/newsfirstlive-kannada/media/media_files/2025/10/14/bus_fire_1-2025-10-14-20-29-39.jpg)
ಜೈಪುರ್: ಚಲಿಸುತ್ತಿರುವ ಬಸ್​ಗೆ ಬೆಂಕಿ ಹೊತ್ತಿಕೊಂಡು 20 ಪ್ರಯಾಣಿಕರು ಉಸಿರು ಚೆಲ್ಲಿರುವ ಘಟನೆ ರಾಜಸ್ತಾನನ ಜೈಸಲ್ಮೇರ್-–ಜೋಧಪುರ ಹೆದ್ದಾರಿಯಲ್ಲಿ ನಡೆದಿದೆ. ಸದ್ಯ ಬಸ್​ ಬೆಂಕಿಯಲ್ಲಿ ಧಗ ಧಗಿಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಆತಂಕ ಮೂಡಿಸುವಂತೆ ಇದೆ.
ಖಾಸಗಿ ಸ್ಲೀಪರ್​ ಕೋಚ್​ ಬಸ್​ನಲ್ಲಿ ಸುಮಾರು 57 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಜೈಸಲ್ಮೇರ್-–ಜೋಧಪುರ ಹೆದ್ದಾರಿಯಲ್ಲಿ​ ಸಂಚರಿಸುವಾಗ ಬಸ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನೋಡು ನೋಡುತ್ತಿದ್ದಂತೆ ಕ್ಷಣಾರ್ಧದಲ್ಲೇ ಇಡೀ ಬಸ್​ ಅನ್ನು ಬೆಂಕಿ ವ್ಯಾಪಿಸಿದ್ದರಿಂದ ಒಳಗಿದ್ದ ಸುಮಾರು 20 ಪ್ರಯಾಣಿಕರು ಜೀವ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಘಟನೆಯಲ್ಲಿ ಸುಮಾರು 16 ಪ್ರಯಾಣಿಕರಿಗೆ ಗಂಭೀರವಾದ ಸುಟ್ಟ ಗಾಯಗಳು ಆಗಿದ್ದು ಇದರಲ್ಲಿ ಎರಡು ಮಕ್ಕಳು ಹಾಗೂ 4 ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಗಾಯಾಳುಗಳನ್ನು ಆ್ಯಂಬುಲೆನ್ಸ್​ ಮೂಲಕ ಜೈಸಲ್ಮೇರ್ ನಗರದ ಜವಾಹರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವೊಬ್ಬ ಗಾಯಾಳುಗಳ ದೇಹ ಶೇ.70 ರಷ್ಟು ಸುಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಜೋಧ್​ಪುರಕ್ಕೆ ಕಳುಹಿಸಿಕೊಡಲಾಗಿದೆ ಎನ್ನಲಾಗುತ್ತಿದೆ.
ಬಸ್ಸಿನಲ್ಲಿ 57 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು ಎಂದು ನಗರ ಸಭೆಯ ಸಹಾಯಕ ಅಗ್ನಿಶಾಮಕ ಅಧಿಕಾರಿ ಕ್ರಿಶನ್‌ಪಾಲ್ ಸಿಂಗ್ ರಾಥೋಡ್ ತಿಳಿಸಿದ್ದಾರೆ. ಬೆಂಕಿಯಲ್ಲಿ 18 ರಿಂದ 20 ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಬೆಂಕಿ ಅನಾಹುತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ನಿರ್ದಿಷ್ಟ ಕಾರಣ ತನಿಖೆಯ ನಂತರವೇ ತಿಳಿದು ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ