/newsfirstlive-kannada/media/media_files/2025/08/01/lpg-cylinder-price-1-2025-08-01-11-28-43.jpg)
ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸಿವೆ. ಪರಿಷ್ಕೃತ ದರವು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕೆಲವು ವಾಹನಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡಲಾಗಿದೆ.
19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ 33.50 ರೂ.ಗಳಷ್ಟು ಕಡಿಮೆ ಮಾಡಲು ತೈಲ ಕಂಪನಿಗಳು ನಿರ್ಧರಿಸಿವೆ. ದೇಶದ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ರೂ. 1631.50 ಕ್ಕೆ ಲಭ್ಯವಿದೆ. ಮನೆಗಳಲ್ಲಿ ಬಳಸುವ 14.2 ಕೆಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ.
ಇದನ್ನೂ ಓದಿ: ಅಭಿಮಾನಿಗಳ ಪಿತ್ತ ನೆತ್ತಿಗೇರಿಸಿದ ಕೊಹ್ಲಿಯ ಅಣ್ಣ.. ವಿರಾಟ್ ವಿರುದ್ಧವೂ ನಿಗಿನಿಗಿ ಕೆಂಡ.. ಆಗಿದ್ದೇನು?
19 ಕೆಜಿ ಸಿಲಿಂಡರ್ ಬೆಲೆ ಕೋಲ್ಕತ್ತಾದಲ್ಲಿ 1631.50 ರೂ ಇದ್ದರೆ ಮುಂಬೈನಲ್ಲಿ 1582.50 ರೂಪಾಯಿ ಇದೆ. ಚೆನ್ನೈನಲ್ಲಿ 1789 ರೂಪಾಯಿ ಆಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಈ ಸಿಲಿಂಡರ್ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿದೆ. ಕಳೆದ ಮಾರ್ಚ್‌ನಲ್ಲಿ ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1803 ರೂಪಾಯಿ ಇತ್ತು. ಏಪ್ರಿಲ್‌ನಲ್ಲಿ 1762 ರೂ., ಮೇನಲ್ಲಿ 1747.50 ರೂ, ಜೂನ್‌ನಲ್ಲಿ 1723.50 ರೂ ಮತ್ತು ಜುಲೈನಲ್ಲಿ 1665 ರೂಗೆ ಬಂದು ನಿಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ