/newsfirstlive-kannada/media/media_files/2025/10/25/mh_doctor_new-2025-10-25-07-07-28.jpg)
ಮಹಾರಾಷ್ಟ್ರದಲ್ಲಿ ನಂಬಲಸಾಧ್ಯ ಘಟನೆಯೊಂದು ನಡೆದಿದೆ. ಸತಾರಾ ಜಿಲ್ಲಾಸ್ಪತ್ರೆಯ ವೈದ್ಯೆಯೊಬ್ಬರು ತಮ್ಮ ಮೇಲೆ ಪೊಲೀಸ್ ಸಬ್ ಇನ್ಸಪೆಕ್ಟರ್ ನಾಲ್ಕು ಬಾರಿ ಅ*ಚಾರ ಎಸಗಿದ್ದಾರೆಂದು ಆರೋಪಿಸಿ ಜೀವ ಕಳೆದುಕೊಂಡಿದ್ದಾರೆ. ಈ ಘಟನೆಯಿಂದ ಇಡೀ ಮಹಾರಾಷ್ಟ್ರ ರಾಜ್ಯವೇ ಬೆಚ್ಚಿಬಿದ್ದಿದ್ದು, ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಭುಗಿಲೆದ್ದಿದೆ.
ಮಹಾರಾಷ್ಟ್ರದ ಫಾಲ್ಟನ್​ ಪಟ್ಟಣ ಹೋಟೆಲ್​ವೊಂದರ ರೂಮ್​ನಲ್ಲಿ ಮಹಿಳಾ ವೈದ್ಯೆಯ ಶವ ಪತ್ತೆ ಆಗಿತ್ತು. ಆಕೆಯ ಅಂಗೈ ಮೇಲೆ ತಮ್ಮ ಎಡ ಅಂಗೈ ಮೇಲೆ ಬರೆದಿರುವ ಡೆತ್ ನೋಟ್‌ನಲ್ಲಿ, ನನ್ನ ಸಾವಿಗೆ ಫಾಲ್ಟನ್ ಗ್ರಾಮೀಣ ಪೊಲೀಸ್ ಠಾಣೆಯ ಎಸ್‌ಐ ಗೋಪಾಲ್ ಬಡ್ನೆ ಕಾರಣ ಎಂದು ಆರೋಪಿಸಿದ್ದಾರೆ.
/filters:format(webp)/newsfirstlive-kannada/media/media_files/2025/10/25/mh_doctor-2025-10-25-07-07-41.jpg)
- ಗೋಪಾಲ್ ಬಡ್ನೆ ನನ್ನ ಮೇಲೆ 4 ಬಾರಿ ಅ*ಚಾರ ಎಸಗಿದ್ದಾನೆ
- ಎಎಸ್‌ಐ ಲಾಡಪುತ್ರೆಯಿಂದಲೂ ವೈದ್ಯೆಗೆ ನಿರಂತರ ಕಿರಿಕುಳ
- ಇಬ್ಬರೂ ನಿರಂತರವಾಗಿ ದೈಹಿಕ, ಮಾನಸಿಕ ಕಿರುಕುಳ ನೀಡಿದ್ದಾರೆ
- ಇನ್ನು 4 ಪುಟಗಳ ಡೆತ್​ನೋಟ್​ನಲ್ಲೂ ಇವೆ ಹಲವು ಆರೋಪ
- ಆರೋಪಿಗಳಿಗೆ ನಕಲಿ ಫಿಟ್‌ನೆಸ್ ಪ್ರಮಾಣಪತ್ರ ನೀಡಲು ಒತ್ತಡ
- ಸಂಸದರ ಆಪ್ತ ಸಹಾಯಕರಿಬ್ಬರ ಕಿರುಕುಳದ ಬಗ್ಗೆಯೂ ಉಲ್ಲೇಖ
- ಮನೆಯ ಮಾಲೀಕ ಪ್ರಶಾಂತ್​ ಬನಕರ್​​ನಿಂದಲೂ ದೌರ್ಜನ್ಯ
ಸಾವಿಗೂ ಮುನ್ನ ಆರೋಪಿಗೆ ಕರೆ ಮಾಡಿದ್ದ ಮಹಿಳಾ ವೈದ್ಯೆ
ಪೊಲೀಸರ ತನಿಖೆ ವೇಳೆ ವೈದ್ಯೆಯ ಆತ್ಮಹತ್ಯೆ ಬಗ್ಗೆ ಸಾಕಷ್ಟು ಆಘಾತಕಾರಿ ವಿಷ್ಯಗಳು ಬಹಿರಂಗವಾಗಿದೆ. ಆತ್ಮಹತ್ಯೆಗೆ ಶರಣಾದ ವೈದ್ಯೆ, ಸಾವಿಗೂ ಮುನ್ನ ಆರೋಪಿ ಪ್ರಶಾಂತ್​ ಬನಕರ್​ಗೆ ಕರೆ ಮಾಡಿದ್ದಳು ಅನ್ನೋದು ತಿಳಿದು ಬಂದಿದೆ. ಇನ್ನು ಎರಡು ದಿನಗಳ ಹಿಂದಷ್ಟೇ ಮೇಲಾಧಿಕಾರಿಗಳು ಕಿರಿಕುಳ ನೀಡ್ತಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರಂತೆ. ಇದಾದ ಎರಡೇ ದಿನದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಹಲವು ಅನುಮಾನ ಮೂಡಿಸಿದೆ.
ಸಿಎಂ ಫಡ್ನವೀಸ್​ ಆದೇಶದ ಮೇರೆಗೆ ಆರೋಪಿ ಎಸ್‌ಐ ಅಮಾನತು
ಇನ್ನು ಸರ್ಕಾರಿ ವೈದ್ಯೆಯ ಆತ್ಮಹತ್ಯೆ ಪ್ರಕರಣ ಮಹಾರಾಷ್ಟ್ರದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಲ್ಲೆಡೆ ಒತ್ತಾಯ ಕೇಳಿಬರುತ್ತಿದೆ. ಸದ್ಯ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಆದೇಶದ ಮೇರೆಗೆ, ಆರೋಪಿ ಎಸ್‌ಐ ಗೋಪಾಲ್ ಬಡ್ನೆನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಗೋಪಾಕ್ ಬಡ್ನೆಯನ್ನು ಬಂಧಿಸಿರುವ ಸತಾರಾ ಜಿಲ್ಲಾ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಮತ್ತೋರ್ವ ಆರೋಪಿ ಎಎಸ್‌ಐ ಲಾಡಪುತ್ರೆನನ್ನೂ ವಶಕ್ಕೆ ಪಡೆದು ವಿಚಾರಣೆ ಮಾಡಲಾಗ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 100, 200 ಅಲ್ಲ, BEL ಸಂಸ್ಥೆಯಲ್ಲಿ 300ಕ್ಕೂ ಹೆಚ್ಚು ಹುದ್ದೆಗಳು ಖಾಲಿ..ಖಾಲಿ.. ಅರ್ಜಿ ಆಹ್ವಾನ
/filters:format(webp)/newsfirstlive-kannada/media/media_files/2025/10/25/mh_doctor_1-2025-10-25-07-07-54.jpg)
ಸರ್ಕಾರಿ ವೈದ್ಯೆಯ ಆತ್ಮಹತ್ಯೆ ಮಹಾರಾಷ್ಟ್ರದ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಆತ್ಮಹತ್ಯೆ ಪತ್ರದ ಬಗ್ಗೆ ಕಾಂಗ್ರೆಸ್ ನಾಯಕರು ಆಡಳಿತಾರೂಢ ಮಹಾಯುತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ತನಿಖೆಗೆ ಆದೇಶಿಸುವುದು ಸಾಕಾಗುವುದಿಲ್ಲ. ಈ ಪೊಲೀಸ್ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರದಲ್ಲೇ ಆರಕ್ಷಕನೇ ಕೀಚಕನಾಗಿ ಮಹಿಳಾ ವೈದ್ಯೆಯನ್ನು ಕಾಡಿ, ಸಾವಿನ ಮನೆ ಸೇರುವಂತೆ ಮಾಡಿದ್ದಾನೆ. ಈ ಬಗ್ಗೆ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೇ ಸೂಕ್ತ ತನಿಖೆ ನಡೆಸುವ ಮೂಲಕ ವೈದ್ಯೆಯ ಸಾವಿಗೆ ನ್ಯಾಯ ಒದಗಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us