/newsfirstlive-kannada/media/media_files/2025/09/18/bengalore-rain-2-2025-09-18-06-47-03.jpg)
ಹೋದೆಯಾ ಗವಾಕ್ಷಿ ಅಂದ್ರೆ ಬಂದೆ ಮೀನಾಕ್ಷಿ ಅನ್ನೋ ಹಾಗೆ ಮಳೆರಾಯನ ಕಾಟ ಮುಗೀತು ಅನ್ನೋ ಹೊತ್ತಿಗೆ ಚಂಡಮಾರುತದ ಭೀತಿ ಎದುರಾಗಿದೆ. ಮೋಂತಾ ಎಂಬ ಹೆಸರಿನಿಂದ ಲಗ್ಗೆ ಇಡಲು ಸಜ್ಜಾಗಿರೋ ಚಂಡಮಾರುತವೊಂದು ಮೂರು ರಾಜ್ಯಗಳಿಗೆ ತೂಗುಗತ್ತಿಯಾಗಿದೆ.
ವರುಣನ ಆರ್ಭಟದಿಂದ ತತ್ತರಿಸಿದ್ದ ಜನರಿಗೆ ಸದ್ಯ ಮತ್ತೊಂದು ಆಘಾತ ಎದುರಾಗಿದೆ. ಮಳೆ ಮುಗೀತು ಅಂತ ನಿಟ್ಟುಸಿರು ಬಿಟ್ಟ ಅನ್ನದಾತರಿಗೆ ಬಂಗಾಳಕೊಲ್ಲಿಯಿಂದ ಕಹಿ ಸುದ್ದಿಯೊಂದು ಬಂದಿದೆ. ಮತ್ತೆ ರೈತರ ಬದುಕು ಮುರಾಬಟ್ಟೆಯಾಗೋ ಸೂಚನೆ ಸಿಕ್ಕಿದೆ.
/filters:format(webp)/newsfirstlive-kannada/media/media_files/2025/10/27/montha_cyclone_1-2025-10-27-07-02-05.jpg)
ಭಾರತದ ಪೂರ್ವ ಕರವಾಳಿ ಭಾಗಕ್ಕೆ ನಾಳೆ ಮೋಂತಾ ಲಗ್ಗೆ!
ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಮೋಂತಾ ಚಂಡಮಾರುತವು ಭಾರತದ ಪೂರ್ವ ಕರಾವಳಿಯತ್ತ ಲಗ್ಗೆ ಇಡಲು ಸಜ್ಜಾಗಿದೆ. ಭಾರತೀಯ ಹವಮಾನ ಇಲಾಖೆ ಪ್ರಕಾರ, ನಾಳೆ ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಕಾಕಿನಾಡ ಬಾಳಿ ಭೂಮಿಗೆ ಅಪ್ಪಳಿಸುವ ನಿರೀಕ್ಷೆ ಇದೆ.
‘ಮೋಂತಾ’ ಭೀತಿ!
- ಗಂಟೆಗೆ 90-100 ಕಿ.ಮೀ ವೇಗದಲ್ಲಿ ಮೋಂತಾ ಚಂಡಮಾರುತ ಎಂಟ್ರಿ
- ಇಂದಿನಿಂದ ಅಕ್ಟೋಬರ್ 29ರವರೆಗೂ ಭಾರೀ ಮಳೆ ಸಾಧ್ಯತೆ ಇದೆ
- ‘ಮೋಂತಾ’ ಅಕ್ಟೋಬರ್​ 28ರಂದು ಕರಾವಳಿಯ ದಾಟುವ ಸಂಭವ
- ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮೋಂತಾ ಉಗಮ
- ಇಂದಿನಿಂದ ಅಕ್ಟೋಬರ್​ 29ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆ
- ಕರ್ನಾಟಕದ ಮೇಲೂ ಪರಿಣಾಮ, ಭಾರೀ ಮಳೆಯಾಗೋ ಸಾಧ್ಯತೆ
- ಭೂಕುಸಿತ, ಪ್ರವಾಹ & ಇತರ ವಿಪತ್ತುಗಳಿಗೆ ಕಾರಣವಾಗುವ ಸಾಧ್ಯತೆ
/filters:format(webp)/newsfirstlive-kannada/media/media_files/2025/10/27/montha_cyclone-2025-10-27-07-02-23.jpg)
ಆಂಧ್ರ, ಒಡಿಶಾ ಮತ್ತು ತಮಿಳುನಾಡಿನಲ್ಲಿ ಹೈ ಅಲರ್ಟ್​
ಮೋಂತಾ ಚಂಡಮಾರುತವನ್ನ ಎದುರಿಸಲು ಆಂಧ್ರ, ಒಡಿಶಾ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಾದ ಕಾಕಿನಾಡ, ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂನಲ್ಲಿ ಚಂಡಮಾರುತದ ಪರಿಣಾಮವು ತೀವ್ರವಾಗಿರಲಿದೆ. ಈ ಹಿನ್ನೆಲೆ ಆಂಧ್ರಪ್ರದೇಶದ ವಿಪತ್ತು ನಿರ್ವಹಣಾ ತಂಡಗಳನ್ನು ಸಂಪೂರ್ಣ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಇಂದಿನಿಂದ ರಾಯಲಸೀಮಾದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕೃಷಿಕರು ಮತ್ತು ಮೀನುಗಾರರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ. ಒಡಿಶಾ ರಾಜ್ಯದ ಒಂಬತ್ತು ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ ಜಾರಿಯಲ್ಲಿದೆ. ಒಡಿಶಾದ 30 ಜಿಲ್ಲೆಗಳ ಪೈಕಿ 16 ಜಿಲ್ಲೆಗಳು ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕೋ ಸಾಧ್ಯತೆ ಇದೆ. ಕೋರಾಪುಟ್, ಗಂಜಾಂ, ಮತ್ತು ಬಾಲಸೋರ್‌ನಂತಹ ಸೂಕ್ಷ್ಮ ಜಿಲ್ಲೆಗಳಲ್ಲಿ ಸರ್ಕಾರಿ ನೌಕರರ ರಜೆಗಳನ್ನು ರದ್ದುಗೊಳಿಸಲಾಗಿದೆ. ತಮಿಳುನಾಡಿನಲ್ಲೂ ಹವಾಮಾನ ಇಲಾಖೆಯು ಕರಾವಳಿಯ ಜನರಿಗೆ ಸುರಕ್ಷಿತ ಸ್ಥಳಗಳಲ್ಲಿ ಉಳಿಯುವಂತೆ ಸೂಚನೆ ನೀಡಿದ್ದು, ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
ಹೋದ್ಯ ಗವಾಕ್ಷಿ ಅಂದ್ರೆ ಬಂದೆ ಮೀನಾಕ್ಷಿ ಅನ್ನೋ ಹಾಗೆ ಮಳೆರಾಯನ ಕಾಟ ಮುಗೀತು ಅನ್ನೋ ಹೊತ್ತಿಗೆ ಚಂಡಮಾರುತದ ಭೀತಿ ಎದುರಾಗಿದೆ.. ಮೋಂತಾ ಚಂಡಮಾರುತದಿಂದ ಜನರಿಗೆ, ಅನ್ನದಾತರಿಗೆ ಅದೇನೇನ್​ ಸಂಕಷ್ಟ ಕಾದಿದ್ಯೋ ಆ ದೇವರೇ ಬಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us