪರೀಕ್ಷೆಗೆ ತುಂಬಾ ಕಷ್ಟ ಪಡ್ತಿದ್ದೆ ಎಂದು. ಅದಕ್ಕೆ ಅವರು ಹೇಳಿದ್ದರು, ಏನೆಂದರೆ ಹೆದರುವಂತಹ ಅಗತ್ಯ ಏನೂ ಇಲ್ಲ. ಜೀವನ ಯಾವಾಗಲೂ ಹಾಗೆಯೇ ಇರುತ್ತದೆ. ಹೆದರ ಬಾರದು ಎಂದಿದ್ದರು. ನನ್ನ ಪ್ರಯಾಣದುದ್ದಕ್ಕೂ ಗೌರವ ಮತ್ತು ಭದ್ರತೆಯಿಂದ ಅವರು ನಡೆಸಿಕೊಂಡರು. ಅವರು ನನಗೆ ಅಣ್ಣನಂತೆ ಕಾಣಿಸಿದ್ದರು ಎಂದು ಪೋಸ್ಟ್ ಮಾಡಿದ್ದಾರೆ. 

Kerala deepak (2)

ಅಂದು ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಹುಡುಗಿ ಮೃತ ದೀಪಕ್ ಬಗ್ಗೆ ಆಡಿರುವ ಮಾತುಗಳು ಇವು. ಆದರೆ ಇನ್ನೊಬ್ಬ ಹುಡುಗಿ ಮಾಡಿದ ಆರೋಪ ನಿಜಕ್ಕೂ ಹೃದಯವಿದ್ರಾವಕವಾಗಿದೆ. ಓರ್ವ ಮಹಿಳೆ ಮಾಡಿದ ಆರೋಪ ಬೆನ್ನಲ್ಲೇ ಸೋಶಿಯಲ್ ಮೀಡಿಯಾ ಅವರನ್ನ ‘ಲೈಂಗಿಕ ದೌರ್ಜನ್ಯಗಾರ’ ಎಂಬ ಹಣಪಟ್ಟಿ ಕಟ್ಟಿದೆ. ದೀಪಕ್ ನಿಜವಾಗಿಯೂ ಯಾರೆಂದು ಒಂದು ದಿನ ಮಾತ್ರ ಆತನ ತಿಳಿದಿದ್ದ  ಇನ್ನೊಂದು ಹುಡುಗಿಯ ಮಾತುಗಳು ಬೇರೊಂದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. 

ಇದನ್ನೂ ಓದಿ: ಡಿಕೆ ಪಟ್ಟದಾಟಕ್ಕೆ ಡೆಲ್ಲಿಯಲ್ಲಿ ಕೂಡಿಬಾರದ ಕ್ಲೈಮೇಟ್​​​​! : ಮುಂದಿನ ತಿಂಗಳಿಗೆ ಮುಂದೂಡಿಕೆ ಆಯ್ತಾ ಕ್ಲೈಮ್ಯಾಕ್ಸ್​​?

 ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Kerala Deepak
Advertisment