/newsfirstlive-kannada/media/media_files/2025/09/02/maratha-quota-activist-2025-09-02-22-12-02.jpg)
ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಮರಾಠಾ ಮೀಸಲಾತಿಗಾಗಿ ಪ್ರತಿಭಟಿಸಲು ಬಂದಿದ್ದ ಮನೋಜ್ ಜರಂಗೇಗೆ ದೊಡ್ಡ ಗೆಲುವು ಸಿಕ್ಕಿದೆ. ಸರ್ಕಾರ ‘ಹೈದರಾಬಾದ್ ಗೆಜೆಟ್’ ಬಿಡುಗಡೆ ಮಾಡಿದೆ. ಇದರರ್ಥ ಮರಾಠಾ ಸಮುದಾಯದ ಜನ ‘ಕುನ್ಬಿ ಜಾತಿ’ಯ ಸ್ಥಾನಮಾನ ಪಡೆಯುತ್ತಾರೆ.
ಕುನ್ಬಿ ಸಮುದಾಯವನ್ನು ಮಹಾರಾಷ್ಟ್ರದಲ್ಲಿ ಒಬಿಸಿಯಲ್ಲಿ ಸೇರಿಸಲಾಗಿದೆ. ಸರ್ಕಾರದ ಈ ನಿರ್ಧಾರದೊಂದಿಗೆ ಮರಾಠರು ಮೀಸಲಾತಿ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದಾರೆ. ಸರ್ಕಾರದ ಈ ಕ್ರಮದಿಂದ ಮರಾಠಾ ಸಮುದಾಯಕ್ಕೆ ಅನೇಕ ಅವಕಾಶಗಳಿಗೆ ದಾರಿ ಸಿಕ್ಕಂತಾಗಿದೆ.
ಪ್ರತಿಭಟನೆಯ ರೂವಾರಿ ಮನೋಜ್ ಜರಂಗೆ, ಸರ್ಕಾರಕ್ಕೆ ಷರತ್ತುಗಳನ್ನು ವಿಧಿಸಿದ್ದರು. ಇವುಗಳಲ್ಲಿ ಪ್ರಮುಖವಾದದ್ದು ಮರಾಠಾ ಸಮುದಾಯವನ್ನು ಕುನ್ಬಿ ಜಾತಿಗೆ ಸೇರಿಸಬೇಕೆಂಬ ಬೇಡಿಕೆ. ಇದೀಗ ಸರ್ಕಾರ ಗೆಜೆಟ್ ಹೊರಡಿಸಿದೆ. ಬೆನ್ನಲ್ಲೇ ಜರಂಗೆ ಅಮರಣಾಂತ ಉಪವಾಸ ಕೊನೆಗೊಳಿಸಿ ಅಲ್ಲಿಂದ ಹೊರಟಿದ್ದಾರೆ.
ಮನೋಜ್ ಜರಂಗೇ ಬೇಡಿಕೆ ಏನಾಗಿತ್ತು?
ಮನೋಜ್ ಜರಂಗೇ ಪಾಟೀಲ್ ಶೇಕಡಾ 10 ರಷ್ಟು ಮೀಸಲಾತಿಗಾಗಿ ಉಪವಾಸ ಸತ್ಯಾಗ್ರಹ ಮಾಡ್ತಿದ್ದಾರೆ. ಮರಾಠರನ್ನು ಕುನ್ಬಿ (kunbi caste) ಜಾತಿ ಎಂದು ಗುರುತಿಸಬೇಕೆಂದು ಒತ್ತಾಯಿಸಿದ್ದರು. ಈ ಕುನ್ಬಿಗಳು ಒಬಿಸಿ ವರ್ಗದ ಅಡಿಯಲ್ಲಿ ಬರುತ್ತಾರೆ. ಇದರಿಂದ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುತ್ತದೆ. ಮರಾಠವಾಡ ಪ್ರದೇಶದ ಮರಾಠರನ್ನು ಕುನ್ಬಿ ಎಂದು ಘೋಷಿಸಬೇಕು, ಮೀಸಲಾತಿ ನೀಡಬೇಕು. ಹೈದರಾಬಾದ್ ಮತ್ತು ಸತಾರಾದ ಗೆಜೆಟ್ ಅಧಿಸೂಚನೆಯನ್ನು ಕಾನೂನನ್ನಾಗಿ ಮಾಡಬೇಕು ಅನ್ನೋದು ಆಗ್ರಹವಾಗಿತ್ತು.
ಇದನ್ನೂ ಓದಿ:‘ಮರಾಠಾ ಮೀಸಲಾತಿ’ ಕಿಚ್ಚಿಗೆ ಇಡೀ ಮುಂಬೈ ಉದ್ವಿಗ್ನ; ಹೈಕೋರ್ಟ್ ಬೇಸರ, ಏನಿದು ಹೋರಾಟ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ