/newsfirstlive-kannada/media/media_files/2025/07/31/ganesha_theft_new-2025-07-31-21-10-48.jpg)
ಹೈದರಾಬಾದ್: ಗಣೇಶ ಚತುರ್ಥಿ ಹಬ್ಬವು ಬರುತ್ತಿದ್ದು ಎಲ್ಲೆಡೆ ತಮ್ಮ ನೆಚ್ಚಿನ ವಿಗ್ರಹಕ್ಕಾಗಿ ಈಗಿನಿಂದಲೇ ಯುವಕರಿಂದ ಬುಕ್ಕಿಂಗ್ ನಡೆಯುತ್ತಿದೆ. ಗಣೇಶ್ ಹಬ್ಬ ಬಂದ್ರೆ ಸಾಕು ಡಿ.ಜೆ, ತಮಟೆ ಸೌಂಡ್ ಹಳ್ಳಿಯಿಂದ ನಗರಗಳವರೆಗೆ ಸದ್ದು ಮಾಡುತ್ತಿವೆ. ವಿಧವಿಧವಾದ ವಿನಾಯಕ ವಿಗ್ರಹ ನೋಡುಗ ಕಣ್ಮನ ಸೆಳೆಯುತ್ತವೆ. ಇದು ಈಗಿರುವಾಗಲೇ ರಾತ್ರೋ ರಾತ್ರಿ ಕಿಲಾಡಿಗಳು ಗಣಪತಿ ವಿಗ್ರಹವನ್ನು ಆಟೋದಲ್ಲಿ ಎತ್ತಾಕ್ಕೊಂಡು ಹೋಗಿರುವ ಘಟನೆ ನಡೆದಿದೆ.
ತೆಲಂಗಾಣದ ಮೇದಕ್ ನಗರದ ಹೊರವಲಯದಲ್ಲಿ ಗಣೇಶ ವಿಗ್ರಹಗಳ ತಯಾರಿಕರು ವಿಧ ವಿಧವಾದ ಗಣಪತಿ ಮೂರ್ತಿಗಳನ್ನು ಈಗಲೇ ತಯಾರು ಮಾಡಿ ರಸ್ತೆ ಬದಿಯಲ್ಲಿ ಇಟ್ಟಿದ್ದಾರೆ. ಆದರೆ ಈ ವಿಗ್ರಹಗಳನ್ನು ನೋಡಿದ ಕಿಲಾಡಿಗಳು ರಾತ್ರಿ ಸಮಯದಲ್ಲಿ ಆಟೋದಲ್ಲಿ ಬಂದು ಗಣಪತಿ ವಿಗ್ರಹವನ್ನು ಸೈಲೆಂಟ್ ಆಗಿಯೇ ಎತ್ತಾಕ್ಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್.. 6ನೇ ಪಾಯಿಂಟ್ನಲ್ಲಿ ಅಸ್ಥಿಪಂಜರ ಪತ್ತೆ..!
ಇನ್ನು ಬೆಳಗ್ಗೆ ಬಂದು ಗಣೇಶ ವಿಗ್ರಹ ತಯಾರಿಕರು ನೋಡಿದರೆ ಇಟ್ಟಿರುವ ಜಾಗದಲ್ಲಿ ಒಂದು ಗಣೇಶ ಮೂರ್ತಿ ಇಲ್ಲ. ಈ ಬಗ್ಗೆ ಪಕ್ಕದ ಸಿಸಿಟಿವಿಯನ್ನು ಪರಿಶೀಲನೆ ಮಾಡಿದಾಗ ಕಳ್ಳರು ಆಟೋದಲ್ಲಿ ಗಣಪತಿನ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ. ಸದ್ಯ ಈ ಸಂಬಂಧ ಗಣೇಶ ವಿಗ್ರಹ ತಯಾರಿಕರ ಮಾಲೀಕರು ಮೇದಕ್ ನಗರದ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನು ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡಿದ್ದು ದೃಶ್ಯದಲ್ಲಿ ಐವರು ದುಷ್ಕರ್ಮಿಗಳು ಆಟೋದಲ್ಲಿ ಗಣೇಶನ ಹಾಕುತ್ತಿರುವುದು ಕಂಡು ಬಂದಿದೆ. ತನಿಖೆ ಕೈಗೊಂಡಿದ್ದು ಶೀಘ್ರದಲ್ಲೇ ಆರೋಪಿಗಳನ್ನ ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ