/newsfirstlive-kannada/media/media_files/2025/10/07/tmk_dam_6-2025-10-07-22-10-08.jpg)
ತುಮಕೂರು: ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಮಾರ್ಕೋನಹಳ್ಳಿ ಅಣೆಕಟ್ಟು ನೀರಿನಲ್ಲಿ ಈಜಲು ಹೋಗಿದ್ದ 6 ಜನರು ಜೀವ ಕಳೆದುಕೊಂಡಿದ್ದಾರೆ. 6 ಜನರ ಪೈಕಿ ಇಬ್ಬರ ಮೃತದೇಹ ಪತ್ತೆ ಆಗಿದ್ದು, ನಾಲ್ವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕುಣಿಗಲ್ ತಾಲೂಕಿನ ಯಡಿಯೂರು ಸಮೀಪದ ಮಾರ್ಕೋನಹಳ್ಳಿ ಜಲಾಶಯದಲ್ಲಿ ಈ ಘಟನೆ ನಡೆದಿದೆ.
ಸದ್ಯ ಇದಕ್ಕೆ ಸಂಬಂಧಿಸಿದಂತೆ ತುಮಕೂರು ಎಸ್​ಪಿ ಅಶೋಕ್ ಕೆ.ವಿ ಮಾತನಾಡಿದ್ದು, ಮಾರ್ಕೋನಹಳ್ಳಿ ಅಣೆಕಟ್ಟು ನೀರಿನಲ್ಲಿ ಜೀವ ಬಿಟ್ಟವರೆಲ್ಲರೂ ತುಮಕೂರಿನ ಬಿ.ಜಿ ಪಾಳ್ಯದ ನಿವಾಸಿಗಳು. ಇಂದು ರಜೆ ದಿನವಾಗಿದ್ದರಿಂದ ಪಿಕ್​ನಿಕ್‌ಗಾಗಿ ಜಲಾಶಯಕ್ಕೆ ಬಂದಿದ್ದಾರೆ. ಸುಮಾರು 15 ಜನ ಬಂದಿದ್ದರು ಎಂಬ ಮಾಹಿತಿ ಇದೆ. ಮಕ್ಕಳ ಸಮೇತ 7 ಜನರು ಕೋಡಿ ನೀರಿನಲ್ಲಿ ಇಳಿದಿದ್ದಾರೆ ಎಂದು ಹೇಳಿದ್ದಾರೆ.
ಇವರು ನೀರಿಗೆ ಇಳಿದ ಸಂದರ್ಭದಲ್ಲೇ ಸೈಫನ್ ಸಿಸ್ಟಂನಿಂದ ಏಕಾಏಕಿ ನೀರು ಹರಿದಿದೆ. ರಭಸವಾದ ನೀರಿಗೆ ಸಿಲುಕಿದ 7 ಜನರು ಕೋಚ್ಚಿ ಹೋಗಿದ್ದರು. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಭೇಟಿ ನೀಡಿ ರಕ್ಷಣೆ ಕಾರ್ಯ ಮಾಡಿದ್ದಾರೆ. ಇವರಲ್ಲಿ ನವಾಜ್ ಎಂಬ ಓರ್ವ ಯುವಕನನ್ನ ರಕ್ಷಣೆ ಮಾಡಿ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಇಬ್ಬರ ಮೃತ ದೇಹಗಳು ಪತ್ತೆಯಾಗಿದೆ. ಉಳಿದ 4 ಜನರಿಗಾಗಿ ಹುಡುಕಾಟ ಮಾಡಲಾಗ್ತಿದೆ. ಕತ್ತಲಾಗಿರೋದ್ರಿಂದ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ. ನಾಳೆ ನಾಲ್ವರ ಮೃತ ದೇಹ ಪತ್ತೆ ಕಾರ್ಯ ಮುಂದುವರಿಯಲಿದೆ. ನವಾಜ್ ಓರ್ವನನ್ನು ಹೊರತು ಪಡಿಸಿ ಉಳಿದವರೆಲ್ಲರೂ ಹೆಣ್ಣು ಮಕ್ಕಳು, ಮಹಿಳೆಯರೇ ಆಗಿದ್ದಾರೆ ಎಂದು ಹೇಳಿದ್ದಾರೆ.
ಘಟನೆಯಲ್ಲಿ ಇಬ್ಬರು ಸಣ್ಣ ಮಕ್ಕಳಿದ್ದಾರೆ. ಉಳಿದವರ ಮೃತದೇಹ ಸಿಕ್ಕಿದ ಬಳಿಕ ಸತ್ಯಾಂಶ ತಿಳಿಯಲಿದೆ. ಡ್ಯಾಂ ಇಂಜಿಯರ್​ಗಳ ಪ್ರಕಾರ ಸ್ವಾಭಾವಿಕವಾಗಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಘಟನೆ ನಡೆದಿದೆ ಎಂದಿದ್ದಾರೆ. ಸೈಫನ್​ಗಳ ಬಗ್ಗೆ ಏನಾಗಿದೆ ಎಂಬುದು ತನಿಖೆಯಿಂದ ತಿಳಿದು ಬರಲಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ