/newsfirstlive-kannada/media/media_files/2025/10/06/cat-and-dog-2025-10-06-14-29-23.jpg)
ನಾಯಿ ಮತ್ತು ಬೆಕ್ಕಿಗಾಗಿ (Dog and Cat) ದಂಪತಿ ಡಿವೋರ್ಸ್​​​​ಗೆ ಅರ್ಜಿ ಸಲ್ಲಿಸಿದ ವಿಚಿತ್ರ ಪ್ರಕರಣವೊಂದು ಮಧ್ಯಪ್ರದೇಶದ ಭೋಪಾಲ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ದಾಖಲಾಗಿದೆ.
ಐಟಿ ವಲಯದಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರ್ ದಂಪತಿ, ಪರಸ್ಪರ ಸಮ್ಮತಿ ಮೇರೆಗೆ ಡೈವೋರ್ಸ್​ಗೆ ಅರ್ಜಿ ಸಲ್ಲಿಸಿದ್ದಾರೆ. ಗಂಡ ಮತ್ತು ಹೆಂಡತಿ ಇಬ್ಬರೂ ಪ್ರಾಣಿ ಪ್ರಿಯರು. ಸಾಕುಪ್ರಾಣಿಗಳನ್ನು ಉಳಿಸುವ ಚಳವಳಿಯಲ್ಲಿ ಭೇಟಿಯಾಗಿ ಪ್ರೀತಿಯಾಗಿತ್ತು.
ಇದನ್ನೂ ಓದಿ:ಸುಪ್ರೀಂಕೋರ್ಟ್ ನಲ್ಲಿ ಶಾಕಿಂಗ್ ಘಟನೆ: ಸಿಜೆಐ ಬಿ.ಆರ್.ಗವಾಯಿ ಮೇಲೆ ಶೂ ಎಸೆಯಲು ಯತ್ನ- ಆರೋಪಿ ವಶಕ್ಕೆ
ಪ್ರೀತಿಯ ನಂತರ ಡಿಸೆಂಬರ್ 2024 ರಲ್ಲಿ ಮದುವೆಯಾದರು. ಹುಡುಗಿ ಉತ್ತರ ಪ್ರದೇಶದವಳು ಮತ್ತು ಹುಡುಗ ಭೋಪಾಲ್‌ನವನು. ಇದೀಗ ಇವರಿಬ್ಬರ ನಡುವೆ ನಾಯಿ-ಬೆಕ್ಕಿನ ವಿಚಾರವಾಗಿ ಜಗಳ ಹೆಚ್ಚಾಗಿದೆ. ಹೆಂಡತಿಯ ಬೆಕ್ಕು ಮತ್ತು ಗಂಡನ ನಾಯಿ ಎರಡೂ ಜಗಳವಾಡ್ತಿವೆ. ಅದಕ್ಕಾಗಿಯೇ ದಂಪತಿ ವಿಚ್ಛೇದನ ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.
ವಿಷಯ ಭೋಪಾಲ್‌ನ ಕೌಟುಂಬಿಕ ನ್ಯಾಯಾಲಯಕ್ಕೆ ತಲುಪಿದ್ದು, ಕೌನ್ಸೆಲಿಂಗ್ ಮೂಲಕ ವಿವಾದ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಇಬ್ಬರು ಮದುವೆಯಾಗಿ ಎಂಟು ತಿಂಗಳು ಮಾತ್ರ ಆಗಿದೆ. ಯುವಕ ಯಾವಾಗಲೂ ಯುವತಿಗೆ ಬೆಕ್ಕು ಸಾಕೋದು ಕಷ್ಟವಾಗ್ತಿದೆ ಎಂದು ಬೈಯ್ಯುತ್ತಿದ್ದಾನಂತೆ. ನಾಯಿ ದಿನವಿಡೀ ತನ್ನ ಬೆಕ್ಕನ್ನು ನೋಡಿ ಬೊಗಳುತ್ತಲೇ ಇರುತ್ತದೆ ಎಂದು ಹೆಂಡತಿ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾಳೆ. ನಾಯಿ ಬೆಕ್ಕಿನ ವಿವಾದದಿಂದ ಬೇಸತ್ತು ದಂಪತಿ ಪರಸ್ಪರ ವಿಚ್ಛೇದನ ಪಡೆಯಲು ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ: ದರ್ಶನ್​​ಗೆ ಮತ್ತೊಂದು ಸಂಕಷ್ಟ ದಟ್ಟವಾಗಿದೆ.. ಪೊಲೀಸರಿಂದ ಮಹತ್ವದ ನಿರ್ಧಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ