/newsfirstlive-kannada/media/media_files/2025/10/25/bus_fire_1-1-2025-10-25-07-24-04.jpg)
ಹೈದ್ರಾಬಾದ್​​ನಿಂದ ಬೆಂಗಳೂರಿಗೆ ಹೊರಟಿದ್ದ ಬಸ್​​​​ನಲ್ಲಿದ್ದ ಪ್ರಯಾಣಿಕರ ದಾರಿಗಳು ಬೇರೆ ಬೇರೆಯಾಗಿದ್ದರೂ ತಲುಪಬೇಕಾದ ಸ್ಥಳ ಒಂದೇ ಆಗಿತ್ತು. ಸಾವಿನ ಸವಾರಿ ಮಾಡಿದ ಪ್ರತಿಯೊಬ್ಬರ ಕಥೆಯು ವಿಭಿನ್ನವಾಗಿದೆ. ವಿವಿಧ ಕಾರಣಗಳಿಗೆ ಬಸ್ ಹತ್ತಿದವರ ಬದುಕು ದುರಂತದಲ್ಲಿ ಅಂತ್ಯ ಕಂಡಿದೆ.
ಕರಾಳ ಶುಕ್ರವಾರ, ದೀಪಾವಳಿ ಹಬ್ಬದ ಸಂಭ್ರಮ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗ್ತಿದ್ದಾಗ ಹೆದ್ದಾರಿಯಲ್ಲಿ ಜವರಾಯ ಕಾಡಿದ್ದ. ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಹೊತ್ತಿದ ಕಿಡಿ ಇಡೀ ಬಸ್ಸನ್ನೇ ಸುಟ್ಟು ಭಸ್ಮ ಮಾಡಿತ್ತು. ಸಾವಿನ ಸವಾರಿಯ ಹರಿವಿಲ್ಲದೇ ಗಾಢನಿದ್ರೆಯಲ್ಲಿದ್ದವರು ಸೇರಿದ್ದು ಯಮನ ಊರಿಗೆ. ದುರಂತದ ಬಳಿಕ ತೆರೆದುಕೊಂಡಿರೋ ಒಂದೊಂದು ಕಥೆಗಳು ಕರುಣಾಜನಕ.
/filters:format(webp)/newsfirstlive-kannada/media/media_files/2025/10/25/bus_fire-1-2025-10-25-07-24-15.jpg)
ಬಸ್ ಧಗಧಗಿಸುವಾಗ ಆಪತ್ಬಾಂಧವನಾಗಿ ಬಂದ!
ಆಂಧ್ರದ ಕರ್ನೂಲು ಬಳಿ ಸಾವಿನ ದಳ್ಳುರಿಗೆ 22 ಮಂದಿ ಆಹುತಿಯಾಗಿದ್ದಾರೆ. ಬಸ್​​ನಲ್ಲಿದ್ದ 44 ಜನರ ಪೈಕಿ 12 ಮಂದಿ ಕೆಳಗೆ ಹಾರಿ ಬದುಕುಳಿದ್ದಾರೆ. 10 ಮಂದಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಡೆಯಬಾರದ ದುರಂತ ನಡೆದೋಗಿದೆ. ಆದ್ರೆ, ದುರಂತದಲ್ಲಿ ಪ್ರಾಣ ಉಳಿದ್ರೆ ಸಾಕು ಅಂತ ಕೆಲವರು ಪರದಾಡ್ತಿದ್ರೆ ಅದೇ ವೇಳೆ ದೇವದೂತನಂತೆ ಬಂದ ಒಬ್ಬ ವ್ಯಕ್ತಿ 6 ಜನರ ಪ್ರಾಣ ಉಳಿಸಿದ್ದಾನೆ.
ಪಬ್ಲಿಕ್ ಹೀರೋ!
ಆರು ಮಂದಿ ಪ್ರಯಾಣಿಕರ ಪ್ರಾಣ ಉಳಿಸಿದ ನವೀನ್
ಬಸ್ ಧಗಧಗಿಸುವಾಗ ಕಾರಿನಲ್ಲಿ ಹೋಗ್ತಿದ್ದ ನವೀನ್
ಹಿಂದೂಪುರದಿಂದ ನಂದ್ಯಾಲ್​ಗೆ ಹೋಗುತ್ತಿದ್ದ ನವೀನ್
ಬಸ್​​ನ ಗ್ಲಾಸ್ ಒಡೆದು ಹೊರ ಬರುತ್ತಿದ್ದ ಪ್ರಯಾಣಿಕರು
ಕೂಡಲೇ ಗಾಯಾಳುಗಳನ್ನು ಕಾರಲ್ಲಿ ಆಸ್ಪತ್ರೆಗೆ ಕರೆದೊಯ್ದ
ಮತ್ತೊಬ್ಬ ಪ್ರಯಾಣಿಕ ಹೈಮಾರೆಡ್ಡಿಯಿಂದಲೂ ಸಹಾಯ
ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ರವಾನೆ
ಬಸ್​​ ಮಿಸ್​ ಆದ್ರೂ ಬೈಕ್​​ನಲ್ಲಿ ಚೇಸ್​ ಮಾಡಿ ಬಸ್ ಹತ್ತಿದ!
ನಸೀಬು ಚೆನ್ನಾಗಿದ್ರೆ ಪ್ರಪಾತಕ್ಕೆ ಬಿದ್ರೂ ಬದುಕಿ ಉಳೀತಾರಂತೆ. ಹಾಗೆ 23 ವರ್ಷದ ಬಿ.ಟೆಕ್ ವಿದ್ಯಾರ್ಥಿ ಜಯಸೂರ್ಯ ಎಂಬಾತ ಸಾವಿನ ದವಡೆಯಿಂದ ಪಾರಾಗಿದ್ದು ನಿಜಕ್ಕೂ ರೋಚಕ. ಕೆಲಸಕ್ಕಾಗಿ ಬೆಂಗಳೂರಿನಲ್ಲಿ ಇಂಟರ್​ವ್ಯೂಗೆ ಹೊರಟಿದ್ದ ಆತ ಇದೇ ಬಸ್​​ ಹತ್ತಿದ್ದ.
ಸಾವು ಗೆದ್ದ ಜಯಸೂರ್ಯ!
- ಬೆಂಗಳೂರಲ್ಲಿ ಇಂಟರ್​ವ್ಯೂಗೆ ಬರುತ್ತಿದ್ದ ಜಯಸೂರ್ಯ
- ಬುಕ್ ಮಾಡಿದ್ದ ಕಾವೇರಿ ಟ್ರಾವೆಲ್ಸ್ ಬಸ್ ಮಿಸ್ ಆಗಿತ್ತು
- ಮೂಸಾಪೇಟೆವರೆಗೂ ಬಸ್ ಚೇಸ್ ಮಾಡಿ ಬಸ್ ಹತ್ತಿದ್ದ
- ಕರ್ನೂಲು ಬಳಿ ಬಸ್​ ಬಂದಾಗ ಬೆಂಕಿ ದುರಂತ ನಡೆದಿತ್ತು
- ಬಸ್ ಹೊತ್ತಿ ಉರಿಯುವಾಗ ಹೊರ ಬರಲು ಪರದಾಡಿದ್ದ
- ಬಳಿಕ ಎಮರ್ಜೆನ್ಸಿ ಎಕ್ಸಿಟ್​​​​ ಮೂಲಕ ಹೊರಗೆ ಜಿಗಿದಿದ್ದ
ಕಣ್ಣಲ್ಲಿ ನೀರು ಭರಿಸುತ್ತೆ ತಾಯಿ-ಮಗಳ ದುರಂತ ಕಥೆ
ಬಸ್​ ದುರಂತದಲ್ಲಿ ಮೃತ ಪಟ್ಟ ಮೇಡಕ್ ಜಿಲ್ಲೆಯ ಸಂಧ್ಯಾರಾಣಿ ಮತ್ತು ಅವರ ಮಗಳು ಚಂದನಾ ಅವರ ಕಥೆ ಹೃದಯವಿದ್ರಾವಕವಾಗಿದೆ.
/filters:format(webp)/newsfirstlive-kannada/media/media_files/2025/10/24/ap_bus-2025-10-24-07-18-54.jpg)
ಅಮ್ಮ-ಮಗಳು ಸಜೀವ ದಹನ!
ಸಂಧ್ಯಾರಾಣಿ ಪತಿ ಮಸ್ಕತ್‌ನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದಾರೆ. ಇನ್ನು ಮಗಳು ಚಂದನಾ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಸಂಬಂಧಿಕರ ಮದುವೆ ಮತ್ತು ದೀಪಾವಳಿ ಆಚರಣೆಗಾಗಿ ಇಡೀ ಕುಟುಂಬ ಒಟ್ಟಿಗೆ ಹೈದ್ರಾಬಾದ್​ಗೆ ಬಂದಿದ್ರು. ಹಬ್ಬದ ಬಳಿಕ ಸಂಧ್ಯಾರಾಣಿ ಪತಿ ಆನಂದಕುಮಾರ್ ಮಸ್ಕತ್‌ಗೆ ತೆರಳಿದ್ರು. ಆದ್ರೆ ಜ್ವರದ ಕಾರಣ ಸಂಧ್ಯಾ ರಾಣಿ ಮತ್ತು ಚಂದನಾ ಹೈದ್ರಾಬಾದ್​ನಲ್ಲೇ ಉಳಿದಿದ್ರು.. ಜ್ವರ ಕಡಿಮೆಯಾದ ಬಳಿಕ ಮಗಳನ್ನು ಬೆಂಗಳೂರಿಗೆ ಬಿಟ್ಟು, ಮಸ್ಕತ್​ಗೆ ಹೋಗುವ ಪ್ಲಾನ್​ನೊಂದಿದೆ, ಮಗಳು ಚಂದನಾ ಜೊತೆ ಸಂಧ್ಯಾರಾಣಿ ಕಾವೇರಿ ಬಸ್​ನಲ್ಲಿ ಬೆಂಗಳೂರಿಗೆ ಹೊರಟಿದ್ರು. ಆದ್ರೆ ದುರದೃಷ್ಟವಶಾತ್​ ತಾಯಿ, ಮಗಳು ಇಬ್ಬರೂ ಸೇರಿದ್ದು ಸಾವಿನ ಮನೆ.
ಬಸ್​ ದುರಂತದಲ್ಲಿ 22 ಜನರು ಮೃತಪಟ್ಟಿದ್ದು, ಇದರಲ್ಲಿ 19 ಮಂದಿ ಗುರುತು ಪತ್ತೆಯಾಗಿದೆ. 6 ಕುಟುಂಬಗಳು ಡಿಎನ್​ಎ ಪರೀಕ್ಷೆಗೆ ಆಸ್ಪತ್ರೆಗೆ ಬಂದಿವೆ. ಅದೇನೇ ಇರಲಿ 22 ಜನರ ಜೀವ ಸಾವಿನ ಜ್ವಾಲೆಯಲ್ಲಿ ದಹಿಸಿ ಹೋಗಿದೆ. ಆದ್ರೆ, ಬಸ್​ಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಅನ್ನೋದು ಇನ್ನೂ ನಿಗೂಢವಾಗಿದ್ದು ತನಿಖೆ ಸಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us