Advertisment

ಘೋರ ದುರಂತ; ಚಲಿಸ್ತಿದ್ದ ಬಸ್​ ಮೇಲೆ ಕುಸಿದು ಬಿದ್ದ ಬೆಟ್ಟ.. ಕಣ್ಮುಚ್ಚಿದ 18 ಪ್ರಯಾಣಿಕರು

ಬಸ್​ವೊಂದು 30 ರಿಂದ 35 ಪ್ರಯಾಣಿಕರನ್ನು ಕರೆದುಕೊಂಡು ಹರಿಯಾಣದ ರೋಹ್ಟಕ್​ನಿಂದ ಹಿಮಾಚಲ ಪ್ರದೇಶದ ಬಿಲಾಸ್ಪುರ್ ಜಿಲ್ಲೆಯ ಘುಮರ್ವಿನ್ ಪ್ರದೇಶಕ್ಕೆ ತೆರಳುತ್ತಿತ್ತು. ರಾತ್ರಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೂ ಬಸ್ ಸಂಚರಿಸುತ್ತಿತ್ತು.

author-image
Bhimappa
HP_BUS_1
Advertisment

ಶಿಮ್ಲಾ: ಧಾರಾಕಾರ ಮಳೆಯಿಂದ ಬೆಟ್ಟವೊಂದು ಖಾಸಗಿ ಬಸ್​ ಮೇಲೆ ಕುಸಿದು ಬಿದ್ದ ಪರಿಣಾಮ 18 ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. ಮೂವರನ್ನು ರಕ್ಷಣೆ ಮಾಡಲಾಗಿದೆ. ಈ ಘಟನೆಯು ಹಿಮಾಚಲ ಪ್ರದೇಶದ ಬಿಲಾಸ್ಪುರ್ ಜಿಲ್ಲೆಯಲ್ಲಿ ನಡೆದಿದೆ. 

Advertisment

ಖಾಸಗಿ ಬಸ್​ವೊಂದು 30 ರಿಂದ 35 ಪ್ರಯಾಣಿಕರನ್ನು ಕರೆದುಕೊಂಡು ಹರಿಯಾಣದ ರೋಹ್ಟಕ್​ನಿಂದ ಹಿಮಾಚಲ ಪ್ರದೇಶದ ಬಿಲಾಸ್ಪುರ್ ಜಿಲ್ಲೆಯ ಘುಮರ್ವಿನ್ ಪ್ರದೇಶಕ್ಕೆ ತೆರಳುತ್ತಿತ್ತು. ರಾತ್ರಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೂ ಬಸ್ ಸಂಚರಿಸುತ್ತಿತ್ತು. ಈ ವೇಳೆ ಘುಮರ್ವಿನ್ ಪ್ರದೇಶದ ಬಳಿ ಬರುತ್ತಿದ್ದಂತೆ ಬಸ್​ ಮೇಲೆ ಬೆಟ್ಟವೊಂದು ಕುಸಿದು ಬಿದ್ದಿದೆ. 

ಇದನ್ನೂ ಓದಿ:ಡ್ಯಾಂಗೆ ಇಳಿದಿದ್ದ ಒಂದೇ ಕುಟುಂಬದ 8 ಜನ ಕೇಸ್​.. ತುಮಕೂರು SP ಅಶೋಕ್ ಏನ್ ಹೇಳಿದ್ರು?

HP_BUS

ಇದರ ಪರಿಣಾಮವಾಗಿ ಬಸ್ ಪೂರ್ಣ​ ಬೆಟ್ಟದ ಅವಶೇಷಗಳಡಿ ಸಿಲುಕಿಕೊಂಡಿದ್ದು ಸುಮಾರು 18 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿಯ ಕಾರ್ಯಾಚರಣೆಯಿಂದ ಮೂವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಸ್ ಮೇಲೆ ಬಿದ್ದಿರುವ ಬೆಟ್ಟದ ಮಣ್ಣು, ಕಲ್ಲುಗಳನ್ನು ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಜೆಸಿಬಿಯಿಂದ ಕಲ್ಲು- ಮಣ್ಣನ್ನು ತೆಗೆಯಲಾಗುತ್ತಿದೆ.    

Advertisment

ಸದ್ಯ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಮೃತರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಜೊತೆಗೆ ಗಂಭೀರವಾಗಿ ಗಾಯಗೊಂಡ ಗಾಯಾಳುಗಳಿಗೆ 50,000 ರೂಪಾಯಿಗಳನ್ನು ಅನೌನ್ಸ್​ ಮಾಡಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

private bus Himachal Pradesh
Advertisment
Advertisment
Advertisment